ಹಾವೇರಿ 06: ಹನುಮನಮಟ್ಟಿ ಕೃಷಿ ವಿಜ್ಞಾನಕೇಂದ್ರ, ಕೃಷಿ ಇಲಾಖೆ ಹಾಗೂ ಮೇವುಂಡಿಯ ಸರಕಾರಿ ಪ್ರೌಢಶಾಲೆ ಸಹಯೋಗದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮ ಗುರುವಾರ ಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಜರುಗಿತು.
ಹನುಮನಮಟ್ಟಿ ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿ ಡಾ. ಕೃಷ್ಣ ನಾಯ್ಕ ಮಾತನಾಡಿ, ಮಣ್ಣು ಆರೋಗ್ಯ ಕಾರ್ಡ ಪರೀಶೀಲನೆ ಹಾಗೂ ತಮ್ಮ ಹೊಲಕ್ಕೆ ಯಾವರೀತಿ ಕ್ರಮ ಕೈಗೋಳ್ಳಬೇಕು ಎಂದು ವಿವರಿಸಿದರು.
ಗುತ್ತಲದ ಕೃಷಿ ಅಧಿಕಾರಿ ಧನುಷ್ ಕೆ ಎಸ್ ಅವರು ಮಣ್ಣಿನ ಆರೋಗ್ಯ ಮಹತ್ವ ಹಾಗೂ ಅದನ್ನು ಕಾಪಾಡಿಕೊಳ್ಳುವ ವಿಧಗಳನ್ನು ತಿಳಿಸುವುದರ ಜೊತೆಗೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ನಬಾರ್ಡ್ನ ಜಿಲ್ಲಾ ಅಭಿವೃಧ್ಧಿ ಅಧಿಕಾರಿ ರಂಗನಾಥ ಎಸ್ ಅವರು ಮಕ್ಕಳೊಂದಿಗೆ ಮಣ್ಣಿನ ಆರೋಗ್ಯ ರಕ್ಷಣೆಯ ಕ್ರಮಗಳ ಕುರಿತು ಸಂವಾದ ನಡೆಸಿದರು.
ವಿದ್ಯಾರ್ಥಿಗಳಾದ ಭುವನೇಶ್ವರಿ ಗೊರವರ, ಭಾಗ್ಯಲಕ್ಷ್ಮಿ ಹಿರೇಮಠ, ರಕ್ಷಿತಾ ದೇಶಗತ್ತಿ ಮಣ್ಣಿನ ಆರೋಗ್ಯದ ಕುರಿತು ಮಾತನಾಡಿದರು.
ಮೇವುಂಡಿ ಸರ್ಕಾರಿ ಪ್ರೌಢಶಾಲೆಯ “ಧರತಿ ಮಣ್ಣು ಆರೋಗ್ಯ ತಪಾಸಣಾ ಪ್ರಯೋಗಾಲಯ” ದಲ್ಲಿ ಪರೀಕ್ಷಿಸಿದ 50 ಮಣ್ಣಿನ ಮಾದರಿಗಳ ಕಾರ್ಡಗಳನ್ನು ಸಂಬಂಧಿಸಿದ ರೈತರಿಗೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶರಿಫಾಬಿ ಮ ನದಾಫ್, ಎಸ್ ಡಿ ಎಂಸಿ ಅಧ್ಯಕ್ಷ ಪರಮೇಶಪ್ಪ ಕಿತ್ತೂರ, ಸದಸ್ಯ ಖಾದರಸಾಬ ನದಾಫ್, ಮಾಜಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಿಂ ಗೊರವರ, ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಸುರೇಶ್ಎಸ್ ನಾಯ್ಕ, ಗ್ರಾ ಪಂ ಕಾರ್ಯದರ್ಶಿ ಸುರೇಶ್ ಕಡಕೋಳ, ಗ್ರಾಮದ ಮುಖಂಡರಾದ ಸಿದ್ದಪ್ಪ ಕರೆಮ್ಮನವರ, ಸುರೇಶ್ ಪೂಜಾರ, ಬಸವರಾಜ ಕರೆಮ್ಮನವರ, ಪರಶುರಾಮ ಹುಚ್ಚಮ್ಮನವರ, ಪ್ರೌಢಶಾಲೆಯ ಕು ಸವಿತಾ ಗೊಲ್ಲರ, ಕು ನೀಲಮ್ಮ ದ್ಯಾವನಗೌಡ್ರ , ಶ್ರೀ ಸಚಿನ್ ವಾಲ್ಮೀಕಿ, ಶ್ರೀ ಪ್ರದೀಪ್ ವಿಜಾಪೂರ ಶ್ರೀ ಮಂಜುನಾಥ ಕೆಂಚಮಲ್ಲ ಇತರರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ವೀರೇಶ್ ಗಡ್ಡದ್ದೇವರಮಠ ಪ್ರಾಸ್ಥಾವಿಕವಾಗಿ ಮಾತನಾಡಿದರು, ದೇವೇಂದ್ರ್ಪ ರಿತ್ತಿ ನಿರೂಪಿಸಿದರು, ಬಸವರಾಜ ಪೂಜಾರ ಸ್ವಾಗತಿಸಿದರು. ಶ್ರೀಮತಿ ಸುಜಾತಾ ಕಡಕೋಳ ವಂದಿಸಿದರು.