ವಿಶ್ವ ವಿಕಲ ಚೇತನ ದಿನಾಚರಣೆ ಹಾಗೂ ವಿಕಲ ಚೇತನರಿಗೆ ಗಾಲಿ ಕುರ್ಚಿ ವಿತರಣಾ ಸಮಾರಂಭ
World Disabled Persons Day and wheelchair distribution ceremony for disabled people
ಬೀಳಗಿ 30 : ದಿವ್ಯಾಂಗರ ಕಷ್ಟ ಸುಖಗಳನ್ನು ಆಲಿಸಿ ಕೇಂದ್ರ ಹಾಗೂ ರಾಜ್ಯ ಸರಕಾರ ಮತ್ತು ಸಂಘ ಸ್ಥಳೀಯ ಸಂಸ್ಥೆಗಳು ಉದ್ಯಮಗಳಿಂದ ಸಿಗುವ ವಿವಿಧ ಮೂಲಭೂತ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಅವುಗಳು ದಿವ್ಯಾಂಗರ ಮನೆಗಳಿಗೆ ತಲುಪಿಸುವ ಸದುದ್ದೇಶ ಹೊಂದಿ ದಿವ್ಯಾಂಗರ ಸೇವೆಗೆ ಹಗಲಿರಳು ಶ್ರಮಿಸುತ್ತಿರುವ ಅಂತರರಾಷ್ಟ್ರೀಯ ದಿವ್ಯಾಂಗ ಕ್ರೀಡಾಪಟು ಸಾಮಾಜಿಕ ಕಾರ್ಯಕರ್ತ ಶೇಖರ ಕಾಖಂಡಕಿಯವರ ನಿಸ್ವಾರ್ಥ ಸೇವೆ ಸಾಮಾಜಕ್ಕೆ ಮಾದರಿ,ಶ್ಲಾಘನೀಯ ಕಾರ್ಯ ಎಂದು ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಪ.ಹಿರೇಮಠ ಹೇಳಿದರು.
ಅವರು ಬೀಳಗಿ ಪಟ್ಟಣದ ಅನ್ನಪೂರ್ಣೆಶ್ವರಿ ಬ್ರಹನ್ಮಠದ ಆವರಣದಲ್ಲಿ ನವಚೇತನ ಚಾರಿಬಲ್ ಟ್ರಸ್ಟ್ ಪಾರ ಡಿಸೆಬಲ್ಡಸ್ ರಾಮನಗರ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಗ್ರಾಮೀಣ ಅಭಿವೃದ್ಧಿ ಸಂಘ ವಿವಿಧ ವಿಕಲ ಚೇತನ ಸೇವಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ವಿಕಲ ಚೇತನ ದಿನಾಚರಣೆ ಹಾಗೂ ವಿಕಲ ಚೇತನರಿಗೆ ಗಾಲಿ ಕುರ್ಚಿ ವಿತರಣಾ ಸಮಾರಂಭಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ನಗರ,ಪಟ್ಟಣ ,ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಗ್ರಾಮೀಣಾಭೀವೃದ್ದಿ ಪಂಚಾಯತ ರಾಜ ಇಲಾಖೆ ಶೇ, 5 ರಷ್ಟು ಅನುದಾನವನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ದಿವ್ಯಾಂಗರಿಗೆ ತಲುಪಿಸಬೇಕು,
ಜಿಲ್ಲಾಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ತಹಶೀಲ್ದಾರ ಪ್ರತಿ ತಿಂಗಳಿಗೊಮ್ಮೆ ದಿವ್ಯಾಂಗರ ಸಭೆ ಕರೆದು ಅವರ ಕಷ್ಟ ಸುಖಗಳನ್ನು ಕೇಳಿ ಸರಕಾರ ಸವಲತ್ತುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.ಕೋಟ್ ದಿವ್ಯಾಂಗರಿಗೆ ಸರಕಾರದ ಸವಲತ್ತುಗಳು ಸರಿಯಾಗಿ ತಲುಪಿಸುತ್ತಿಲ್ಲ ಆದರೆ ನವಚೇತನ ಚಾರಿಬಲ್ ಟ್ರಸ್ಟ್ ಮನವಿ ಮೇರೆಗೆ ಟೊಯೋಟಾ ಮೊಬಿಲಿಟಿ ಪ್ರೋಗ್ರಾಮ ಮೂಲಕ ಸುಸರ್ಜಿತ ಗಾಲಿ ಖುರ್ಚಿಗಳನ್ನು ನೀಡುತ್ತಿದ್ದು ರಾಜ್ಯದ ಎಲ್ಲ ಜಿಲ್ಲೆಯ ದಿವ್ಯಾಂಗರಿಗೆ ವಿತರಣೆ ಮಾಡುತ್ತಿದ್ದು ದಿವ್ಯಾಂಗರು ಸದುಪಯೋಗ ಪಡಿಸಿಕೊಳ್ಳಬೇಕು ದಿವ್ಯಾಂಗರಿಗೆ ಸಹಾಯ ಸಹಕಾರ ನೀಡುತ್ತಿರುವ ಸಂಸ್ಥೆಗಳಿಗೆ ಸದಾ ಚಿರರುಣಿ ಶೇಖರ ವಾಯ್ ಕಾಖಂಡಕಿ ಅಂತರರಾಷ್ಟ್ರೀಯ ದಿವ್ಯಾಂಗ ಕೀಡಾ ಪಟು ಸಾನಿಧ್ಯವನ್ನು ಅನ್ನಪೂರ್ಣೇಶ್ವರಿ ಬ್ರಹನ್ಮಠದ ಶಿವಾನಂದ ದೇವರು ವಹಿಸಿದರು.
ವಿಕಲಚೇತನ ಅಂತರರಾಷ್ಟ್ರೀಯ ಕ್ರೀಡಾ ಪಟು ಶೇಖರ ಕಾಖಂಡಕಿ ನೇತೃತ್ವ ವಹಿಸಿದ್ದರು. ಆರ್ ಪಿ ಡಿಗ್ರಿ ಕಾಲೇಜಿನ ಅತಿಥಿ ಉಪನ್ಯಾಸಕ ಎಸ್.ಎನ್ ಮುತ್ತಗಿ, ಗಿರಿಸಾಗರ ಗ್ರಾ. ಪಂ ಸದಸ್ಯ ಪ್ರಕಾಶ ಹೆಗ್ಗೂರ, ಎಲ್ ಐ ಸಿ ಅಭಿವೃದ್ದಿ ಅಧಿಕಾರಿ ಉಮೇಶ ದೊಡಮನಿ, ವಿಕಲ ಚೇತನರ ರಾಜ್ಯ ಮುಖಂಡ ಉಮೇಶ ಚನ್ನಿ ವಿ.ಮಾ. ಪ್ರೌಡ ಶಾಲೆಯ ಶಿಕ್ಷಕ ಬೀಮಪ್ಪ ತೆಗ್ಗಿ ದಿವ್ಯಾಂಗ ಕ್ರೀಡಾಪಟುಗಳಾದ ಬೀಮಣ್ಣ ದೇವನಾಳ ಮಾಶಪ್ಪ ಕೊಂಡಕಾರ, ಲೋಕಣ್ಣ ಪರಣ್ಣವರ ,ವಿಠ್ಟಲ ಯಳ್ಳಿಗುತ್ತಿ ಉಪಸ್ಥೀತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 