ಧಾರವಾಡ : ಬೆಳಗಾವಿ ವಿಭಾಗ ಮಟ್ಟದ 06 ಜಿಲ್ಲೆಗಳ (ಧಾರವಾಡ, ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ, ಶಿಸರ್ಿ, ಹಾವೇರಿ) ಕರ್ನಾಟಕ ಪಬ್ಲಿಕ ಶಾಲೆಗಳ ಮುಖ್ಯಸ್ಥರಿಗೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆಎರಡು ದಿನದಕಾರ್ಯಾಗಾರವನ್ನು ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆ (ಟಿಸಿಡಬ್ಲ್ಯೂ)ಧಾರವಾಡದಲ್ಲಿ ಆಯೋಜಿಸಲಾಗಿತ್ತು.
ಕಾಯರ್ಾಗಾರವನ್ನು ಸಮಗ್ರ ಶಿಕ್ಷಣ ರಾಜ್ಯಯೋಜನಾ ನಿರ್ದೇಶಕ ಡಾಎಂ.ಟಿ.ರೇಜು ಅವರು ಉದ್ಘಾಟಿಸಿ ಮಾತನಾಡಿ, ಬೆಂಗಳೂರು ರಾಜ್ಯದಲ್ಲಿ 276 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗಿದ್ದು, ಉತ್ತಮವಾಗಿಕಾರ್ಯನಿರ್ವಹಿಸುತ್ತಿವೆ. ಪಬ್ಲಿಕ್ ಶಾಲೆಯ ಮೂರು ಮುಖ್ಯಸ್ಥರು ಸಹಕಾರದಿಂದ ಎಸ್.ಡಿ.ಎಂ.ಸಿಯವರನ್ನು ವಿಶ್ವಾಸಕ್ಕೆತಗೆದುಕೊಂಡು ಕಾರ್ಯನಿರ್ವಹಿಸಬೇಕು. ಕರ್ನಾಟಕ ಪಬ್ಲಿಕ್ಶಾಲೆಗಳನ್ನು ಎಲ್.ಕೆ.ಜಿಯಿಂದ 12ನೇ ತರಗತಿ ವರೆಗೆ ಒಂದೇಆವರಣದಡಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳನ್ನು ಆಯ್ಕೆ ಮಾಡಿ ಪ್ರಾರಂಭಿಸಲಾಗಿದೆ.
ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. 2019-20 ರಿಂದ ಎಲ್.ಕೆ.ಜಿ. ತರಗತಿ ಹಾಗೂ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಿದ್ದು ಉತ್ತಮವಾದ ಪ್ರತಿಕ್ರಿಯೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಶಾಲೆಗಳು ಮಾದರಿ ಶಾಲೆಗಳಾಗಿ ಕಾರ್ಯನಿರ್ವಹಿಸುತ್ತವೆ. ಮುಂಬರುವ ದಿನಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು. ಒಂದೇಆವರಣದಲ್ಲಿ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಶಾಲೆ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾತಿಯಾಗುವಂತೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮೂರು ವಿಭಾಗದ ಮುಖ್ಯಸ್ಥರು ಕಾರ್ಯನಿರ್ವಹಿಸುತ್ತಿದ್ದಾರೆ. ದಾಖಲಾದ ಯಾವುದೇ ಮಗುವು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಕೆಲಸ ಆಗಬೇಕು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಮಾತನಾಡಿ, ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಪ್ರತಿಯೊಬ್ಬ ಶಿಕ್ಷಕರು, ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಪ್ರತಿಯೊಂದು ಶಾಲೆಗಳಲ್ಲಿ ಬುನಾದಿ ಸಾಮಥ್ರ್ಯಕ್ಕೆ ಅನುಗುಣವಾಗಿ ಮೌಲ್ಯಮಾಪನ ನಡೆಸಿ ಫಲಿತಾಂಶವನ್ನು ದಾಖಲಿಸಬೇಕು. ಕಡಿಮೆ ಪಲಿತಾಂಸ ಬಂದ ಶಾಲೆಗಳಲ್ಲಿ ಪುನಃ ಮೌಲ್ಯಮಾಪನಕ್ಕೆ ಒಡಪಡಿಸಿ, ಸುಧಾರಣೆ ಮಾಡಬೇಕು. ಇದರ ಮೇಲ್ವಿಚಾರಣೆಯನ್ನು ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಸಿಸ್ಲೆಪ್ದ ನಿರ್ದೇಶಕ ರಘುವೀರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್, ಸಮಗ್ರ ಶಿಕ್ಷಣದ ಸಹ ನಿರ್ದೇಶಕ ಕೆ.ಎಸ್. ಕರ್ಚನ್ನವರ, ಸಮಗ್ರ ಶಿಕ್ಷಣದ ಹಿರಿಯ ಕಾರ್ಯಾಕ್ರಮ ಅಧಿಕಾರಿ ಬಸವರಾಜಪ್ಪ ಹಾಗೂ ಇತರರು ಉಪಸ್ಥಿಸತರಿದ್ದರು.
ಧಾರವಾಡ, ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ, ಶಿಸರ್ಿ, ಹಾವೇರಿ ಜಿಲ್ಲೆಯಗಳ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪನಿರ್ದೇಶಕರು (ಆಡಳಿತ) ಮತ್ತುಅಭಿವೃದ್ಧಿ, ಜಿಲ್ಲಾಕೆಪಿಎಸ್ ನೋಡಲ ಅಧಿಕಾರಿಗಳು, ತಾಲೂಕಾ ನೋಡಲ ಅಧಿಕಾರಿಗಳು, ಎಲ್ಲಾ ಶಿಕ್ಷಣಾಧಿಕಾರಿಗಳು, ಡಿವೈಪಿಸಿಗಳು, ಎಪಿಸಿಗಳು, ಎಲ್ಲಾಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ವಿಷಯ ಪರೀವಿಕ್ಷಕರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಉಪನಿರ್ದೇಶಕ ಗಜಾನನ ಮನ್ನಿಕೇರಿ ಸ್ವಾಗತಿಸಿದರು. ಎನ್. ಕೆ.ಸಾವಕಾರ ವಂದಿಸಿದರು. .ಶಿವಲೀಲಾ ಕಳಸಣ್ಣವರ ನಿರೂಪಿಸಿದರು.