ಸಹಕಾರ ಸಂಘದ ಬೆಳವಣಿಗೆಗೆ ಶ್ರಮಿಸಿ: ಸಂಗನಗೌಡ
Work hard for the growth of cooperatives: Sanganagowda
ದೇವರಹಿಪ್ಪರಗಿ 25: ಸಹಕಾರಿ ಸಂಘಗಳ ಬೆಳವಣಿಗೆಯ ನಿಟ್ಟಿನಲ್ಲಿ ಸದಸ್ಯರ ಸಹಕಾರ ಹಾಗೂ ಪ್ರೋತ್ಸಾಹ ಬಹಳ ಮುಖ್ಯವಾಗಿದೆ.ಪರಸ್ಪರ ಸಹಕಾರದ ಮೂಲಕ ಸಹಕಾರ ಸಂಘಗಳು ಹಾಗೂ ರೈತರ ಏಳಿಗೆಗೆ ಶ್ರಮಿಸೋಣ ಎಂದು ಮುಳಸಾವಳಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾದ ಸಂಗನಗೌಡ ಶಿ.ಬಿರಾದಾರ ಹೇಳಿದರು.
ತಾಲೂಕಿನ ಮುಳಸಾವಳಗಿ ಗ್ರಾಮದ ಸಹಕಾರಿ ಸಂಘದ ಆವರಣದಲ್ಲಿ ಗುರುವಾರ ನಡೆದ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಸಂಘದ ಕಳೆದ ವರ್ಷದ ಲೆಕ್ಕಪತ್ರದ ವಿವರಗಳನ್ನು ಸವಿಸ್ತಾರವಾಗಿ ಮಂಡಿಸಿದರು.ಗ್ರಾಮದ ಸಿದ್ದಾರೂಢ ಕೈವಲ್ಯಧಾಮ ಆಶ್ರಮದ ಪರಮಪೂಜ್ಯ ದಯಾನಂದ ಮಹಾಸ್ವಾಮಿಗಳು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ ಆಶೀರ್ವಚನ ನೀಡಿದರು.ಇಂಡಿಯ ಕೃಷಿ ವಿಜ್ಞಾನ ಕೇಂದ್ರದ ಡಾ.ಪ್ರಸಾದ ಹಾಗೂ ಡಾ.ಪ್ರೇಮಚಂದ್ರ ಅವರುಗಳು ರೈತರಿಗೆ ಬೆಳೆಗಳ ನಿರ್ವಹಣೆ,ಸಾವಯವ ಗೊಬ್ಬರ, ಜಾನುವಾರುಗಳ ನಿರ್ವಹಣೆ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನೆರೆದಿದ್ದ ನೂರಾರು ರೈತರಿಗೆ ತಿಳಿಸಿಕೊಟ್ಟರು.ವಿಡಿಸಿಸಿ ಬ್ಯಾಂಕಿನ ಕ್ಷೇತ್ರಾಧಿಕಾರಿ ಅಮಿತ ಖಂಡೇಕರ,ಸಾವಯವ ಕಂಪನಿಯ ಸುನೀಲ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕಲ್ಲಪ್ಪ ತಳವಾರ,ನಿರ್ದೇಶಕರಾದ ಕಲ್ಲಪ್ಪ ಮೂಲಿಮನಿ,ಮಲಕಪ್ಪ ನಾಯ್ಕೋಡಿ,ಬಸವರಾಜ ಬಮ್ಮನಳ್ಳಿ,ಜಾವೀದ ಮಕಾನದಾರ,ಚನ್ನು ಹದರಿ,ಶ್ರೀಶೈಲ ಹದರಿ,ಮಡು ಕುಂಬಾರ,ಶಿವಾನಂದ ಬಿರಾದಾರ,ರಮೇಶ ರಾಠೋಡ,ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಭೀಮನಗೌಡ ಪಾಟೀಲ,ಮಲ್ಲನಗೌಡ ಬಿರಾದಾರ,ಅನಿತಾ ಬಿರಾದಾರ, ಸಾಹೇಬಗೌಡ ಹಿಕ್ಕಣಗುತ್ತಿ,ನವೀನ ಉಕುಮನಾಳ ಸೇರಿದಂತೆ ಸಹಕಾರ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಕೃಷಿಯಲ್ಲಿ ವಿಶೇಷ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು.ಹಣಮಂತ್ರಾಯ ಹಿರೂರ ನಿರೂಪಿಸಿ,ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 