ಸಾಧಕರನ್ನು ಗೌರವಿಸುವ ಕೆಲಸ ಆಗಬೇಕು: ಬಿ. ಎಸ್‌. ಗವೀಮಠ

Work should be done to respect the achievers: B. S. Gavimath

ಬೆಳಗಾವಿ:30: “ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ದೀಪಸ್ತಂಭದಂತೆ ಇರುವ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯಬೇಕು. ಸಂಘ-ಸಂಸ್ಥೆಗಳು ನಿರಂತರವಾಗಿ ಕನ್ನಡ ಸಾಹಿತ್ಯ ಕುರಿತು ಕಾರ್ಯಕ್ರಮಗಳನ್ನು ಸಂಘಟಿಸಬೇಕು; ಕನ್ನಡಿಗರು ಜೀವಂತರಾಗಿದ್ದೇವೆ; ಕನ್ನಡ ಭಾಷೆ ಬೆಳೆಯುತ್ತಿದೆ ಎಂಬುದನ್ನು ಸಕ್ರಿಯವಾಗಿ ತೋರಿಸಬೇಕು” ಎಂದು ಶ್ರೀ. ಬಿ. ಎಸ್‌. ಗವೀಮಠ ನುಡಿದರು. ಅವರು ಇಲ್ಲಿಯ ಬಿ .ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ಸಂಕೇಶ್ವರದ ಪ್ರೊ. ಎಲ್‌. ವಿ. ಪಾಟೀಲ ಅವರಿಗೆ 'ಕನ್ನಡ ಗಡಿ ತಿಲಕ' ಪ್ರಶಸ್ತಿ ಹಾಗೂ ಕೊಪ್ಪಳದ ಶ್ರೀ. ವೀರೇಶ ಕುರಿ ಇವರಿಗೆ 'ಜನ್ನಾ ಸನದಿ ಸಾಹಿತ್ಯ ರಾಜ್ಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು. 

ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ನ್ಯಾಯವಾದಿ ಎಸ್‌. ಎಂ. ಕುಲಕರ್ಣಿ ಮಾತನಾಡಿ “ಸನದಿ ಪ್ರತಿಷ್ಠಾನ ಸಾಧಕರಿಗೆ ಹಾಗೂ ಉದಯೋನ್ಮುಖ ಬರಹಗಾರರಿಗೆ ಒಂದೇ ವೇದಿಕೆಯ ಮೇಲೆ ಪ್ರಶಸ್ತಿ ನೀಡಿ ಎರಡು ತಲೆಮಾರುಗಳನ್ನು ಪ್ರತಿನಿಧಿಸುತ್ತಿದೆ. ಎರಡೂ ಪೀಳಿಗೆಯನ್ನು ಪ್ರೋತ್ಸಾಹಿಸುತ್ತಿರುವ ಸೇತುವೆಯಾಗಿ ಒಳ್ಳೆಯ ಸೇವೆ ಸಲ್ಲಿಸುತ್ತಿದೆ” ಎಂದರು. 

ಡಾ.ರಾಮಕ್‌ಣಟಿಜಜಜಿಟಿಜಜಷ್ಣ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಗಾರ್ಗಿಸ್ವಾಗತಿಸಿದರು. ಎ. ಎ. ಸನದಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಆರ್‌. ಬಿ. ಬನಶಂಕರಿ ಪ್ರಶಸ್ತಿ ವಾಚನ ಮಾಡಿದರು. ಡಾ ಪಿ. ಜಿ. ಕೆಂಪಣ್ಣವರ ಅಭಿನಂದನ ನುಡಿ ನುಡಿದರು.  

ಆಶಾ ಯಮಕನಮರಡಿ ನಿರೂಪಿಸಿದರು. ಆರ್‌. ಎ. ಭಜಂತ್ರಿ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಇಂದಿರಾ ಮೋಟೆಬೆನ್ನೂರ, ಶಿವಾನಂದ ತಲ್ಲೂರ, ಹೇಮಾ ಸೋನೊಳ್ಳಿ, ಹಮೀದಾ ದೇಸಾಯಿ, ಸುನಿತಾ ಪಾಟೀಲ, ದೀಲೀಪ ಹೆಗಡೆ, ಎನ್‌. ಎಫ್‌. ಕಿತ್ತೂರ ಕವಿತೆ ಓದಿದರು. ಸುರೇಶ ಚಂದರಗಿ ಬಿ ಎ. ಸನದಿ ಅವರಿಂದ ರಚಿತ ಭಾವಗೀತೆ ಹಾಡಿದರು. 

ಕಾರ್ಯಕ್ರಮದಲ್ಲಿ ಸರಜೂ ಕಾಟ್ಕರ್, ಬಸವರಾಜ ಜಗಜಂಪಿ, ಸ. ರಾ. ಸುಳಕೂಡೆ, ರಾಜಶೇಖರ ಇಚ್ಚಂಗಿ, ಮುತ್ನಾಳ ಶಿವಾನಂದ ಸ್ವಾಮೀಜಿ, ಜಯಪ್ರಕಾಶ ಅಬ್ಬಿಗೇರಿ, ಕಿರಣ ನೇಸರಿ, ಅಕಬರ ಸನದಿ, ಬಸವರಾಜ ಮುತ್ನಾಳೆ, ಸಿದ್ರಾಮ ತಳವಾರ, ಆರ್‌. ಬಿ. ಕಟ್ಟಿ ಮುಂತಾದವರು ಉಪಸ್ಥಿತರಿದ್ದರು.