ಮಹಿಳೆಯರು ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು ಮರುಳಾರಾದ್ಯ ಶಿವಾಚಾರ್ಯ ಸ್ವಾಮಿಜಿ

Women should make the most of opportunities: Marularadya Shivacharya Swamiji

ಮಹಿಳೆಯರು ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು ಮರುಳಾರಾದ್ಯ ಶಿವಾಚಾರ್ಯ ಸ್ವಾಮಿಜಿ

ಕೊಪ್ಪಳ 20: ಮಹಿಳೆಯರು ಸಂಕೋಚ ಬಿಟ್ಟು ಸಿಕ್ಕ ಅವಕಾಶಗಳನ್ನು ಚನ್ನಾಗಿ ಉಪಯೋಗಿಸಿಕೊಂಡು ಸಾಧನೆ ಮಾಡಬೇಕು. ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನ ಅವಕಾಶಗಳಿದ್ದು ಕೀಳಿರಿಮೆ ಬಿಟ್ಟು ಸಾಧನೆ ಮಾಡಬೇಕು ಎಂದು ಶ್ರೀಮರುಳಾರಾದ್ಯ ಶಿವಾಚಾರ್ಯರು ತಿಳಿಸಿದರು.  

ಗ್ರಾಮದಲ್ಲಿ ನೆಹರು ಯುವ ಕೇಂದ್ರ ಕೊಪ್ಪಳ, ಮಹಿಳಾ ದ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ದಿ ಸಂಸ್ಥೆ ಕೊಪ್ಪಳ ನಡೆದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಗಿಡಕ್ಕೆ ನೀರು ಹಾಕಿ ಚಾಲನೆ ನೀಡಿ ಭಾನುವಾರ ಮಾತನಾಡಿದರು.ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಮಹಿಳೆಯರು ಬಳಸಿಕೊಂಡು ಮುಂದೆ ಬರಬೇಕು. ಹಿಂದಿನ ದಿನಮಾನದಲ್ಲಿ ಪ್ರತಿಯೊಬ್ಬ ಸಾಧಕನ ಹಿಂದೆ ಪ್ರೇರಣಾ ಶಕ್ತಿಯಾಗಿ ಮಹಿಳೆ ಇದ್ದಾಳೆ, ಜೀವನದಲ್ಲಿ ಬರುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯೆ. ವಕೀಲೆ ಪ್ರೇಮಾ ಮಾತನಾಡಿ, ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗದೆ ಅದರ ವಿರುದ್ದ ದ್ವನಿ ಎತ್ತಿ ಹಾಗೂ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ ಇದು ನಿಮ್ಮ ಅಭಿವೃದ್ದಿಗೆ ಸಹಕಾರಿಯಾಗಲಿದೆ.  

ವಕೀಲ ಗುರುಬಸವರಾಜ ಹಳ್ಳಿಕೇರಿ ಮಾತನಾಡಿ, ಹೆಣ್ಣು ಮಕ್ಕಳು ನಾನಾ ಕ್ಷೇತ್ರಗಳಲ್ಲಿ ಸಾದನೆ ಮಾಡಿದ್ದಾರೆ. ಸಮಾಜದಲ್ಲಿ ಹೆಣ್ಣು ಮಗುವಿನ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಅಸಮಾನತೆಯನ್ನು ಹೋಗಲಾಡಿಸಲು ಸರ್ವರು ಕೈಜೋಡಿಸಬೇಕು ಎಂದರು.ಇದೇ ವೇಳೆ ಮಹಿಳೆಯರಿಗೆ ಆಟೋಟಗಳನ್ನು ಆಯೋಜಿಸಲಾಗಿತ್ತು. ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಗ್ರಾಮ ಪಂಚಾಯತ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಮಾತನಾಡಿದರು. ವಿವಿಧ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ಕೊಪ್ಪಳದ ಮಹಿಳಾ ಧ್ವನಿ ಸಂಸ್ಥಾಪಕಿ ಪ್ರಿಯದರ್ಶಿನಿ ಮುಂಡರಗಿಮಠ, ಅನ್ವರ ಗಡಾದ, ಶಶಿಕಲಾ, ಬಿ.ಎನ್‌.ಹೊರಪೇಟಿ, ಪೂಜಾ, ಮಲ್ಲಮ್ಮ, ಬಸಮ್ಮ, ಹಾಗೂ ಮಹಿಳೆಯರು ಇದ್ದರು.ಪೋಟೊ: ಅಳವಂಡಿ ಗ್ರಾಮದಲ್ಲಿ ನೆಹರು ಯುವ ಕೇಂದ್ರ, ಮಹಿಳಾ ದ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ದಿ ಸಂಸ್ಥೆ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಗಿಡಕ್ಕೆ ನೀರು ಹಾಕಿ ಚಾಲನೆ ನೀಡಲಾಯಿತು, ಶ್ರೀಮರುಳಾರಾದ್ಯ ಶಿವಾಚಾರ್ಯರು, ಪ್ರಮುಖರಾದ ಪ್ರಿಯದರ್ಶಿನಿ, ಗುರುಬಸವರಾಜ, ಅನ್ವರ, ಪ್ರೇಮಾ, ಬಸಮ್ಮ, ಬಿ.ಎನ್‌.ಹೊರಪೇಟಿ, ಬಸಮ್ಮ ಹಾಗೂ ಇತರರು ಇದ್ದರು.