ಹುಣಶ್ಯಾಳದಲ್ಲಿ ಖಾಲಿ ಕೊಡ ಹಿಡಿದು ಮಹಿಳೆಯರ ಪ್ರತಿಭಟನೆ
Women protest in Hunashyala holding empty pots
ದೇವರಹಿಪ್ಪರಗಿ, 09 : ಕುಡಿಯುವ ನೀರು, ಸಿಬ್ಬಂದಿ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಕೂಡ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ನೂರಾರು ಮಹಿಳೆಯರು ಗ್ರಾ.ಪಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ದೇವರಹಿಪ್ಪರಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಾರತಿ ಚಲವಯ್ಯ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳ ಮನವಿ ಪತ್ರ ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ ಕಾರಣ ಪ್ರತಿಭಟನೆ ಹಿಂಪಡೆದ ಗ್ರಾಮದ ಮಹಿಳೆಯರು.
ಗ್ರಾಮಸ್ಥರ ಪರವಾಗಿ ಯುವ ಮುಖಂಡ ಟಿಪ್ಪು ಸುಲ್ತಾನ್ ಸಿಪಾಯಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸಿ.ಸಿ ರಸ್ತೆ, ಚರಂಡಿ, ಗ್ರಾಮದ ರಸ್ತೆ ಸುಧಾರಣೆ ಸಲುವಾಗಿ ಸಾಕಷ್ಟು ಬಾರಿ ತಿಳಿಸಿದರು ಪಂಚಾಯತಿ ಸಿಬ್ಬಂದಿಗಳ ಸ್ಪಂದಿಸುತ್ತಿಲ್ಲ ಎಂದು ಅವರ ವಿರುದ್ಧ ಆರೋಪಿಸಿದರು ಹಾಗೂ ಸಮಸ್ಯೆಯನ್ನು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಹೇಳಿದರು.
ಇದೇ ಸಂಧರ್ಭದಲ್ಲಿ ಮುಖಂಡರುಗಳಾದ ಶಂಕ್ರೇಪ್ಪ ಬಂಗಾರಗುಂಡ.ಶಫೀಕ ಸಿಪಾಯಿ. ನಿಂಗಣ್ಣ ಪಾಕಿ, ಪರಶುರಾಮ ಬಡಗೇರ. ವಾಜಿದ ಉಸ್ತಾದ.ಮೈನುದ್ದೀನ ಬಾಗವಾನ. ಇಬ್ರಾಹಿಂ ಹವಾಲ್ದಾರ. ಮಹ್ಮದ ಬಾಗವಾನ. ಶಕಿಲ ಪೊಲಾಸಿ. ಈರಣ್ಣ ಬಡಗೇರ. ತೌಫಿಕ್ ಸಿಪಾಯಿ. ಸದ್ದಾಂ ಬಿಂಜಲಬಾವಿ. ಇಸ್ಮಾಯಿಲ್ ಬಡೇಘರ. ಸದ್ದಾಂ ಪೊಲಾಸಿ. ಮುರ್ತುಜ ಸವಾರ. ಗಪ್ಪಾರ ಮೋಮಿನ ಸೇರಿದಂತೆ ಗ್ರಾ.ಪಂ ಅಧಿಕಾರಿಗಳು, ಮುಖಂಡರು, ನೂರಾರು ಮಹಿಳೆಯರು ಭಾಗವಹಿಸಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 