ಮಾಸ್ಕೋ, ಎಪ್ರಿಲ್ 3, ವಿಶ್ವಾದ್ಯಂತ ಕರೋನವೈರಸ್ ರೋಗದ ದೃಢಪಟ್ಟ ಪ್ರಕರಣಗಳ ಸಂಖ್ಯೆ 900,306ಕ್ಕೆ ಏರಿದ್ದು, ಮಾರಕ ಸೋಂಕಿನಿಂದ 45,693 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗುರುವಾರ ತಿಳಿಸಿದೆ.ಡಬ್ಲ್ಯುಎಚ್‌ಒ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಸುಮಾರು 5,000 ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.
ಇದೇ ವೇಳೆ, ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿಯಂತೆ ವಿಶ್ವಾದ್ಯಂತ ದೃಢಪಟ್ಟ ಪ್ರಕರಣಗಳ ಸಂಖ್ಯೆ ಈಗಾಗಲೇ 1,002,159 ಕ್ಕೆ ತಲುಪಿದ್ದು, 51,485 ಮಂದಿ ಸಾವನ್ನಪ್ಪಿದ್ದಾರೆ.