ಕೆಎಂಎಫ್ ನಂದಿನಿ ಮಿಲ್ಕ್‌ ದುಬಾರಿ ಹಣಕ್ಕೆ ಮಾರಾಟ: ಕೇಳಿದವರ ಮೇಲೆ ಧಮ್ಕಿ

ಕೆಎಂಎಫ್ ನಂದಿನಿ ಮಿಲ್ಕ್‌ ದುಬಾರಿ ಹಣಕ್ಕೆ ಮಾರಾಟ: ಕೇಳಿದವರ ಮೇಲೆ ಧಮ್ಕಿ KMF Nandini Milk sold for a high price: Threats on those who asked

ಹುಕ್ಕೇರಿ 06: ನಂದಿನಿ ಮಿಲ್ಕ್‌ ದುಬಾರಿ ಹಣ, ಪ್ರಶ್ನಿಸಿದ್ದಕ್ಕೆ ಗ್ರಾಹಕರ ಮೇಲೆ ಹಾಗೂ ಪತ್ರಕರ್ತರಿಗೆ ಧಮ್ಕಿ ಹಾಗೂ ಹಲ್ಲೆ. ನಗರದ ಹುಕ್ಕೇರಿಯ ಬಸ್ ನಿಲ್ದಾಣದ ಹತ್ತಿರ ಇರುವ ನಂದಿನಿ ಮಳಿಗೆಯಲ್ಲಿ, ಕೆಎಂಎಫ್ ನಂದಿನಿ ಹಾಲೂ ಹಾಗೂ ಮೊಸರು ಮಾರಾಟಗಾರರು ಪ್ರತಿ ಲೀಟರ್ ಗೆ 6 ರೂಪಾಯಿ ದುಬಾರಿ ಹೆಚ್ಚು ವರಿ ಹಣ ತೆಗೆದುಕೊಳ್ಳುತ್ತಿದ್ದಾರೆ, ಎಂಬ ಮಾಹಿತಿ ಮೆರೆಗೆ, ಗ್ರಾಹಕರು ಹೆಚ್ಚುವರಿ ಹಣ ಏಕೆ ತೆಗೆದುಕೊಳ್ಳುತ್ತೀರಿ ಎಂದು ಕೇಳಿದಾಗ. ನಂದಿನಿ ಮಿಲ್ಕ್‌ ಗುತ್ತಿಗೆದಾರ ಯಾರು ಈ ಅಂಗಡಿ ಮಾಲೀಕ ಬೇರೆ ಮಾರಾಟ ಮಳಿಗೆಯಲ್ಲಿರುವವರೇ ಬೇರೆ ಅದಕ್ಕಾಗಿ ಇತನು ರಾಜಾರೋಷವಾಗಿ ರೂಮ್ ಬಾಡಿಗೆ, ಫ್ರಿಡ್ಜ್‌ ಲೈಟ್, ಬಿಲ್ ಹಾಗೂ ನಾವು ಮೂರು ಜನರ ಸಂಬಳ ತೆಗೆದುಕೊಳ್ಳುತ್ತೇವೆ ಅಂತ ನೇರವಾಗಿ ಹೇಳ್ತಿದ್ದಾನೆ.

ನಾನು ಹೆಚ್ಚುವರೆ ಹಣ ನೀಡುವುದಿಲ್ಲ ನಾನು ನಿಮ್ಮ ಮೇಲೆ ಕಂಪ್ಲೇಟ್ ಮಾಡುತ್ತೇನೆ ಎಂದಾಗ ಗ್ರಾಹಕನಿಗೆ ಅವಾಚ್ಯವಾದ ಶಬ್ದದಿಂದ ನಿಂದಿಸಿ ನೀ ಏನಾದರೂ ಮಾಡಿಕೋ ಎಂದು ವಾದ ವಿವಾದವಾಯಿತು ಗ್ರಾಹಕರು  112 ಗೆ ಕರೆ ಮಾಡಿ ದೂರು ನಿಡಿರುತ್ತಾರೆ 112 ಪೊಲೀಸರು ಬಂದು ಗ್ರಾಹಕರ ಜೊತೆ ಮಾತನಾಡಿ  ಅಂಗಡಿ ಅವರಿಗೆ ತಿಳಿಹೇಳಿದಾಗ ಕೇಳದ ಅಂಗಡಿಯವರಿಗೆ ಪೊಲೀಸ್ ಠಾಣೆ ಮೆಟ್ಟಿಲು ಏರಬೇಕಾಯಿತು ಇನ್ನು ಮುಂದೆ ಹುಕ್ಕೇರಿ ಪೊಲೀಸರು ಯಾವ ರೀತಿ ಕ್ರಮ ಜರುಗಿಸುತ್ತಾರೆ ಅಥವಾ ಹೆಚ್ಚುವರಿ ಹಣ ಪಡೆಯುವವರಿಗೆ ಕುಮ್ಮಕ್ಕು ನೀಡುತ್ತಾರೆಯೇ ಎಂಬುದು ಕಾದು ನೋಡಬೇಕು. 

ಪ್ರತಿಷ್ಠಿತ ಕೆಎಂಎಫ್ ಮಂಡಳಿಯವರು ನಿರ್ದೇಶಕರು  ನಂದಿನಿ ಹಾಲಿನ ಉತ್ಪಾದಕರು ಇವರ ಮೇಲೆ ಯಾವ ರೀತಿ ಕ್ರಮ ಜರುಗಿಸುತ್ತಾರೆ ಎಂಬುದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ದುಬಾರಿ ಹಣ ಹಾಗೂ ಅವಾಚ್ಯವಾಗಿ ನಿಂದಿಸಿದ ಪ್ರಕರಣಕ್ಕೆ ನಾಂದಿ ಹಾಡುತ್ತಾರೆಯೇ ಅಥವಾ ಇತಿಶ್ರೀ ಹಾಡಿ ಕೈ ಬಿಡುತ್ತಾರೆಯೇ ಕಾದು ನೋಡಬೇಕಿದೆ.