ತಹಶೀಲ್ದಾರರಾಗಿ ಬಡ್ತಿ ಪಡೆದ ಎಂ.ವಿ. ಗುಂಡಪ್ಪಗೌಳರಿಗೆ ಸನ್ಮಾನ

 ತಹಶೀಲ್ದಾರರಾಗಿ ಬಡ್ತಿ ಪಡೆದ ಎಂ.ವಿ. ಗುಂಡಪ್ಪಗೌಳರಿಗೆ ಸನ್ಮಾನ Felicitation for M.V. Gundappagowlar on his promotion to Tahsildar

 ಯರಗಟ್ಟಿ  : ದಕ್ಷ ಮತ್ತು ಜನಸ್ನೇಹಿ ಆಡಳಿತಾಧಿಕಾರಿ ಎಂದು ಹೆಸರು ಗಳಿಸಿರುವ ತಹಸೀಲ್ದಾರ್ ಎಂ.ವಿ. ಗುಂಡಪ್ಪಗೋಳ ಅವರು  2 ಹುದ್ದೆಯಿಂದ  ್ಲಹಿ1 ತಹಸೀಲ್ದಾರ್ ಆಗಿ ಮುಂಬಡ್ತಿ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕು ಪತ್ರಕರ್ತರಿಂದ ಅವರಿಗೆ ಆತ್ಮೀಯ ಸನ್ಮಾನ ನಡೆಯಿತು.  ತಾಲೂಕಿನಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಜನಪರ ಆಡಳಿತದ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿರುವ ಗುಂಡಪ್ಪಗೋಳ ಅವರ ಕಾರ್ಯವೈಖರಿಯನ್ನು ಪತ್ರಕರ್ತರು ಮೆಚ್ಚಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಮುಂಬಡ್ತಿ ನನ್ನ ವೈಯಕ್ತಿಕ ಸಾಧನೆಯಲ್ಲ, ಸರ್ಕಾರದ ವಿಶ್ವಾಸ, ಸಹೋದ್ಯೋಗಿಗಳ ಸಹಕಾರ ಮತ್ತು ಯರಗಟ್ಟಿ ಜನರ ಪ್ರೀತಿ-ಬೆಂಬಲದ ಫಲ ಎಂದು ಹೇಳಿದರು. ನನ್ನ ಸೇವಾ ಅವಧಿಯಲ್ಲಿ ಪತ್ರಕರ್ತರು ಸದಾ ಆಡಳಿತದೊಂದಿಗೆ ಕೈಜೋಡಿಸಿ ಜನಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ನೆರವಾಗಿದ್ದಾರೆ.

ಕಂದಾಯ ಇಲಾಖೆ, ಮತದಾರರ ಪಟ್ಟಿ ಪರಿಷ್ಕರಣೆ, ಸರ್ಕಾರಿ ಯೋಜನೆಗಳ ಅನುಷ್ಠಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಾಧ್ಯಮಗಳ ಸಹಕಾರ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಫೀಕ್ ಡಿಕೆ ಮಾತನಾಡಿ, ಯರಗಟ್ಟಿಯಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಗುಂಡಪ್ಪಗೋಳ ಅವರು ಉತ್ತಮ ಸೇವೆ ನೀಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಉನ್ನತ ಹುದ್ದೆಗಳಿಗೆ ಅವರು ಪಾತ್ರರಾಗಲಿ ಎಂದು ಹಾರೈಸಿದರು. ಪತ್ರಕರ್ತ ಕೆ.ಎಫ್‌. ನದಾಫ್ ಮಾತನಾಡಿ, ಅಧಿಕಾರಿಯೊಬ್ಬರು ಜನರೊಂದಿಗೆ ನೇರ ಸಂಪರ್ಕದಲ್ಲಿದ್ದು, ಪಾರದರ್ಶಕ ಹಾಗೂ ತ್ವರಿತ ಆಡಳಿತ ನೀಡುವುದು ಅಪರೂಪ. ಗುಂಡಪ್ಪಗೋಳ ಅವರ ಕಾರ್ಯವೈಖರಿ ಅದಕ್ಕೆ ಉದಾಹರಣೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಲವು ಸಂಘಟನೆಗಳ ಮುಖಂಡರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.