ವಿಶ್ವ ಕ್ಷಯ ರೋಗ ದಿನ

ವಿಶ್ವ  ಕ್ಷಯ ರೋಗ ದಿನ   World Tuberculosis Day

ಲೋಕದರ್ಶನ ವರದಿ 

ಬೆಳಗಾವಿ  27:    ಎಫ್‌.ಪಿ .ಎ .ಐ  ಬೆಳಗಾವಿ  ಶಾಖೆ, ಜಿಲ್ಲ್ಲ ಟಿ,ಬಿ  ನಿವಾರಣಾ  ಕೇಂದ್ರ  ವಡಗಾವಿ ಹಾಗೂ ವಿನಯ  ಹುಬ್ಬಳ್ಳಿ  ಕಾಲೇಜ  ಆವ್  ನರ್ಸಿಂಗ್ ಬೆಳಗಾವಿ ಇವರ  ಸಹಯೋಗದೊಂದಿಗೆ   ವಿನಯ  ಹುಬ್ಬಳ್ಳಿ    ನರ್ಸಿಂಗ್  ಕಾಲೇಜಿನಲ್ಲಿ ವಿಶ್ವ  ಕ್ಷಯ ರೋಗ ದಿನವನ್ನು  ಅವಲೋಕಿಸಲಾಯಿತು.    ಈ ಕಾರ್ಯ ಕ್ರಮವನ್ನು  ವೇದಿಕೆಯ ಮೇಲಿನ ಗಣ್ಯರು  ಸಸಿಗೆ ನೀರೆರೆಯುವ  ಮೂಲಕ   ಚಾಲನೆ  ನೀಡಿದರು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಅಗಮಿಸಿದ   ಡಾ. ವಿ.ಸಿ  ಬಾವಡೆಕರ  ಅಧ್ಯಕ್ಷರು   ಎಫ್‌.ಪಿ.ಎ ಐ. ಬೆಳಗಾವಿ ಶಾಖೆ  ಇವರು  ಮಾತನಾಡುತ್ತಾ "ಹೌದು! ನಾವು ಟಿಬಿಯನ್ನು ಕೊನೆಗೊಳಿಸಬಹುದು!" ಎಂಬ 2026ರ ಘೋಷವಾಕ್ಯವನ್ನು ಹೇಳುತ್ತಾ  ಕ್ಷಯರೋಗ (ಖಿಃ) ಎಂದರೇನು? ’ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್‌’ ಎಂಬ ಬ್ಯಾಕ್ಟೀರಿಯಾದಿಂದ ಬರುವ ಈ ಕಾಯಿಲೆ, ಹೆಚ್ಚಾಗಿ ನಮ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಮ್ಮು, ಸೀನಿನ ಮೂಲಕ ಗಾಳಿಯಲ್ಲಿ ಹರಡುವ ಸಾಂಕ್ರಾಮಿಕ  ರೋಗ,  ಆದರೆ ಸರಿಯಾದ  ಚಿಕಿತ್ಸೆಯಿಂದ ಸಂಪೂರ್ಣ ಗುಣಪಡಿಸಬಹುದು. ಎಂದು ಪಿ ಪಿ ಟಿ  ಮೂಲಕ  ವಿವರಿಸಿದರು.  

ಮುಖ್ಯ  ಅತಿಥಿಗಳಾಗಿ ಆಗಮಿಸಿದ,  ಡಾ    ಚಾಂದನಿ  ಜಿ  ದೇವಡಿ  ಜಿಲ್ಲಾ  ಟಿ. ಬಿ.  ಅಧಿಕಾರಿಗಳು,  ಟಿ,ಬಿ  ನಿವಾರಣಾ  ಕೇಂದ್ರ ಇವರು  ಮಾತನಾಡುತ್ತಾ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವ  ಕ್ಷಯ ರೋಗ ದಿನ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ಕಾಯಿಲೆಯನ್ನು ಜಗತ್ತಿನಿಂದ ತೊಡೆದು ಹಾಕಲು ನಾವೆಲ್ಲರೂ ಈ ದಿನವನ್ನು ಆಚರಿಸುತ್ತಿದ್ದೇವೆ. ಕ್ಷಯರೋಗದ ಪ್ರಮುಖ ಲಕ್ಷಣಗಳು, 3 ವಾರಗಳಿಗಿಂತ ಹೆಚ್ಚು ಕಾಲ ನಿರಂತರ ಕೆಮ್ಮು. ಕೆಮ್ಮಿನೊಂದಿಗೆ ರಕ್ತ ಬರುವುದು, ಎದೆ ನೋವು ಮತ್ತು ಉಸಿರಾಟದ ತೊಂದರೆ. ರಾತ್ರಿ ವಿಪರೀತ ಬೆವರುವುದು ಮತ್ತು ತೂಕ  ಕಡಿಮೆಯಾಗುವುದು.   ಈ ಲಕ್ಷಣಗಳು  ಕಂಡು ಬಂದಲ್ಲಿ  ಸರ್ಕಾರಿ  ಆಸ್ಪತ್ರಗೆ  ಭೇಟಿ  ಚಿಕಿತ್ಸೆ  ಪಡೆಯಬೇಕೆಂದು ತಿಳಿಸಿದರು. ಟಿ. ಬಿ. ಅಸಾಧ್ಯವಾದ ಕಾಯಿಲೆಯಲ್ಲ, ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಎಂದು ಪಿ ಪಿ ಟಿ  ಮೂಲಕ  ವಿವರಿಸಿದರು.  

  ಸಂಪನ್ಮೂಲ  ವ್ಯಕ್ತಿಗಳಾಗಿ  ಅಗಮಿಸಿದ  ಶ್ರೀ. ಪರಶುರಾಮ  ಪಾಟೀಲ;  ಜಿಲ್ಲಾ ಮೇಲ್ವಿಚಾರಕರು  ಟಿ ಬಿ  ವಿಭಾಗ ಇವರು  ಮಾತನಾಡುತ್ತಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ’ಡಾಟ್ಸ್‌’ ಚಿಕಿತ್ಸೆಯ ಮೂಲಕ ಉಚಿತವಾಗಿ ಓಷಧ ಪಡೆಯಬಹುದು. ಆದರೆ, ಮುಖ್ಯವಾದ ವಿಷಯವೆಂದರೆ ವೈದ್ಯರು ಸೂಚಿಸಿದ ಕೋರ್ಸ್‌ ಅನ್ನು ಮಧ್ಯದಲ್ಲಿ ನಿಲ್ಲಿಸದೆ, ಸಂಪೂರ್ಣವಾಗಿ ಪೂರ್ಣಗೊಳಿಸಬೇಕು, ಎಂದು ತಿಳಿಸಿದರು.  ಈ  ಕಾರ್ಯಕ್ರಮದ  ಅಧ್ಯಕ್ಷರು  ಹಾಗೂ    ಕಾಲೇಜಿನ  ಪ್ರಾಂಶುಪಾಲರಾದ  ಶ್ರೀಮತಿ ಶಾಂತಮರೈ ರಾಣಿ  ಇವರು  ಮಾತನಾನಾಡುತ್ತಾ  2026ರ ಥೀಮ್‌: "ಹೌದು! ನಾವು ಟಿಬಿಯನ್ನು ಕೊನೆಗೊಳಿಸಬಹುದು!" ಈ ವರ್ಷದ ಘೋಷವಾಕ್ಯವು ನಮ್ಮಲ್ಲಿ ಭರವಸೆ ಮೂಡಿಸುತ್ತದೆ. ಸರಿಯಾದ ಪೌಷ್ಟಿಕ ಆಹಾರ, ಸ್ವಚ್ಛತೆ ಮತ್ತು ಆರಂಭಿಕ ಚಿಕಿತ್ಸೆಯಿಂದ ನಾವು ಟಿ ಬಿ ಯನ್ನು ಓಡಿಸಬಹುದು. ಟಿಬಿ ರೋಗಿಗಳೊಂದಿಗೆ ತಾರತಮ್ಯ ಮಾಡದೆ, ಅವರಿಗೆ ಧೈರ್ಯ ತುಂಬೋಣ.  ನಾವೆಲ್ಲರೂ ಕೈಜೋಡಿಸಿ "ಟಿ ಬಿ ಮುಕ್ತ ಭಾರತ" ನಿರ್ಮಿಸೋಣ. ಎಂದು  ವಿದ್ಯಾರ್ಥಿಗಳಿಗೆ  ಕರೆ  ನೀಡಿದರು.   ಈ  ಕಾರ್ಯಕ್ರಮ  ವಿದ್ಯಾರ್ಥಿಗಳಿಗೆ ತುಂಬಾ  ಉಪಯುಕ್ತವಾಗಿದೆ  ಎಂದು  ಅಭಿಪ್ರಾಯ ಪಟ್ಟರು.  ಈ  ಕಾರ್ಯಕ್ರಮದಲ್ಲಿ ಶ್ರೀ ವಿ.ಎಸ  ವಾಲಿ, ಆಡಳಿತಾಧಿಕಾರಿಗಳು, ವಿನಯ  ಹುಬ್ಬಳ್ಳಿ    ನರ್ಸಿಂಗ್  ಕಾಲೇ ಜ,  ಕಾಲೇಜಿನ ಉಪನ್ಯಾಸಕರು,  ಸಿಬ್ಬಂದಿ ವರ್ಗದವರು, ಶ್ರೀಮತಿ  ಪ್ರೇಮಕುಮಾರಿ  ಹೆಚ್ ವಿ ಕಾರ್ಯಕ್ರಮ ಅಧಿಕಾರಿಗಳು, ಎಫ್ .ಪಿ .ಎ .ಐ  ಬೆಳಗಾವಿ  ಶಾಖೆ ಹಾಗೂ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.