ಮಹಿಳೆಯರು ಆರ್ಥಿಕ ಮತ್ತು ಸ್ವತಂತ್ರರಾಗಿ ಬೆಳೆಯಲು ಸಹಕಾರ ಅಗತ್ಯ
Women need cooperation to grow economically and independently
ಬೆಳಗಾವಿ 16: ಮಹಿಳಾ ದಿನಾಚರಣೆ ಹಾಗೂ ಹಣಕಾಸು ವರ್ಷದ ಅಂತ್ಯದ ಅಂಗವಾಗಿ, ಅಖಇಆಂಋ ಘಠಜಟಿ ಘಟಿರ, ಃಜಟಚಿರಚಿತ ವತಿಯಿಂದ ಮಹಿಳೆಯರಿಗಾಗಿ ಹಣಕಾಸು ಜಾಗೃತಿ ಕಾರ್ಯಕ್ರಮವನ್ನು ಶನಿವಾರ, 14 ಮಾರ್ಚ್ 2026ರಂದು ಆಯೋಜಿಸಲಾಯಿತು. ಮಹಿಳೆಯರು ತಮ್ಮ ಖರ್ಚುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಜಾಣ್ಮೆಯಿಂದ ಹೂಡಿಕೆ ಮಾಡಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಯಿತು.
ರಿಯಲ್ ಎಸ್ಟೇಟ್ ಸೇರಿದಂತೆ ಬುದ್ಧಿವಂತ ಹೂಡಿಕೆಗಳ ಮೂಲಕ ಆರ್ಥಿಕ ಭದ್ರತೆ ನಿರ್ಮಿಸುವ ಮಹತ್ವವನ್ನು ಈ ಕಾರ್ಯಕ್ರಮದಲ್ಲಿ ಒತ್ತಿ ಹೇಳಲಾಯಿತು. ಈ ಕಾರ್ಯಕ್ರಮವನ್ನು ಗೀತಾ ಗಾಯಕ್ವಾಡ್, ಉ7 ಘಜಚಿಟಣ ಐಐಕ ್ಘ ಓಎ ಇ-ಘಜಚಿಟಣ ಸಂಸ್ಥೆಯಿಂದ, ನಡೆಸಿಕೊಟ್ಟರು. ಅವರು ಹಣಕಾಸು ಯೋಜನೆ, ನಿಯಮಿತ ಉಳಿತಾಯ ಮತ್ತು ಸಮರ್ಥ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಹತ್ವದ ಕುರಿತು ಅಮೂಲ್ಯವಾದ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.
ಈ ಕಾರ್ಯಕ್ರಮವನ್ನು ಅಖಇಆಂಋ ಘಠಜಟಿ ಘಟಿರ, ಃಜಟಚಿರಚಿತ ಯ ಸಿಟಿ ಕೋಆರ್ಡಿನೇಟರ್ ಕರೂಣಾ ಹಿರೇಮಠ ಮತ್ತು ಕಾರ್ಯದರ್ಶಿ ಸವಿತಾ ಸಾಯನೆಕರ ಅವರ ನೇತೃತ್ವದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಸಂಯೋಜನೆಯಲ್ಲಿ ಪ್ರಿಯಾಂಕಾ ಕಡಂ ಮತ್ತು ಸೋನಲ್ ದೇಶಪಾಂಡೆ ಅವರು ಮಹತ್ವದ ಪಾತ್ರವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.ಈ ಕಾರ್ಯಕ್ರಮವು ಉದ್ಯಂಬಾಗದ ಹೋಟೆಲ್ ನೆಟಿವ್ನಲ್ಲಿ ನಡೆಯಿತು. ಅಲ್ಲಿ ನೀಡಲಾದ ಆತಿಥ್ಯ ಮತ್ತು ವ್ಯವಸ್ಥೆಗಳು ಅತ್ಯುತ್ತಮವಾಗಿದ್ದವು. ಮಹಿಳಾ ದಿನಾಚರಣೆಯ ಅಂಗವಾಗಿ, ಕಾರ್ಯಕ್ರಮಕ್ಕೆ ಬಂದ ಮಹಿಳೆಯರು ಗುಲಾಬಿ ಬಣ್ಣದ ಉಡುಪಿನಲ್ಲಿ ಹಾಜರಾಗಿದ್ದು, ಇದು ಮಹಿಳಾ ಏಕತೆ, ಶಕ್ತಿ ಮತ್ತು ಸಬಲೀಕರಣದ ಸಂಕೇತವಾಗಿತ್ತು.ಈ ಕಾರ್ಯಕ್ರಮದಲ್ಲಿ 30 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ, ಮಹಿಳೆಯರಲ್ಲಿ ಹಣಕಾಸು ಜಾಗೃತಿ ಮತ್ತು ಹೂಡಿಕೆ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಈ ಕಾರ್ಯಕ್ರಮವು ಮಾಹಿತಿ ಪ್ರಧಾನ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 