ಗೋವಿನ ಜೋಳ ಬೆಳೆ ಕೀಟ, ಪೋಷಕಾಂಶಗಳ ಮಾಹಿತಿ ಕಾರ್ಯಾಗಾರ

ರಾಣೇಬೆನ್ನೂರು ಜು.13: ಜಿಲ್ಲೆಯ ಕಚವಿ ಗ್ರಾಮದಲ್ಲಿ ಶುಕ್ರವಾರ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರವು ರೈತರಿಗಾಗಿ ಗೋವಿನಜೋಳ ಸಮಗ್ರ ಬೆಳೆ ನಿರ್ವಹಣೆಯಲ್ಲಿ ಕೀಟ ಮತ್ತು ಪೋಶಕಾಂಶಗಳ ಕುರಿತು ತರಬೇತಿ ಕಾಯರ್ಾಗಾರ ಆಯೋಜಿಸಿತ್ತು.  

ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ|| ಅಶೋಕ ಪಿ. ಅವರು ಮಾತನಾಡಿ ಜಿಲ್ಲೆಯಲ್ಲಿ ಗೋವಿನ ಜೋಳ ಹೆಚ್ಚಾಗಿ ಬೆಳೆಯಲಾಗುತ್ತಿದೆ. 

        ಬೆಳೆಯಲ್ಲಿ  ಎಲೆಗಳು ಕೆಂಪಾಗಿ ಕಾಣುತ್ತಿದ್ದು ಇದು ರಂಜಕದ ಕೊರತೆಯಾಗಿರುತ್ತದೆ. ಜೊತೆಗೆ ಎಲೆಯ ಅಂಚಿನಲ್ಲಿ ಮತ್ತು ಮಧ್ಯದ ಭಾಗದಲ್ಲಿ ಬಿಳಿಯ ಪಟ್ಟಿಗಳು ಕಾಣಿಸುತ್ತಿದ್ದು ಇದು ಸತುವಿನ ಕೊರತೆಯಿಂದ ಬರುತ್ತದೆ ಎಂದರು.

     ಜಿಲ್ಲೆಯ  ಹಿರೇಕೇರೂರ ತಾಲ್ಲೂಕಿನಲ್ಲಿ ಗೋವಿನ ಜೋಳದ ಬೆಳೆಯಲ್ಲಿ ಪೋಷಕಾಂಶದ ಕೊರತೆ ಕಂಡುಬಂದಿದ್ದು, ರೈತರು ಆತಂಕ ಪಡದೆ ಈ  ಬೆಳೆಯ ಎಲೆಗಳು ಕೆಂಪಾಗಿ ಮತ್ತು ಬೆಳ್ಳಗೆ ಕಂಡುಬಂದ ತಕ್ಷಣ 19:19:19 ನೀರಿನಲ್ಲಿ ಕರಗುವ ರಸಗೊಬ್ಬರ (ಪ್ರತಿ ಲೀಟರ್ ನೀರಿಗೆ 5 ಗ್ರಾಂ) ಹಾಗು ಜಿಂಕ್ ಸಲ್ಫೇಟ್ (ಪ್ರತಿ ಲೀಟರ್ ನೀರಿಗೆ 2.5 ಗ್ರಾಂ) ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. 

     ತದನಂತರ 15 ದಿವಸಗಳ ನಂತರ ಕೊರತೆ ಇದ್ದರೆ ಮತ್ತೊಮ್ಮೆ ಸಿಂಪರಣೆ ಮಾಡುವ ಅವಶ್ಯಕತೆ ಇದೆ ಎಂದರು.

          ಸತತವಾಗಿ ಏಕಬೆಳೆಯಾಗಿ ಗೋವಿನಜೋಳ ಬೆಳೆಯುತ್ತಿದ್ದು ಈ ಬೆಳೆಯು ಎಕದಳದ ಧಾನ್ಯದ ಗುಂಪಿಗೆ ಸೇರಿದ್ದು ಬೇರೆ ಬೆಳೆಗೆ ಹೋಲಿಸಿದಾಗ ಸತತವಾಗಿ ಬೆಳೆಯುವುದರಿಂದ ಹೆಚ್ಚಾಗಿ ಪೋಷಕಾಂಶಗಳನ್ನು ಹೀರಿಕೊಂಡು ಮಣ್ಣಿನಲ್ಲಿ ಕೊರತೆ ಉಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಾಗಿ ಮೂಲ ರಸಗೊಬ್ಬರಗಳನ್ನು ಬಳಸುತ್ತಿದ್ದು ಸಾವಯವ ಗೊಬ್ಬರಗಳಾದ ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳ ಬಳಸುವಿಕೆ ಪ್ರಮಾಣ ಕಡಿಮೆಯಾಗಿರುತ್ತದೆ. ಇದರಿಂದಾಗಿ ಮಣ್ಣಿನಲ್ಲಿ ಲಘು ಪೋಷಕಾಂಶಗಳ ಕೊರತೆ  ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದ ಬೆಳೆ ಕುಂಟಿತವಾಗಲಿದೆ ಎಂದರು. 

          ಕಾಯರ್ಾಗಾರದಲ್ಲಿ ಪಾಲ್ಗೊಂಡ ಕೀಟ ಶಾಸ್ತ್ರಜ್ಞರಾದ ಡಾ|| ಕೆ. ಪಿ. ಗುಂಡಣ್ಣವರ, ಕೃಷಿ ಇಲಾಖೆಯ ಉಪ ಕೃಷಿ ನಿದರ್ೇಶಕಿ ಸ್ಪೂತರ್ಿ ಜಿ ಎಸ್,  ಹಿರೇಕೆರೂರ ತಾಲೂಕಿನ ಸಹಾಯಕ ಕೃಷಿ ನಿದರ್ೇಶಕ ಮಂಜುನಾಥ ಹಾಗೂ ಕೃಷಿ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳು ಭಾಗವಹಿಸಿ ರೈತರಿಗೆ ಮಾಹಿತಿ ನೀಡಿದರು.  ಕಾಯರ್ಾಗಾರದಲ್ಲಿ 300ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.