ಪೆಡಗಾಜಿಕಲ್ ವಿಧಾನಗಳಾಗಿ ಬಳಸುವ ಕಾರ್ಯಾಗಾರ

ಪೆಡಗಾಜಿಕಲ್ ವಿಧಾನಗಳಾಗಿ ಬಳಸುವ ಕಾರ್ಯಾಗಾರ Workshops used as pedagogical methods

ಲೋಕದರ್ಶನ ವರದಿ 

ಬೆಳಗಾವಿ 06: “ವರ್ಚುವಲ್ ರಿಯಾಲಿಟಿ ಮತ್ತು ಸಿಮ್ಯುಲೇಷನ್ ಮಾದರಿಗಳನ್ನು ಬೋಧನೆ-ಅಧ್ಯಯನವನ್ನು ಉತ್ತೇಜಿಸುವ ಪೆಡಗಾಜಿಕಲ್ ವಿಧಾನಗಳಾಗಿ ಬಳಸುವ ಕಾರ್ಯಾಗಾರ” ವನ್ನು 2026ರ ಮೇ 6ರಂದು ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿ, ಬೆಳಗಾವಿಯ ಫಾರ್ಮಕಾಲಜಿ ವಿಭಾಗವು ಡಿಪಾರ್ಟ್‌ಮೆಂಟ್ ಆಫ್ ಫಾರ್ಮಸಿ ಎಜುಕೇಶನ್ (ಆಓಕಇ) ಆಶ್ರಯದಲ್ಲಿ ಆಯೋಜಿಸಿತು.  

ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಡಾ. ಪಿ. ಎ. ಪಾಟೀಲ, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಫಾರ್ಮಕಾಲಜಿ ವಿಭಾಗ, ಯುಎಸ್‌ಎಂ-ಕೆಎಲ್‌ಇಐಎಂಪಿ, ಬೆಳಗಾವಿ ಅವರ ಶುಭ ಹಸ್ತಗಳಿಂದ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಡಾ. ಸುನಿಲ್ ಎಸ್‌. ಜಲಾಲ್ಪುರೇ, ಪ್ರಿನ್ಸಿಪಲ್; ಡಾ. ವಿ. ಎಸ್‌. ಮಸ್ತಿಹೋಳಿಮಠ, ಡೀನ್, ಫ್ಯಾಕಲ್ಟಿ ಆಫ್ ಫಾರ್ಮಸಿ; ಡಾ. ಎಂ. ಬಿ. ಪಾಟೀಲ, ಉಪ ಪ್ರಿನ್ಸಿಪಲ್; ಡಾ. ಗೀತಾಂಜಲಿ ಸಲೀಮಠ; ಡಾ. ಎನ್‌. ಎ. ಖತೀಬ್ ಹಾಗೂ ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿ, ಬೆಳಗಾವಿಯ ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು.  

ಡಾ. ಎನ್‌. ಎ. ಖತೀಬ್, ಮುಖ್ಯಸ್ಥರು, ಫಾರ್ಮಕಾಲಜಿ ವಿಭಾಗ, ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿ, ಬೆಳಗಾವಿ ಅವರು ಸಭಿಕರನ್ನು ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.  

ಡಾ. ಗೀತಾಂಜಲಿ ಸಲೀಮಠ, ಡೋಪ್ ಸಂಯೋಜಕರು (ಆಓಕಇ ಅಠತಜಟಿಜಡಿ), ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿ, ಬೆಳಗಾವಿ ಅವರು ಡೋಪ್‌ನ ಉದ್ದೇಶಗಳು ಮತ್ತು ಕಾರ್ಯಗಳ ಬಗ್ಗೆ ವಿವರಿಸಿದರು.  

ಮುಖ್ಯ ಅತಿಥಿಗಳಾದ ಡಾ. ಪಿ. ಎ. ಪಾಟೀಲ ಅವರು ಬೋಧನೆ-ಅಧ್ಯಯನದ ವಿವಿಧ ವಿಧಾನಗಳು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲು ಶಿಕ್ಷಕರಿಗೆ ಜೀವಮಾನಪೂರ್ತಿಯ ಅಧ್ಯಯನದ ಮಹತ್ವವನ್ನು ಒತ್ತಿಹೇಳಿದರು. ಅವರು ಆರೋಗ್ಯ ವ್ಯವಸ್ಥೆಯ ಅಗತ್ಯಗಳನ್ನು ಪೂರೈಸಲು ಬೋಧನಾ ವಿಧಾನಗಳಲ್ಲಿ ನಿರಂತರ ಸುಧಾರಣೆಯ ಅಗತ್ಯವಿದೆ ಎಂದು ತಿಳಿಸಿದರು.  

ಡಾ. ಸುನಿಲ್ ಎಸ್‌. ಜಲಾಲ್ಪುರೇ, ಪ್ರಿನ್ಸಿಪಲ್, ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿ, ಬೆಳಗಾವಿ ಅವರು ಆರೋಗ್ಯ ಶಿಕ್ಷಣದಲ್ಲಿ ಶಿಕ್ಷಕರ ಸಮಗ್ರ ಅಭಿವೃದ್ಧಿಗಾಗಿ ತರಬೇತಿಯ ಮಹತ್ವವನ್ನು ಹಾಗೂ ಬೋಧನೆ-ಅಧ್ಯಯನ ವಿಧಾನಗಳಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು.  

ಸಂಪನ್ಮೂಲ ವ್ಯಕ್ತಿಗಳಾದ ಡಾ. ಅನುಪಮಾ ಎಂ. ಜಿ., ಡಾ. ಸಂಜಯ್ ದೇಸ್ಪಾಂಡೆ, ಡಾ. ಚಂದ್ರಗೌಡ ಆರ್‌. ಪಾಟೀಲ ಮತ್ತು ಡಾ. ವಿಶಾಲ್ ಎಸ್‌. ಪಾಟೀಲ ಅವರು ಬೋಧನೆ-ಅಧ್ಯಯನ ವಿಧಾನಗಳ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿ ನಿರಂತರ ಸುಧಾರಣೆಯ ಅಗತ್ಯವನ್ನು ವಿವರಿಸಿದರು.  

ಸುಮಾರು 40ಕ್ಕೂ ಹೆಚ್ಚು ವಿವಿಧ ಫಾರ್ಮಸಿ ಸಂಸ್ಥೆಗಳ ಅಧ್ಯಾಪಕರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.  

ಡಾ. ನಮಿತ್ ಕುಡತರ್ಕರ್, ಸಹಾಯಕ ಪ್ರಾಧ್ಯಾಪಕರು, ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿ, ಬೆಳಗಾವಿ ಅವರು ಧನ್ಯವಾದಗಳನ್ನು ಅರ​‍್ಿಸಿದರು.