ವಾಷಿಂಗ್ಟನ್, ಏಪ್ರಿಲ್ 30,ವಿಶ್ವಾದ್ಯಂತ ಕೊರೊನಾವೈರಸ್ (ಸಿಒವಿಐಡಿ -19)ನ ಪ್ರಕರಣಗಳು 30 ಲಕ್ಷ ಮೀರಿದ್ದು, ಸುಮಾರು 208,000 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ. ಜಾಗತಿಕವಾಗಿ 66,276 ಪ್ರಕರಣಗಳ ಏರಿಕೆಯೊಒಂದಿಗೆ ದೃಢಪಟ್ಟಿರುವ ಒಟ್ಟು ಪ್ರಕರಣಗಳ ಸಂಖ್ಯೆ 3,018,952 ಕ್ಕೆ ಏರಿದ್ದು, ಸಾವಿನ ಸಂಖ್ಯೆ 5,376 ರಷ್ಟು ಏರಿಕೆಯಾಗಿ 207,973 ಕ್ಕೆ ತಲುಪಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.ಸೋಂಕಿನ ಹೆಚ್ಚಿನ ಪ್ರಕರಣಗಳು ಯುರೋಪಿನಲ್ಲಿ ಅತಿಹೆಚ್ಚು (1,406,899) ವರದಿಯಾಗಿದ್ದು, ಸಾವಿನ ಸಂಖ್ಯೆ 129,311 ಕ್ಕೆ ಏರಿದೆ ಎಂದು ಸಂಸ್ಥೆ ಹೇಳಿದೆ.ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿಯಂತೆ ಜಾಗತಿಕವಾಗಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 3,179,494ರಷ್ಟಿದ್ದು, ಸಾವಿನ ಸಂಖ್ಯೆ 226,771ಕ್ಕೆ ಏರಿಕೆಯಾಗಿದೆ.ಇದುವರೆಗೆ 970,673 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.