“ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿ ತರಬೇತಿ” ಕುರಿತು ನಡೆದ ಕಾರ್ಯಾಗಾರ
Workshop on “Skill Development and Vocational Training”
ವಿಜಯಪುರ 02: ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಶಿಕ್ಷಣ ಪಡೆಯುವುದು ಅತ್ಯಂತ ಅಗತ್ಯವಾಗಿದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಷಣ್ಣನವರ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಕೋಶ ಹಾಗು ಕೋಚಿಂಗ್ ಅಕಾಡೆಮಿಯ ಸಹಯೋಗದಲ್ಲಿ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಪಿಎಂ ಉಷಾ ಮತ್ತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಪರಿಷತ್ತಿನ ಅಡಿಯಲ್ಲಿ “ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿ ತರಬೇತಿ” ಕುರಿತು ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ಉದ್ಯೋಗ ಮಾರುಕಟ್ಟೆಯ ಸ್ಪರ್ಧೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಾಫ್ಟ್ ಸ್ಕಿಲ್ಸ್, ಡಿಜಿಟಲ್ ಸ್ಕಿಲ್ಸ್ ಮತ್ತು ವ್ಯಕ್ತಿತ್ವ ಅಭಿವೃದ್ಧಿ ಕೌಶಲ್ಯಗಳು ಜೀವನ ರೂಪಾಂತರಕ್ಕೆ ಸಹಾಯಕವಾಗುತ್ತವೆ ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಹಿರಿಯ ಕಾರ್ೊರೇಟ್ ಟ್ರೈನರ್, ಎಚ್‌ಆರ್ ಕನ್ಸಲ್ಟೆಂಟ್ ಹಾಗೂ ಪೀಪಲ್ ಡೆವಲಪ್ಮೆಂಟ್ ಸ್ಪೆಷಲಿಸ್ಟ್ ಮೋಹನ್ ಕೆ. ನಿಂಜಪ್ಪ ಮಾತನಾಡಿ, ಆಧುನಿಕ ಕೆಲಸದ ವಾತಾವರಣದಲ್ಲಿ ಸಂವಹನ ಕೌಶಲ್ಯ, ನಾಯಕತ್ವ, ತಂಡ ಕಾರ್ಯ ಹಾಗೂ ಧನಾತ್ಮಕ ಮನೋಭಾವ ಅತ್ಯಂತ ಮಹತ್ವದ್ದೆಂದು ತಿಳಿಸಿದರು.ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಪ್ರಮಾಣಿತ ಕಾರ್ೊರೇಟ್ ಟ್ರೈನರ್ ಹಾಗೂ ಎಚ್‌ಆರ್ ತಜ್ಞ ಗೀರೀಶ ಎಸ್. ಅಂಗಡಿ ಮಾತನಾಡಿ, ಡಿಜಿಟಲ್ ತಿಳುವಳಿಕೆ, ವೃತ್ತಿಪರ ಕೌಶಲ್ಯ ಮತ್ತು ನಿರಂತರ ಕಲಿಕೆಯ ಮಹತ್ವ ಹಾಗೂ ಅವುಗಳ ಅಳವಡಿಕೆ ಕುರಿತು ವಿವರಿಸಿದರು.ಕಾರ್ಯಾಗಾರದ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ಮೈಸೂರು ಮೂಲದ ಸಾಫ್ಟ್ ಸ್ಕಿಲ್ ಟ್ರೈನರ್, ಟೀಮ್ ಬಿಲ್ಡಿಂಗ್ ಹಾಗೂ ಓಟ್ಬೌಂಡ್ ಪರಿಣತ ಓಂ ಕಿರಣ ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಆಧಾರಿತ ಚಟುವಟಿಕೆಗಳ ಮೂಲಕ ತಂಡ ನಿರ್ಮಾಣ ಮತ್ತು ವ್ಯಕ್ತಿತ್ವ ಅಭಿವೃದ್ಧಿಯ ಕುರಿತು ಮಾರ್ಗದರ್ಶನ ನೀಡಿದರು..
ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಕೋಶ ಸಂಯೋಜಕ ಡಾ ಸಿ ಎಂ ಮಠಪತಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕೋಚಿಂಗ್ ಅಕಾಡೆಮಿಯ ಸಂಯೋಜಕ ಡಾ ಗಣೇಶ್ ಎಸ್ ಆರ್, ವಿದ್ಯಾರ್ಥಿನಿಯರು, ಪ್ರಾಧ್ಯಪಕರು ಹಾಗೂ ಮತ್ತಿತರಿದ್ದರು. ಫೋಟೋ ಕ್ಯಾಪ್ಷನ್:ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಕೋಶ ಹಾಗು ಕೋಚಿಂಗ್ ಅಕಾಡೆಮಿಯ ಸಹಯೋಗದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರವನ್ನು ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಷಣ್ಣನವರ ಉದ್ಘಾಟಿಸಿದರು.
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ 