ಬೆಳಗಾವಿ 06: ಇಲ್ಲಿನ ಕೆಎಲ್‌ಇ ಫಾರ್ಮಸಿ ಕಾಲೇಜ್‌ನ ಫಾರ್ಮಕಾಲಜಿ ವಿಭಾಗವು ‘ಕಲ್ತಿವಾಟಿಂಗ್ ಆ ಕಲ್ಚರ್ ಆ ಕಂಟಿನ್ಯುಅಸ ಇಂಪ್ರೂವ್‌ಮೆಂಟ್: ಫ್ಯಾಕಲ್ಟಿ ಡೆವಲಪ್‌ಮೆಂಟ್ ಇನ್ ಹೆಲ್ತ್ ಎಜುಕೇಶನ್’ ಕುರಿತು ಕಾರ್ಯಾಗಾರವನ್ನು ಡಿ. 6ರಂದು ಫಾರ್ಮಸಿ ಶಿಕ್ಷಣ ಇಲಾಖೆ (ಆಓಕಇ-ಆಜಠಿಚಿಡಿಣಟಜಟಿಣ ಠ ಕಚಿಡಿಟಚಿಛಿಥಿ ಇಜಣಛಿಚಿಣಠ) ಆಶ್ರಯದಲ್ಲಿ ನಡೆಸಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಜೆಎನ್‌ಎಮ್‌ಸಿ ಕಾಹೆರ್ ಡಿಪಾರ್ಟ್ಮಂಟ್ ಆ ಕಮ್ಯೂನಿಟಿ ಮೆಡಿಸಿನ್ ಪ್ರಾಧ್ಯಾಪಕಿ ಡಾ.ಪದ್ಮಜಾ ವಾಳ್ವೇಕರ್ ಅವರು ಉದ್ಘಾಟಿಸಿದರು. ಡೀನ್ ಡಾ. ವಿ. ಎಸ್. ಮಾಸ್ತಿಹೊಳಿಮಠ ಹಾಗೂ ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು.
ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥ ಡಾ.ಎನ್.ಎ.ಖತೀಬ್, ಸ್ವಾಗತಿಸಿ, ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಬೆಳಗಾವಿ ಕೆಎಲ್‌ಇ ಫಾರ್ಮಸಿ ಕಾಲೇಜು ಆಓಕಇ ಸಂಚಾಲಕಿ ಡಾ. ಗೀತಾಂಜಲಿ ಸಾಲಿಮಠ ಅವರು ಫಾರ್ಮಸಿ ಎಜುಕೇಶನ್ ವಿಭಾಗದ ಉದ್ದೇಶಗಳು ಮತ್ತು ಕಾರ್ಯಗಳನ್ನು ಕುರಿತು ಮಾತನಾಡಿದರು.
ಮುಖ್ಯ ಅತಿಥಿ ಡಾ.ಪದ್ಮಜಾ ವಾಲ್ವೇಕರ್ ಅವರು ವಿದ್ಯಾರ್ಥಿಗಳಿಗೆ ಆರೋಗ್ಯ ಕ್ಷೇತ್ರದಲ್ಲಿ ತರಬೇತಿ ನೀಡಲು ಶಿಕ್ಷಕರಿಗೆ ಕಲಿಕೆಯ ವಿವಿಧ ವಿಧಾನಗಳು ಮತ್ತು ಜೀವಮಾನದ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿದರು. ಆರೋಗ್ಯ ವ್ಯವಸ್ಥೆಯ ಅಗತ್ಯವನ್ನು ಪೂರೈಸಲು ಬೋಧನಾ ವಿಧಾನಗಳಲ್ಲಿ ನಿರಂತರ ಸುಧಾರಣೆಯ ಅಗತ್ಯತೆಯ ಬಗ್ಗೆಯೂ ಅವರು ಮಾತನಾಡಿದರು.
ಡಾ. ಸುನೀಲ್ ಎಸ್ ಜಲಾಲಪುರೆ, ಪ್ರಾಂಶುಪಾಲರು, ಕೆಎಲ್‌ಇ ಫಾರ್ಮಸಿ ಕಾಲೇಜು, ಬೆಳಗಾವಿ, ಆರೋಗ್ಯ ಶಿಕ್ಷಣದಲ್ಲಿ ಶಿಕ್ಷಕರ ಸುಧಾರಣೆ ಮತ್ತು ಬೋಧನಾ ಕಲಿಕಾ ವಿಧಾನಗಳಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಗಾಗಿ ಶಿಕ್ಷಕರಿಗೆ ತರಬೇತಿಯ ಮಹತ್ವವನ್ನು ಒತ್ತಿ ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಪದ್ಮಜಾ ವಾಳ್ವೇಕರ್, ಡಾ.ಊರ್ಮಿಳಾ ಕಾಗಲ್, ಡಾ.ಅನುರಾಧಾ ಪಾಟೀಲ್, ಡಾ.ಶೀತಲ್ ಹರಕುಣಿ, ಮತ್ತು ಡಾ.ನಿಖಿಲ್ ಹವಾಲ್ ಅವರು ನಿರಂತರ ಸುಧಾರಣೆಗಾಗಿ ಬೋಧನಾ ಕಲಿಕಾ ವಿಧಾನಗಳ ವಿವಿಧ ವಿಷಯಗಳ ಕುರಿತು ಮಾತನಾಡಿದರು.
ವಿವಿಧ ಫಾರ್ಮಸಿ ಸಂಸ್ಥೆಗಳ ಸುಮಾರು 40 ಬೋಧಕ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಡಾ. ಪ್ರಿಯಾಂಕಾ ಪಾಟೀಲ, ಸಹಾಯಕ ಪ್ರಾಧ್ಯಾಪಕಿ, ಕೆಎಲ್‌ಇ ಫಾರ್ಮಸಿ ಕಾಲೇಜು, ಬೆಳಗಾವಿ ಅವರು ವಂದಿಸಿದರು.