ಗಿಡ ಇದ್ದರೆ ಮಳೆ, ಮಳೆ ಇದ್ದರೆ ಬೆಳೆ, ಬೆಳೆ ಇದ್ದರೆ ಮಾತ್ರ ರೈತ

ಗಿಡ ಇದ್ದರೆ ಮಳೆ, ಮಳೆ ಇದ್ದರೆ ಬೆಳೆ, ಬೆಳೆ ಇದ್ದರೆ ಮಾತ್ರ ರೈತ If there is a plant, there is rain, if there is rain, there is a crop, and only if there is a crop,

ಲೋಕದರ್ಶನ ವರದಿ 

ಸಿಂದಗಿ 05 : ಗಿಡ ಇದ್ದರೆ ಮಳೆ, ಮಳೆ ಇದ್ದರೆ ಬೆಳೆ, ಬೆಳೆ ಇದ್ದರೆ ಮಾತ್ರ ರೈತ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನಕರ್ತವ್ಯವಾಗಿದ್ದು, ಹಸಿರು ಪರಿಸರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸಬೇಕಲ್ಲದೆ ನಾವು ನಮ್ಮ ಮಕ್ಕಳ ಹುಟ್ಟು ಹಬ್ಬ ಆಚರಣೆಗೆ ಆಡಂಬರ ಆಚರಣೆ ಮಾಡುವುದಕ್ಕಿಂದ ಅವರ ಹೆಸರಲ್ಲಿ ಒಂದೊಂದು ಗಿಡಗಳು ನೆಟ್ಟರೆ ಮಾತ್ರ ಉತ್ತಮ ಪರಿಸರ ಪಡೆಯಲು ಸಾಧ್ಯ. ಎಂದು ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಪ್ರಿಯಾಂಕಾ, ಹೇಳಿದರು. 

ಪಟ್ಟಣದ ಬಸವ ನಗರದಲ್ಲಿರುವ ಸಂಗಮ ಸಂಸ್ಥೆಯಿಂದ ಪರಿಸರ ದಿನಾಚರಣೆಯ ಅಂಗವಾಗಿ  ಸಸಿಗಳ ವಿತರಣಾ   ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಹಿಳಾ ಸಂಘದ ಸದಸ್ಯರಿಗೆ ಸಸಿಗಳನ್ನು ವಿತರಿಸಿ, ಪರಿಸರ ಉಳಿವಿನ ಸಂಕಲ್ಪವನ್ನು ಮೂಡಿಸಿ, ನಮ್ಮ ಮಕ್ಕಳು ನಮಗೆ ನೋಡುತ್ತಾರೆ ಎಂಬ ನಂಬಿಕೆ ನಮಗೆ ಇಲ್ಲ. ಆದರೆ ನಾವು ಒಂದು ಗಿಡ ನೆಟ್ಟು ಪಾಲನೆ ಪೋಷಣೆ ಮಾಡಿದರೆ ಅದು ಖಂಡಿತ ನಮಗೆ ನೆರಳಿನ ಜೊತೆ ಹಣ್ಣುಗಳು, ಸ್ವಚ್ಚ ಅಮ್ಲಜನಕ ಕೊಡುವುದು ಎಂದರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀಲಮ್ಮ ಯಡ್ರಾಮಿ ಮಾತನಾಡಿ, ಪರಿಸರ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಗಿಡಮರಗಳ ಬೆಳವಣಿಗೆ ಅತ್ಯಗತ್ಯವಾಗಿದ್ದು, ಪರಿಸರ ಸ್ನೇಹಿ ಜೀವನ ಶೈಲಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. 

 ಪಟ್ಟಣದ ಶಿವಶಂಕರ ಬಡಾವಣೆಯಲ್ಲಿಹಾಗೂ ವಿವಿಧ ಹಳ್ಳಿಗಳಾದ ರಾಂಪೂರ, ರಾಂಪೂರ ತಾಂಡಾ, ಬೆನಕೊಟಗಿ, ಬೆನಕೊಟಗಿ ತಾಂಡಾ, ಗಣಿಹಾರ, ಗಣಿಹಾರ ತಾಂಡಾ, ಬಬಲೇಶ್ವರ, ಮಲಘಾಣ, ಮಂಗಳೂರ, ಆಸಂಗಿಹಾಳ, ಕಕ್ಕಳಮೇಲಿ, ಯರಗಲ್, ಬಂಟನೂರ ,ಕೆರೂರ, ಮನ್ನಾಪೂರ, ಅಂತರಗಂಗಿ, ವಂದಾಲ, ಹುಣಶ್ಯಾಳ, ಹಂದಿಗನೂರ, ಹಂದಿಗನೂರ ತಾಂಡಾ, ಕೊಕ್ಕಟನೂರ ,

ಕನ್ನೊಳ್ಳಿ ಹಾಗೂ ಇನ್ನೂ ಅನೇಕ ಹಳ್ಳಿಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಟ್ಟಡ ಕಾರ್ಮಿಕರಿಗೆ ಮಹಿಳೆಯರಿಗೆ ರೈತರಿಗೆ ಯುವಕರಿಗೆ ಮತ್ತು ವಿಶೇಷ ಚೇತನರೊಳಗೊಂಡು ಪ್ರತಿಯೊಬ್ಬರಿಗೂ ಸಸಿಗಳು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಜಯ ಬಂಟನೂರ, ತೇಜಸ್ವಿನಿ ಹಳ್ಳದಕೇರಿ ಹಾಗೂ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದು, ಪರಿಸರ ಸಂರಕ್ಷಣೆಕುರಿತುಜಾಗೃತಿ ಮೂಡಿಸುವ ಪ್ರತಿಜ್ಞೆ ಸ್ವೀಕರಿಸಿದರು. ಸಸಿಗಳ ವಿತರಣೆ, ಪರಿಸರಜಾಗೃತಿ ಸಂದೇಶಗಳು ಹಾಗೂ ಹಸಿರು ಪರಿಸರ ನಿರ್ಮಾಣದ ಸಂಕಲ್ಪದೊಂದಿಗೆಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.