ವಿಶ್ವ ಆಹಾರ ದಿನಾಚರಣೆ: ಪೌಷ್ಟಿಕ ಆಹಾರದ ಕುರಿತು ಜಾಗೃತಿ

ವಿಶ್ವ ಆಹಾರ ದಿನಾಚರಣೆ: ಪೌಷ್ಟಿಕ ಆಹಾರದ ಕುರಿತು ಜಾಗೃತಿ   World Food Day: Awareness about nutritious food

ವಿಶ್ವ ಆಹಾರ ದಿನಾಚರಣೆ: ಪೌಷ್ಟಿಕ ಆಹಾರದ ಕುರಿತು ಜಾಗೃತಿ   

ಯಮಕನಮರಡಿ, 19 : ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನ ಯೋಜನೆ ,ಹಿಡ್ಕಲ್ ಡ್ಯಾಮ್ ಮತ್ತು ಕೃಷ್ಣಾ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ಸಂಕೇಶ್ವರ (ಕೃಷ್ಣಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ) ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆಹಾರ ದಿನದ ಪ್ರಯುಕ್ತ ಕಾರ್ಯಕ್ರಮವನ್ನು ದುರ್ಗಾಬಾಯಿ ದೇಶಮುಖ ಕುಟೀರದಲ್ಲಿ ಯಶಸ್ವಿಯಾಗಿ ಜರುಗಿತು.  

ಕಾರ್ಯಕ್ರಮದಲ್ಲಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ ಎಸ್‌. ಗವಿಮಠ ಅವರು ಮಾತನಾಡಿ, ಉತ್ತಮ ಹಾಗೂ ಸದೃಢ ಜೀವನವನ್ನು ಸಾಗಿಸಲು ಪೌಷ್ಟಿಕಾಂಶ ಭರಿತ ಆಹಾರದ ಅವಶ್ಯಕತೆ ಇದೆ. ಆದ್ದರಿಂದ ಎಲ್ಲರೂ ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸಿ, ಒಳ್ಳೆಯ ಆರೋಗ್ಯವನ್ನು ಪಡೆದು ಜೀವಿಸೋಣ ಎಂದು ಕರೆ ನೀಡಿದರು.  

ಇದೇ ಸಂದರ್ಭದಲ್ಲಿ ಶ್ರೀಮತಿ ಸುರೇಖಾ ಪಾಟೀಲ್ ಅವರು ಆಹಾರದ ಮಹತ್ವದ ಕುರಿತು ವಿಸ್ತೃತ ಮಾಹಿತಿ ನೀಡಿ, ಉತ್ತಮ ಆಹಾರ ಸೇವನೆಯಿಂದ ಸಮೃದ್ಧ ಆರೋಗ್ಯವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.   

ಈ ವೇಳೆ ಡಾ. ಎನ್‌. ಎಮ್ ಮಾಗೆನ್ನವರ, ಡಾ. ರಶ್ಮಿ ಎಸ್‌. ಮೂಗಿ ಮತ್ತು ಡಾ. ವಿಜಯಾನಂದ್ ಕಲ್ಲೂರ್ ಅವರು ಉಪಸ್ಥಿತರಿದ್ದರು.  

ಕಾರ್ಯಕ್ರಮದ ವಿಶೇಷವಾಗಿ, ಆಸರೆ ವೃದ್ಧಾಶ್ರಮ ಹಾಗೂ ಶಕ್ತಿ ಸದನ ಹಿಡ್ಕಲ್ ಡ್ಯಾಮ್ನ ಫಲಾನುಭವಿಗಳಿಗೆ ಸಾವಯವ ಸಿರಿಧಾನ್ಯಗಳನ್ನು ದೇಣಿಗೆಯಾಗಿ ನೀಡಲಾಯಿತು. ಜೊತೆಗೆ, ಶಕ್ತಿ ಸದನ ಹಿಡಕಲ್ ಡ್ಯಾಮ್ನ ಫಲಾನುಭವಿಗಳ ಆರೋಗ್ಯವನ್ನು ತಪಾಸಣೆ ಮಾಡಿ, ಅಗತ್ಯ ಸಲಹೆ ಸೂಚನೆ ಮತ್ತು ಓಷಧಿಗಳನ್ನು ವಿತರಿಸಲಾಯಿತು. ಶಕ್ತಿ ಸದನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು