ಎಚ್‌.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚಾರಣೆ

ಎಚ್‌.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚಾರಣೆ World Environment Day celebrated at H.G. Pre-Degree College

ಲೋಕದರ್ಶನ ವರದಿ 

       ಸಿಂದಗಿ 05 : ಪ್ರಕೃತಿಯಲ್ಲಾಗುವ ವಿಕೋಪಕ್ಕೆ ಮುಖ್ಯಕಾರಣ ಮಾನವನ ಸ್ವಾರ್ಥ ಬದುಕು.ಇದು ಹೀಗೆ ಮುಂದುವರೆದರೆ ಪರಿಸರ ನಾಶವಾಗಿ ಜೀವಿಗಳ ಬದುಕು ಅಸ್ಥಿರವಾಗುತ್ತದೆ ಎಂದು ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಹೇಳಿದರು. 

     ಪಟ್ಟಣದ ಎಚ್‌.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚಾರಣೆಯ ನಿಮಿತ್ಯ ಸಸಿ ನೆಟ್ಟು ಮಾತನಾಡಿ, ಪ್ರತಿ ಗಿಡ-ಮರಗಳಿಂದ ಮಾನವನಿಗೆ ಒಂದಲ್ಲಾ ರೀತಿಯಲ್ಲಿ ಲಾಭವಿದೆ. ಆದರೆ ಮಾನವ ಅವುಗಳನ್ನು ನಾಶ ಮಾಡಿ ತನ್ನ ಸ್ವಾರ್ಥ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾನೆ. ಗಿಡ ಮರಗಳನ್ನು ಮಕ್ಕಳಂತೆ ಜೋಪಾನ ಮಾಡಬೇಕು. ಹಸಿರು ಮಾನವನ ಉಸಿರಾಗಬೇಕು. ಶಾಲಾ ಕಾಲೇಜುಗಳಲ್ಲಿ ಪರಿಸರದ ಕಾರ್ಯಕ್ರಮಗಳು ನಿರಂತರವಾಗ ನಡೆದಾಗ ಮಾತ್ರ ಮಕ್ಕಳಲ್ಲಿ ಪರಿಸರದ ಬಗ್ಗೆ ಪ್ರಜ್ಞೆ ಮೂಡುತ್ತದೆ ಎಂದರು. 

       ಪ್ರಾಚಾರ್ಯ ಎ.ಆರ್‌.ಹೆಗ್ಗಣದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರದ ರಕ್ಷಣೆ ಮಾಡುವುದು ಅಂದೊಂದು ಸಾಮಾಜಿಕ ಸೇವೆಯಾಗಬೇಕು. ಆರೋಗ್ಯದ ಬದುಕು ನಮ್ಮದಾಗಬೇಕು ಎಂದರೆ ಪರಿಸರದ ಬಗ್ಗೆ ಕಾಳಜಿ ಬೇಕೆ ಬೇಕು ಎಂದರು. 

       ಈ ವೇಳೆ ಸಂಸ್ಥೆಯ ನಿರ್ದೇಶಕ ಬಿ.ಜಿ.ನೆಲ್ಲಗಿ ಮಹಾವಿದ್ಯಾಲಯದ ಉಪನ್ಯಾಸಕರಾದ ಎಸ್‌.ಎ.ಪಾಟೀಲ, ಎಮ್‌.ಎನ್‌.ಅಜ್ಜಪ್ಪ, ಎಸ್‌.ಪಿ.ಬಿರಾದಾರ, ಎಫ್‌.ಎ.ಹಾಲಪ್ಪನವರ, ಮುಕ್ತಾಯಕ್ಕ ಕತ್ತಿ, ಎ.ಆರ್‌.ಸಿಂದಗಿಕರ, ಸಿದ್ದಲಿಂಗ ಕಿಣಗಿ, ಡಾ.ಶಾಂತುಲಾಲ ಚವ್ಹಾಣ, ಸತೀಶ ಬಸರಕೋಡ, ಎ.ಬಿ.ಪಾಟೀಲ, ಎಸ್‌.ಎಸ್‌.ಪಾಟೀಲ, ಜ್ಯೋರ್ತಿಲೇಖ ಚೆನ್ನೂರ ಸೇರಿದಂತೆ ಸ್ಕೌಟ್ಸ್‌-ಗೈಡ್ಸ್‌ ,ಎನ್‌ಎಸ್‌ಎಸ್ ಸ್ವಯಂ ಸೇವಕರು,  ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.