ವಿಶ್ವ ತಂಬಾಕು ರಹಿತ ದಿನಾಚರಣೆ

ಕಾರವಾರ 1:ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯ ವಿದ್ಯಾಥರ್ಿಗಳು ಕಾರವಾರ ನಗರದಲ್ಲಿ ಜಾಥಾದಲ್ಲಿ ಪಾಲ್ಗೊಂಡು ಜನರಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.  ಸಂಸ್ಥೆಯ ನಿದರ್ೆಶಕ ಡಾ. ಶಿವಾನಂದ ದೊಡಮನಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕಕುಮಾರ್ ಜಾಗೃತಿ ಜಾಥಕ್ಕೆ  ಚಾಲನೆ ನೀಡಿದರು.  

ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಹೇಮಗಿರಿ , ಸಹ ಪ್ರಾಧ್ಯಾಪಕರಾದ ಡಾ. ನವೀನಕುಮಾರ ಹವಳೆ, ಸಹಾಯಕ ಪ್ರಾಧ್ಯಾಪಕರಾದ ಡಾ. ಅಭಿಷೇಕ ಪ್ರಯಾಗ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕತರ್ೆಯರು ಜಾಥಾದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.  ಡಾ. ರಚನಾ ಎ. ಆರ್ ಮತ್ತು ಡಾ. ಮಾಲತೇಶ ಉಂಡಿ ಜಾಥಾದ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.  ವೈದ್ಯ ವಿದ್ಯಾಥರ್ಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ, ತಂಬಾಕು ಸೇವನೆ ವಿರುದ್ಧ ಘೋಷಣೆಗಳನ್ನು ಕೂಗಿ ಜನರಲ್ಲಿ ಅರಿವು ಮೂಡಿಸುವಲ್ಲಿ 

ಯತ್ನಿಸಿದರು.  

ತಂಬಾಕಿನಿಂದ ಶ್ವಾಸಕೋಶದ ಮೇಲಾಗುವ ದುಷ್ಪರಿಣಾಮ, ಕ್ಯಾನ್ಸರ್ ಮತ್ತು ಹಲವಾರು ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಬಗ್ಗೆ ಸಹ ಅರಿವು ಮೂಡಿಸಿದರು.  ಕ್ರಿಮ್ಸ್ ಸಂಸ್ಥೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜೊತೆಗೂಡಿ ಜಾಥ ಮತ್ತು ಅರಿವು ಕಾರ್ಯಕ್ರಮವನ್ನು ಆಯೋಜಿಸಿತ್ತು. ತಂಬಾಕು ಸೇವನೆ ಎಂದೆಂದಿಗೂ ಆರೋಗ್ಯಕ್ಕೆ ಹಾನಿಕರ, ಅದನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಡಾ. ಶಿವಾನಂದ ದೊಡಮನಿ ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದರು.