ದುಗುಡ ಕಳೆಯುವ ಜೋಕಮಾರ ಸ್ವಾಮಿ ಆರಾಧನೆ ಹಾಗೂ ವಿಶೇಷ ಪೂಜೆ
Worship and special puja of Jokamara Swami
ಗದಗ 07: ಅವಳಿ ನಗರವಾದ ಗದಗ ಬೆಟಗೇರಿ ನಗರದ ಬೆಟಗೇರಿಯ ತೆಗ್ಗಿನಪೇಟೆಯಲ್ಲಿರುವ ರಾಮಚಂದ್ರ ದೇವೇಂದ್ರ್ಪ ಬಾರಕೇರ ಅವರ ಮನೆಯಲ್ಲಿ ಸಮುದಾಯದ ಮಹಿಳೆಯರು ದುಗುಡ ಕಳೆಯುವ ಜೋಕಮಾರ ಸ್ವಾಮಿ ಆರಾಧನೆ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಜೋಕಮಾರನನ್ನ ಪುಟ್ಟಿಯಲ್ಲಿ ಕೂಡಿಸಿಕೊಂಡು ಜೋಕಮಾರನ ವರ್ಣನೆಯ ಜನಪದ ಗೀತೆಗಳನ್ನು ಲಯಬದ್ಧವಾಗಿ ನುಡಿಯುತ್ತಾ ನಗರದ ವಿವಿಧ ಬಡಾವಣೆಯಲ್ಲಿ ತಿರುಗಾಡುತ್ತಾರೆ. ಜೋಕಮಾರ ಮನೆ ಎದರು ಪ್ರತ್ಯಕ್ಷ ವಾದಾಗ ಅಕ್ಕಿ ಇನ್ನಿತರ ಬಗೆಯ ಕಾಳು ಕಡಿಯನ್ನ ಅರ್ಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಗಂಗಾಮತಸ್ಥರ ಮೂಲ ಸಂಸ್ಕೃತಿಯ ಸಂಪ್ರದಾಯ ಮುಂದುವರಿಸಿಕೊಂಡು ಹೊಗುತ್ತಿರುವ ಸಮುದಾಯದ ಮಹಿಳೆಯರಿಗೆ ಅಭಿನಂದಿಸಿ ಮಾತನಾಡಿದ ಅಂಬಿಗ ಸಮುದಾಯದ ಪ್ರಧಾನ ಕಾರ್ಯದರ್ಶಿಯಾದ ಸಂಗಮೇಶ ಹಾದಿಮನಿ ಯವರು ಜೋಕಮಾರ ನ ಹಾಡಿನ ವರ್ಣನೆಯ ಜನಪದ ಶೈಲಿ ವಿಶಿಷ್ಟವಾಗಿದ್ದು ಎಂದರು
ರಾಮಚಂದ್ರ ಬಾರಕೇರ. ರವಿ ಬಾರಕೇರ ಶೇಖವ್ವ ಬಾರಕೇರ ಚಂದ್ರಕಾಂತ ಬಾರಕೇರ ಸಮುದಾಯದ ಮಹಿಳೆಯರಾದ ಸಕ್ರಮ್ಮ ಜಾಲಗಾರ ಕಮಲಮ್ಮ ಕದಡಿ ರೂಪಾ ಜಾಲಗಾರ ಶಿವಮ್ಮ ಕದಡಿ ಶಾಂತಕ್ಕ ಕದಡಿ ಜೋಕಮಾರನ ಹಾಡನ್ನ ಲಯ ಬದ್ದವಾಗಿ ಹಾಡಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 