ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಯೋಗ ದಿನ ಆಚರಣೆ

ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಯೋಗ  ದಿನ ಆಚರಣೆ World Yoga Day celebrated at Ghanmatheshwar Educational Institute

ತಾಳಿಕೋಟೆ 22: ಪಟ್ಟಣದ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ ನಿಮಿತ್ಯ  ಶನಿವಾರ  21/06/2025  ರಂದು ಆಚರಿಸಲಾಯಿತು.  

ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ಶಾಂತಿ ಸಹಬಾಳ್ವೆಯ ಬದುಕು ರೂಢಿಸಿಕೊಳ್ಳಲು ಸಾಧ್ಯ ಎಂದು ಪ್ರಾಚಾರ್ಯರು  ಬೆಸ್ಟ ಪಿಯು ಕಾಲೇಜ  ಶ್ರೀ ಬಿ.ಎಸ್ ಮಾಲಿಪಾಟೀಲ್  ತಿಳಿಸಿದರು.  

ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್‌.ಎಂ.ಸಜ್ಜನ ಅವರು ಪಟ್ಟಣ ಘನಮಠೇಶ್ವರ ಶಿಕ್ಷಣ ಸಂಸ್ಥೆಯ  ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 5 ಸಾವಿರ ವರ್ಷಗಳ ಸುದೀರ್ಘ ಇತಿಹಾಸದ ಯೋಗವನ್ನು ಜಗತ್ತಿಗೆ ಪರಿಚಯಿಸಿದ ಹಿರಿಮೆಯನ್ನು ಭಾರತ ಹೊಂದಿದೆ ಎಂದರು.   

ಎಲ್ಲಾ ಮುದ್ದು ಮಕ್ಕಳು  ವಿಶ್ವ ಯೋಗ   ದಿನಾಚರಣೆ  ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಆರ್‌.ಎಸ್‌.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯು ಕಾಲೇಜ್ ಪ್ರಾಚಾಯ ಬಿ.ಎಸ್ ಮಾಲಪಾಟೀಲ್ ಸಿಬಿಎಸ್‌ಇ ಪ್ರಾಚಾರ್ಯರು ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯರು  ಶ್ರೀಮತಿ ಜಿ.ಎನ್‌.ಪಾಟೀಲ, ಆಯ್‌.ಟಿ.ಆಯ್‌.ಕಾಲೇಜ್ ರಾಜು ಹಜೇರಿ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.