ವಿಶ್ವ ಚಾಂಪಿಯನ್ಶಿಪ್: ಪ್ರೀ ಕ್ವಾರ್ಟರ್ ಫೈನಲ್ ತಲುಪಿದ ಚೆನ್ ಲಾಂಗ್

ಬಸೆಲ್, ಸ್ವಿಜರ್ಲೆಂಡ್, ಆ 22              ಚೀನಾದ ಒಲಿಂಪಿಕ್ ಚಾಂಪಿಯನ್ ಚೆನ್ ಲಾಂಗ್ ಅವರು ಕಠಿಣ ಹೋರಾಟ ನಡೆಸಿ ಲೀ ಚೆಯುಕ್ ಯಿಯು ವಿರುದ್ಧ ಗೆದ್ದು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಅಂತಿಮ 16 ರ ಹಂತಕ್ಕೆ ಪ್ರವೇಶಿಸಿದ್ದಾರೆ.  

2014 ಮತ್ತು 2015ರ ಚಾಂಪಿಯನ್ ಚೆನ್ ಅವರು 58 ನಿಮಿಷಗಳ ಕಾಲ ನಡೆದ ಕಾಳಗದಲ್ಲಿ 22ರ ಪ್ರಾಯದ ಹಾಂಕಾಂಗ್ನ ಲೀ ಚೆಯುಕ್ ಯಿಯು ವಿರುದ್ಧ 22-20, 21-14 ಅಂತರದಲ್ಲಿ ಗೆದ್ದು ಪಾರಮ್ಯ ಮೆರೆದರು. ಚೀನಾ ಆಟಗಾರ ಪ್ರೀ ಕ್ವಾರ್ಟರ್ ಹಣಾಹಣಿಯಲ್ಲಿ ಮತ್ತೊಬ್ಬ ಹಾಂಕಾಂಗ್ ಆಟಗಾರ ಎನ್ಜಿ ಲಾಂಗ್ ಅಂಗುಸ್ ಅವರನ್ನು ಎದುರಿಸಲಿದ್ದಾರೆ.  

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚೆನ್ ಯುಫೀ ಅವರು ಥಾಯ್ಲೆಂಡ್ನ ಪೋನರ್್ಪವೀ ಚೋಚುವಾಂಗ್ ಅವರ ವಿರುದ್ಧ 21-14, 21-19 ನೇರ ಸೆಟ್ಗಳಿಂದ ಗೆದ್ದು ವಿಶ್ವ ಚಾಂಪಿಯನ್ಶಿಪ್ನ 16ರ ಹಂತಕ್ಕೆ ತಲುಪಿದ ಮೂರನೇ ಚೀನಾ ಆಟಗಾರ್ತಿ ಎನಿಸಿಕೊಂಡರು.  

ಚೆನ್ ಸಹಆಟಗಾರ್ತಿ ಕೈ ಯನ್ಯನ್ ಅವರ ಯಶಸ್ವಿ ಓಟವನ್ನು ದಕ್ಷಿಣ ಕೊರಿಯಾದ ಕಿಮ್ ಕಿಮ್ ಗಾ-ಯುನ್ ತಡೆದರು. ಅಮೋಘ ಪ್ರದರ್ಶನ ತೋರಿದ ಕಿಮ್ ಗಾ-ಯುನ್ 21-14, 16-21, 21-10 ಅಂತರದಲ್ಲಿ ಗೆದ್ದು ಬೀಗಿದರು.