ವಿಶ್ವ ಪರಿಸರ: ಸಸಿ ವಿತರಣೆ

ಲೋಕದರ್ಶನವರದಿ

ಧಾರವಾಡ05: ನಗರದ ನೇಚರ್ ಫಸ್ರ್ಟ ಇಕೋ ವಿಲೇಜ್ ಇವರ ಸಹಯೋಗದಲ್ಲಿ ವಿಷನ್ ಸ್ಪೋಟ್ಸರ್್, ರಂಗಪರಿಸರ ಧಾರವಾಡ ಇವರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಸಾರ್ವಜನಿಕರಿಗೆ ಉಚಿತ ಸಸಿಗಳ ವಿತರಣೆ ಕಾರ್ಯಕ್ರಮವನ್ನು ನಗರದ ಕನರ್ಾಟಕ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ನೇರಳೆ ಸಸಿ, ಮಾವು, ನೆಲ್ಲಿಕಾಯಿ ಸೇರಿದಂತೆ ಇತರ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಸಾರ್ವಜನಿಕರು ಆಸಕ್ತಿಯಿಂದ ಸಸಿಗಳನ್ನು ತೆಗೆದುಕೊಂಡು ಹೋಗುವುದು ಕಂಡುಬಂದಿತು.ಇನ್ನೂ ಒಂದು ತಿಂಗಳು ಉಚಿತ ಸಸಿ ನೀಡುವ ಯೋಜನೆ ಇದ್ದು, ನಮಗೆ ಕರೆ ಮಾಡಿ ತಿಳಿಸಿದರೆ ಅವರು ಇರುವ ಸ್ಥಳಕ್ಕೆ ಹೋಗಿ ಸಸಿ ಕೋಟ್ಟು ಬರುತ್ತೇವೆ ಮತ್ತು ಇನ್ನೂ ಹೆಚ್ಚಿನ ಸಸಿ ನೆಡುವ ಆಸಕ್ತಿ ಇದ್ದವರು ನಮ್ಮ ಮೊಬೈಲ್ ನಂಬರ್ 9019456969 ಕರೆ ಮಾಡಿದರೆ ಉಚಿತವಾಗಿ ಸಸಿ ನೀಡುತ್ತೇವೆ ಎಂದು ಜೀವನ್ ಲಂಗೋಟಿ ತಿಳಿಸಿದರು. 

   ಸುಭಾಷ್ ಪಾಟೀಲ್, ರವೀಂದ್ರ ಪಾಟೀಲ್, ಅನಿಲ್ ಕರಡ್ಡಿ, ಮೋಹನ್ ಲಂಗೋಟಿ ಉಪಸ್ಥಿತರಿದ್ದರು. 

ಸಸಿ ನೆಟ್ಟು ಉತ್ಸುಕತೆ ತೋರಿದ ಪರಿಸರ ಪ್ರೇಮಿಗಳು: ಇನ್ನೂ ಕನರ್ಾಟಕ ಕಲಾ ಮಹಾವಿದ್ಯಾಲಯದಲ್ಲಿ ಪ್ರತಿದಿನ ಬೆಳಿಗ್ಗೆ ಜಾಗ್ಗಿಂಗ್ ಬರುವವರು ಕಾಲೇಜಿನ ಆವರಣದಲ್ಲಿ  ನಿಂಗರೆಡ್ಡಿ, ಶ್ರೀಕಾಂತ ಗಾಯಕವಾಡ, ಪ್ರಕಾಶ ಶೆಟ್ಟಿ, ಶ್ರೀಕಾಂತ ಕೆ ಎಸ್ , ಕಿರಣ ಶೆಟ್ಟಿ ಹಾಗೂ ಅಂಬರೀಷ ರಾಠೋಡ  ಸಸಿ ನೆಟ್ಟು ಉತ್ಸುಕತೆ ತೋರಿದರು, ಹಾಗೂ ಮಾವು ಸಸಿಗಳನ್ನು ನೀಡಿ ಅವುಗಳನ್ನು ಈ ಸ್ಥಳದಲ್ಲಿ ಬೆಳೆಸೋಣ ಎಂದು  ಸಂತೋಷ ವ್ಯಕ್ತಪಡಿಸಿದರು.