ಬೆಳಗಾವಿ 21: ದಿ. 21 ಫೆಬ್ರವರಿ 2025 ರಂದು "ಡೇಟಾ ಸೈನ್ಸ್ ಮತ್ತು ಎಐ: ಹೊಸ ಫಾರ್ಮಾ ಆವಿಷ್ಕಾರಗಳನ್ನು ಅನ್ಲಾಕ್ ಮಾಡುವುದು" ಕುರಿತು ಕಾರ್ಯಗಾರವನ್ನು ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿ, ಬೆಳಗಾವಿ, ಆಯೋಜಿಸಿತ್ತು.
ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿ ಡಾ. ಆಕಾಶ್ ಗಡ್ಗಡೆ, ಸಂಸ್ಥಾಪಕ ಮತ್ತು ನಿರ್ದೇಶಕ, ಏಜೆಆರ್ ಕ್ಯೂರ್ವೈಬ್ಸ್, ಬೆಂಗಳೂರು ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ವದಿರಾಜ ಭರದ್ವಾಜ್, ಇಂಡಸ್ ವಿವಾ ಹೆಲ್ತ್ ಸೈನ್ಸಸ್ ಮತ್ತು ಇಂಡೆಕ್ಸ್ ಗುಂಪು ಸಂಸ್ಥೆಗಳ ಫಾರ್ಮುಲೇಶನ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥ, ಬೆಂಗಳೂರು, ಪ್ರೊ. (ಡಾ) ಸುನೀಲ ಎಸ್ ಜಲಾಲಪುರೆ, ಪ್ರಾಂಶುಪಾಲರು, ಡಾ. ಎಂ. ಬಿ. ಪಾಟೀಲ, ಉಪಪ್ರಾಂಶುಪಾಲರು. ಡಾ, ವಿ. ಎಸ್. ಮಾಸ್ತಿಹೋಲಿಮಠ, ಡೀನ್, ಡಾ.ಪಿ. ಎಂ. ದಂಡಗಿ, ಡಾ. ಅರ್ಚನಾ ಎಸ್. ಪಾಟೀಲ ಮತ್ತು ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿ, ಬೆಳಗಾವಿಯ ಎಲ್ಲಾ ಅಧ್ಯಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡಾ. ಪಿ. ಎಂ. ದಂಡಗಿ, ವಿಭಾಗದ ಮುಖ್ಯಸ್ಥರು ಸಭೆಯ ಉಪಸ್ಥಿತರನ್ನು ಸ್ವಾಗತಿಸಿದರು. ಡಾ. ಅರ್ಚನಾ ಎಸ್. ಪಾಟೀಲ, ಮುಖ್ಯ ಅತಿಥಿಯನ್ನು ಪರಿಚಯಿಸಿದರು.
ಡಾ. ಆಕಾಶ ಗಡ್ಗಡೆ, ಮುಖ್ಯ ಅತಿಥಿ ಅವರು ಓಷಧಿ ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸುವಲ್ಲಿ ರಾಸಾಯನಿಕ ತಜ್ಞರು, ರೂಪರೇಖಕರು ಮತ್ತು ವೈದ್ಯ ವ್ರುಂಧದವರು ಜಂಟಿಯಾಗಿ ಕಾರ್ಯನಿರ್ವಹಿಸುವ ಮಹತ್ವವನ್ನು ಒತ್ತಿ ಹೇಳಿದರು.
ಪ್ರಾಂಶುಪಾಲರಾದ ಡಾ. ಸುನಿಲ್. ಎಸ್. ಜಲಾಲಪುರೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಆರೋಗ್ಯ ವ್ಯವಸ್ಥೆಯ ಅಗತ್ಯವನ್ನು ಪೂರೈಸಲು ಆರೋಗ್ಯ ರಕ್ಷಣೆಯಲ್ಲಿ ಎಐ (ಂಋ) ಮತ್ತು ವಿಜ್ಞಾನವನ್ನು ಸಂಯೋಜಿಸುವ ಅಗತ್ಯತೆಯ ಕುರಿತು ಮಾತನಾಡಿದರು.
ವದಿರಾಜ ಭರದ್ವಾಜ ಸಂಪನ್ಮೂಲ ವ್ಯಕ್ತಿ, ಅವರು ಡೇಟಾ ವಿಶ್ಲೇಷಣೆ ಯಂತ್ರವಿದ್ಯೆ ಮತ್ತು ಎಐ (ಂಋ) ನ ನೈಜ ಪ್ರಪಂಚದ ಅನ್ವಯಿಕೆಗಳ ಕುರಿತು ಮಹತ್ವಪೂರ್ಣ ದೃಷ್ಟಿಕೋನಗಳನ್ನು ಹಂಚಿಕೊಂಡರು. ಡಾ. ಅರ್ಚನಾ ಎಸ್. ಪಾಟಿಲ್ ಅವರು ಸಂಶೋಧನಾ ಲೇಖನಗಳನ್ನು ಬರೆಯಲು ಎಐ (ಂಋ) ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆ ಮಾತನಾಡಿದರು.
ವಿವಿಧ ಓಷಧ ಸಂಸ್ಥೆಗಳ ಸುಮಾರು 80 ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಪ್ರೊ. ರಾಜಶ್ರೀ ಮಾಸಾರಡ್ಡಿ, ಅವರು ಧನ್ಯವಾದವನ್ನು ಹೇಳಿದರು.
ಡಾ. ಅರ್ಚನಾ ಎಸ್. ಪಾಟಿಲ್ ಮತ್ತು ರವಿಕಿರಣ ಕನಬರ್ಗಿ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.