ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳಿಗೆ ನಿಲಯಗಳ ನಿರ್ವಹಣೆ ಕುರಿತು ಕಾರ್ಯಾಗಾರ
Workshop on hostel management for Social Welfare Department staff
ಲೋಕದರ್ಶನ ವರದಿ
ಗದಗ ಏಪ್ರಿಲ್ 27: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಗದಗ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗರವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 22-04-2026 ರಂದು ವಸತಿ ನಿಲಯಗಳ ಮತ್ತು ವಸತಿ ಶಾಲೆಗಳ ನಿರ್ವಹಣೆ, ದಾಖಲಾತಿಗಳ ನಿರ್ವಹಣೆ, ಆಹಾರ ಸುರಕ್ಷತೆ ಹಾಗೂ ಇ ಗುರುತು ಹಾಗೂ ಬಿಲ್‌ಗಳ ತಯಾರಿಕೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ ಇವರು ಉದ್ಘಾಟಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಡಾ.ನಂದಾ ಹಣಬರಟ್ಟಿ ಮಾತನಾಡಿ ಕಾರ್ಯಾಗಾರದ ವಿಷಯಗಳ ಕುರಿತು ಎಲ್ಲ ಸಿಬ್ಬಂದಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.
ನಿಲಯಗಳಲ್ಲಿ ದಾಖಲಾತಿಗಳನ್ನು ನಿರ್ವಹಿಸುವ ಕುರಿತು ಬಿ.ಎಮ್ ಬಡಿಗೇರ, ನಿಲಯಗಳ ನಿರ್ವಹಣೆ ಕುರಿತು ಉದಯಕುಮಾರ ಯಲಿವಾಳ, ಆಹಾರ ಸಾಮಗ್ರಿಗಳ ಬೇಡಿಕೆ ಕುರಿತು ಗೋಪಾಲ ಟಿ ಲಮಾಣಿ, ಬಿಲ್‌ಗಳ ತಯಾರಿಕೆ ಕುರಿತು ಮಲ್ಲಿಕಾರ್ಜುನ ಹೊಸೂರ ಲೆಕ್ಕ ಅಧೀಕ್ಷಕರು ಜಿಲ್ಲಾ ಪಂಚಾಯತ ಗದಗ ಹಾಗೂ ಸರ್ಫರಾಜ ಅಹಮ್ಮದ ಮುಖ್ಯ ಲೆಕ್ಕಿಗರ ಜಿಲ್ಲಾ ಖಜಾನೆ ಇಲಾಖೆ ಗದಗ. ಹಾಗೂ ಆಹಾರ ಸುರಕ್ಷತೆಯ ಕುರಿತು ರಾಜೇಂದ್ರ ಗಡಾದ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಗದಗ ರವರು ಉಪನ್ಯಾಸವನ್ನು ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಎಂ.ತುಂಬರಮಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ಮಂಜುಳಾ ಸೋಮಕ್ಕನವರ, ಸಹಾಯಕ ನಿರ್ದೇಶಕರಾದ ಗೋಪಾಲ ಟಿ ಲಮಾಣಿ, ಉದಯಕುಮಾರ ಯಲಿವಾಳ, ಬಿ.ಎಮ್ ಬಡಿಗೇರ, ಶ್ರೀಮತಿ ಗೀತಾ ಆಲೂರ, ಕಛೇರಿ ಸಿಬ್ಬಂದಿಗಳು ಹಾಗೂ ಜಿಲ್ಲೆಯ ಎಲ್ಲ ನಿಲಯ ಮೇಲ್ವಿಚಾರಕರು ಹಾಜರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 