ನ್ಯಾಯಾಧೀಶರ ವಸತಿಗೃಹದಲ್ಲಿ ವಿಶ್ವ ಪರಿಸರ ದಿನ ಆಚರಣೆ

ಬಳ್ಳಾರಿ, ಜೂ.05: ವಿಶ್ವ ಪರಿಸರ ದಿನಾಚರಣೆ ಹಾಗೂ ಜೈವಿಕವೈವಿಧ್ಯತೆ ದಿನದ ಅಂಗವಾಗಿ ನಗರದ ನ್ಯಾಯಾಧೀಶರ ವಸತಿಗೃಹದ ಆವರಣದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೃಷ್ಣ ಬಿ.ಅಸೋಡೆ ಅವರು ಸಸಿಗಳನ್ನು ಶುಕ್ರವಾರ ನೆಟ್ಟರು.

ನ್ಯಾ.ಕೃಷ್ಣ ಅಸೋಡೆ ಅವರು ಪರಿಸರದ ಪ್ರಾಮುಖ್ಯತೆಯನ್ನು ಈ ಸಂದರ್ಭದಲ್ಲಿ ವಿವರಿಸಿದರು.ಅದೇ ರೀತಿ ಉಪಸ್ಥಿತರಿದ್ದ ಇನ್ನೀತರ ನ್ಯಾಯಾಧೀಶರು ಸಹ ಸಸಿಗಳನ್ನು ನೆಟ್ಟರು. ಪರಿಸರ ಸಂರಕ್ಷಣೆ ಕಾಪಾಡುವ ಕುರಿತು ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಅಜರ್ುನ್ ಮಲ್ಲೂರು, ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಎಸ್.ಬಿ.ಬೋಗಿ, ಪರಿಸರ ಅಧಿಕಾರಿ ಉಮಾಶಂಕರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಅಂಕಲಯ್ಯ, ಕಾರ್ಯದಶರ್ಿ ಎಸ್.ಸಿ.ಅರಸೂರು ಸೇರಿದಂತೆ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಇದ್ದರು.