ಸೆಂಟ್ರಲ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

  ಸೆಂಟ್ರಲ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ  World Environment Day celebrated at Central School

ಲೋಕದರ್ಶನ ವರದಿ 

ಧಾರವಾಡ 05: ಶ್ರೀಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಭದ್ದವಾಗಿ ಆಚರಿಸಲಾಯಿತು. ಶಾಲಾ ಪ್ರಾಚಾರ್ಯೆ ಶ್ರೀಮತಿ. ರಜನೀ ಪಾಟೀಲ್ ಅವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳು ಪ್ರಕೃತಿಯ ಹೂವು, ಗಿಡ, ಪಕ್ಷಿಗಳ ವೇಷ ಧರಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಈ ಸಂದರ್ಭದಲ್ಲಿ ಮಕ್ಕಳನ್ನು ತಯಾರುಗೊಳಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಪಾಲಕರ ಕಾರ್ಯವನ್ನು ಪ್ರಶಂಸಿಸಿ ರಾ​‍್ಯಲಿಗೆ ಹಸಿರು ನಿಶಾನೆ ತೋರಿಸುವ ಮುಖಾಂತರ ಚಾಲನೆ ನೀಡಿದರು. ಸುಮಾರು 2000ಕ್ಕೂ ಹೆಚ್ಚು ಮಕ್ಕಳು ರಾ​‍್ಯಲಿಯಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಗೆ ಕರೆ ನೀಡಿದರು. 

ಶಿಕ್ಷಕಿ ಸುಪ್ರಿಯಾ ಕುಲಕರ್ಣಿ ಮಕ್ಕಳಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು. ಜೆ.ಎಸ್‌.ಎಸ್‌ನ ಕಾರ್ಯದರ್ಶಿಗಳಾದ ಡಾಽಽ ಅಜಿತ ಪ್ರಸಾದ, ಆಡಳಿತಾಧಿಕಾರಿಗಳಾದ ಶ್ರೀಯುತ ಅರಿಹಂತ ಪ್ರಸಾದ, ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಮಹಾವೀರ ಉಪಾದ್ಯೆ ಉಪಸ್ಥಿತರಿದ್ದು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಜೆ.ಎಸ್‌.ಎಸ್‌ನ ಅಂಗ ಸಂಸ್ಥೆಗಳ ಮುಖ್ಯಸ್ಥರಿಗೆ ಸಸಿ ನೀಡುವ ಮುಖಾಂತರ ಮಕ್ಕಳು - ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೇ ಸಂರ್ದಭದಲ್ಲಿ ಕಾರ್ಯನಿರತ ಪೋಲಿಸ್ ಸಿಬ್ಬಂದಿಗಳಿಗೆ ಸಸಿ ನೀಡಿ ಸನ್ಮಾನಿಸಲಾಯಿತು. ಪರಿಸರ ಉಳಿಸೋಣ, ಗಿಡಗಳನ್ನು ಬೆಳೆಸೋಣ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂಬ ಧ್ಯೇಯ ವಾಕ್ಯಗಳು ಮಕ್ಕಳ ಮನಸ್ಸಿನಲ್ಲಿ ಬೇರೂರಿದವು.