ವಿಶ್ವ ಕರ್ಮ ಸಮಾಜ ಎಲ್ಲ ಸಮಾಜಗಳಿಗೂ ಮಾದರಿ, ಮೂಲ ಆಧಾರವಾಗಿದೆ: ದೇಸಾಯಿ

ಧಾರವಾಡ 03: ವಿಶ್ವಕರ್ಮ ಸಮಾಜ ಚಿಕ್ಕ ಸಮಾಜವಾಗಿದ್ದರು ಕೂಡಾ ನಮ್ಮ ಸುತ್ತಮುತ್ತಲಿರುವ ಎಲ್ಲ ಸಮಾಜಗಳಿಗೂ ಮಾದರಿಯಾಗಿ ಮೂಲ ಆಧಾರವಾಗಿ ನಿಂತಿದೆ. ಹೀಗಾಗಿ ಈ ಸಮಾಜ ಚಿಕ್ಕದಾಗಿದ್ದರು ದೊಡ್ಡ ಶಕ್ತಿ ಹೊಂದಿದೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.

ಅವರು ಇತ್ತೀಚೆಗೆ ನಗರದ ಕರ್ನಾಟಕ ವಿದ್ಯಾವರ್ದಕ ಸಂಘದ ಸಭಾಭವನದಲ್ಲಿ ಸಮಗ್ರ ಕರ್ನಾಟಕ ವಿಶ್ವಕರ್ಮ ಸಮಾಜದ ವತಿಯಿಂದ ನಿವೃತ್ತ ಪೊಲೀಸ ಅಧಿಕಾರಿ ಎ.ಆರ್ ಬಡಿಗೇರ ಅವರು ಅಭಿನಂದಾನಾ ಸಮಾರಂಭವನ್ನು ಉದ್ಘಾಟಿಸಿ ಎ.ಆರ್ ಬಡಿಗೇರ ಅವರನ್ನು ಸನ್ಮಾನಿಸಿ ಮಾತನಾಡಿದರು.

 ಇಂದು ವಿಶ್ವ ಕರ್ಮ ಸಮಾಜದ ಮೇಲೆ ರೈತರ ಕೃಷಿ ನಿಂತಿದೆ ಹಾಗೂ ಅವರ ಸಲಕರಣೆಗಳನ್ನು ಕಾಲಕಾಲಕ್ಕೆ ಮಾಡಿಕೊಡುತ್ತಿದ್ದೇವೆ. ಈ ಮೂಲಕ ವಿಶ್ವ ಕರ್ಮ ಸಮಾಜ ಎಲ್ಲ ಸಮಾಜಗಳಿಗೂ ಆಧಾರವಾಗಿದೆ. ಧಾರವಾಡ ನಗರ ಸುಸಂಸ್ಕೃತ ಹಾಗೂ ವಿದ್ಯಾಕಾಶಿ ನಗರ ಈ ನಗರಕ್ಕೆ ಧಕ್ಕೆ ಬರದಂತೆ ಎ.ಆರ್ ಬಡಿಗೇರ ಅವರು ವೃತ್ತಿ ನಿರ್ವಹಿಸಿದ್ದಾರೆ ಇಂದು ಅವರು ನಿವೃತ್ತಿ ಆಗಿದ್ದರಿಂದ ಪೊಲೀಸ ಇಲಾಖೆಯಲ್ಲಿ ಓರ್ವ ದಕ್ಷ ಹಾಗೂ ದಿಟ್ಟ ಅಧಿಕಾರಿ ಸೇವೆಗೆ ಇಲ್ಲ ಎಂಬುದು ಬೇಸರ. ಆದರೆ ಹೊಸ ಪೀಳಿಗೆಯ ಅಧಿಕಾರಿಗಳಿಗೆ ನಿವೃತ್ತಿ ನಂತರವೂ ಮಾರ್ಗದರ್ಶನ ಮಾಡುವ ಮೂಲಕ ತಮ್ಮಂತೆಯೆ ಇತರರು ಜನಪರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಭಾರತೀಯ ವಿಶ್ವ ಕರ್ಮ ಛಾತ್ರಾ ಯುವ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಂತೋಷ ಮಾತನಾಡಿ ಎ.ಆರ್ ಬಡಿಗೇರ ಅವರು ತಮ್ಮ ವೃತ್ತಿ ಜೀವನದಲ್ಲಿ ಗಳಿಸಿದ ಕೀರ್ತಿ  ವಿಶ್ವ ಕರ್ಮ ಸಮಾಜಕ್ಕೆ ಹೆಮ್ಮೆ ತರುವಂತಹ ಕಾರ್ಯವಾಗಿದೆ. ತಮ್ಮ ನಿವೃತ್ತಿ ಜೀವನದಲ್ಲಿಯೂ ಸಮಾಜ ಏಳಿಗೆಗಾಗಿ ಮಾರ್ಗದರ್ಶನ ಮಾಡುತ್ತಿರಬೇಕು ಎಂದು ಹೇಳಿದರು. 

 ಅಭಿನಂದನಾ ಸಮಾರಂಭದಲ್ಲಿ ಗದ್ದನಕೇರಿ ಮಠದ ಗಂಗಾಧರ ಮಹಾಸ್ವಾಮಿಜಿ ಸಾನಿದ್ಯ ವಹಿಸಿದ್ದರು. ಸಮಗ್ರ ಕರ್ನಾಟಕ ವಿಶ್ವ ಕರ್ಮ ಸಮಾಜ ಸಂಘಟನೆ ರಾಜ್ಯಾಧ್ಯಕ್ಷ ಸುವರ್ಣ ಪತ್ತಾರ ಪತ್ರಕರ್ತ ಬಿ ಬಿ  ಕಮ್ಮಾರ ಜೆ.ಡಿ.ಎಸ್ ಮುಖಂಡರಾದ ಮೋಹನ ಅರ್ಕಸಾಲಿ ಪಿ.ಎಸ್.ಐ ರಾಜಕುಮಾರ ಪತ್ತಾರ ಹು.ಧಾ.ಮ.ಪಾಲಿಕೆ ಮಾಜಿ ಸದಸ್ಯ ನಿಂಗಪ್ಪ ಬಡಿಗೇರ ಶಿರಸಂಗಿ ಕಾಳಿಕಾ ದೇವಸ್ಥಾನದ ಅರ್ಚಕ ಪ್ರಕಾಶ ಶಹಾಪೂರಕರ, ಕಾಳಪ್ಪ ಬಡಿಗೇರ, ಎನ್.ಕೆ ಗೀರಿಯಾಚಾರ್ಯ, ಡಾ. ವೀರುಪಾಕ್ಷ ಬಡಿಗೇರ ಮುಂತಾದ ವಿಶ್ವ ಕರ್ಮ ಸಮಾಜದ ಭಾಂದವರು ಉಪಸ್ಥಿತರಿದ್ದರು.

ಎ.ಆರ್ ಬಡಿಗೇರ ಅವರಿಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿಶ್ವ ಕರ್ಮ ಸಮಾಜದ ಮುಖಂಡರು ಸನ್ಮಾನಿಸಿದರು. ಶಂಕರ ಪತ್ತಾರ ಸ್ವಾಗತಿಸಿದರು. ಸವಿತಾ ಪೊದ್ದಾರ ನಿರೂಪಿಸಿದರು. ಮುಖೇಶ ಬಡಿಗೇರ ವಂದಿಸಿದರು.