ಧಾರವಾಡ : ಸಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದ ಮತ್ತು ಗ್ರಾಮೀಣ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ ಕ್ಷೇತ್ರಕ್ಕೆ ಪುನಶ್ಚೇತನ ನೀಡುವ ಅವಶ್ಯಕತೆ ಇದೆ ಎಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೆಳಿದರು. ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗವು 'ವಿಶ್ವ ಪ್ರವಾಸೋದ್ಯಮ ದಿನ'ದ ಅಂಗವಾಗಿ "ಭವಿಷ್ಯತ್ತಿಗಾಗಿ ಪ್ರವಾಸೋದ್ಯಮ ಮತ್ತು ಉದ್ಯೋಗ ಅವಕಾಶಗಳು" ಎಂಬ ವಿಷಯದ ಕುರಿತು 'ಭುವನ ವಿಜಯ' ಸಭಾಂಗಣದಲ್ಲಿ ಆಯೋಜಿಸಿದ ಮೂರು ದಿನಗಳ ಪ್ರವಾಸೋದ್ಯಮ ಸಮ್ಮೆಳನದ ಅಂತಿಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಪ್ರವಾಸೋದ್ಯಮ ಮತ್ತು ಹೋಟೇಲ್ ಉದ್ದಿಮೆ 1.4 ರಷ್ಟು ಆರ್ಥಿಕವಾಗಿ ಜಿಡಿಪಿಗೆ ಕೊಡುಗೆಯನ್ನು ನೀಡುತ್ತಿದ್ದು, ಭವಿಷ್ಯತ್ತಿನ 2030ರ ವೇಳೆಗೆ ಭಾರತದಲ್ಲಿ ಪ್ರವಾಸೋದ್ಯಮ ಮತ್ತು ಹೊಟೇಲ್ ಉದ್ಯಮಕ್ಕೆ ಸಂಬಂಧಿಸದ 400 ಮಿಲಿಯನ್ ಉದ್ಯೋಗ ಅವಕಾಗಳು ಸೃಷ್ಠಿಯಾಗುವ ನೀರಿಕ್ಷೆ ಇದೆ ಎಂದರು. ಪ್ರವಾಸೋದ್ಯಮದಿಂದ ಸಾಮಾಜಿಕ ಸಾಂಸ್ಕೃತಿಕ ಪರಂಪರೆಯ ಮೌಲ್ಯಗಳು ಹೆಚ್ಚು ಬಿಂಬಿಸಲು ಸಾಧ್ಯವಿದ್ದು, ಇಂದು ಗ್ರಾಮೀಣ ವಲಯವನ್ನು ಗಮಣದಲ್ಲಿಟ್ಟುಕೊಂಡು ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡಬೇಕಾಗಿದೆ ಎಂದರು. ಕರ್ನಾಟಕದಲ್ಲಿ ಅನೇಕ ಹಸಿರು ರಮಣಿಯ ತಾಣಗಳಿದ್ದು, ಅವುಗಳನ್ನು ಪುನಶ್ಚೇತನ ಮಾಡಬೇಕಾಗಿದ್ದು, ಜಾಗತಿಕವಾಗಿ ಪ್ರವಾಸೋದ್ಯಮ ಬೆಳೆಯುತ್ತಿರುವ ಒಂದು ಕ್ಷೇತ್ರವಾಗಿದ್ದು, ಇಂದು ನಮ್ಮಲ್ಲಿರುವ ಶರಣ ಸಂಸ್ಕೃತಿ, ಧಾರ್ಮಿಕ ಪರಂರೆಯನ್ನು ಪ್ರವಾಸೋದ್ಯಮದ ಮೂಲಕ ಬಿಂಬಿಸುವ ಅವಕಾಶವಿದ್ದು, ಆ ನಿಟ್ಟಿನಲ್ಲಿ ಸರಕಾರಗಳು ಈ ಕ್ಷೇತ್ರದ ಹೆಚ್ಚು ಗಮನ ನೀಡಿದರೆ ಸೂಕ್ತ ಎಂದರು.
ಕವಿವಿಯ ಸಮಾಜ ವಿಜ್ಞಾನ ನಿಖಾಯದ ಡೀನ್ ಪ್ರೊ. ಎಮ್.ಎ.ಜಾಲಿಹಾಳ್ ಮಾತನಾಡಿ ಭಾರತದದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳು ಇದ್ದು, ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ವಿವಿಧ ರೂಪಗಳ ಮುಖಾಂತರ ಜನಪ್ರೀಯಗೊಳಿಸಬೇಕಾಗಿದೆ ಎಂದ ಇಂದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವೃತ್ತಿಪರರು ವೃತ್ತಿಪರತೆಯಿಂದ ನಮ್ಮ ಸಾಮಥ್ರ್ಯ ವೃದ್ಧಿಪಡಿಕೊಳ್ಳಬೇಕು ಎಂದರು.
ಪ್ರವಾಸೋದ್ಯಮ ವಿಭಾಗದ ಸಂಯೋಜಕರಾದ ಡಾ. ಜಗದೀಶ.ಕೆ ಮಾತನಾಡಿ ಕರ್ನಾಟಕದಲ್ಲಿಯೆ ಕೆಸಿಡಿಯ ಪ್ರವಾಸೋದ್ಯಮ ವಿಭಾಗವು ಎಲ್ಲ ಶೈಕ್ಷಣಿಕ ಚುಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಇದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಅಮರ ಕಂಟಕದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ, ಭಾರತೀಯ ಪ್ರವಾಸೋದ್ಯಮ ನಿರ್ವಹಣಾ ಸಂಸ್ಥೆ ಮತ್ತು ಕಳೆದ ಎರಡು ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡದ ವಿವಿಧ ಹೊಟೇಲ್ ಮತ್ತು ಟ್ರಾವೇಲ್ ಕಂಪನಿಗಳ ಜೊತೆ ಪ್ರಸಕ್ತ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ವಿವಿಧ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಳ್ಳಲಾಗಿದೆ ಎಂದರು.
ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ.ಎಫ್.ಚಾಕಲಬ್ಬಿ ಮಾತನಾಡಿ ಪ್ರವಾಸೋದ್ಯಮ ಒಂದು ವೃತ್ತಪರವಾದ ವಿಷಯವಾಗಿದ್ದು, ಕೆಸಿಡಿಯ ಪ್ರವಾಸೋದ್ಯಮ ವಿಭಾಗವು ಅನೇಕ ಕ್ಯಾಂಪಸ್ ಸಂದರ್ಶನಗಳ ಮೂಲಕ ನೂರಾರು ವಿದ್ಯಾರ್ಥಿ ಗಳು ಪ್ರಸ್ತುತ ವಿವಿಧ ಪ್ರವಾಸೋದ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಲೇಜಿನ ಒಂದು ಪ್ರತಿಷ್ಠಿತವಾದ ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುವ ಒಂದು ವಿಭಾಗವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಎಸ್. ರಾಜಶೇಖರ್, ಡಾ ಅಮೃತ ಯಾದರ್ಿ, ಡಾ. ಪ್ರಸನ್ನಕುಮಾರ, ಸೇರಿದಂತೆ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಇದ್ದರು. ನಂತರ ಪ್ರವಾಸೋದ್ಯಮ ದಿನದ ವಿಶೇಷವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.