ಹೊಲಿಗೆ ವೃತ್ತಿಯಿಂದ ಮಹಿಳೆಯರು ಆರ್ಥಿಕವಾಗಿ ಸದೃಢತೆ ಹೊಂದಬಹುದು: ಹರೀಶ ಪಾವಸಕರ ಅಭಿಮತ

ಹೊಲಿಗೆ ವೃತ್ತಿಯಿಂದ ಮಹಿಳೆಯರು ಆರ್ಥಿಕವಾಗಿ ಸದೃಢತೆ ಹೊಂದಬಹುದು: ಹರೀಶ ಪಾವಸಕರ ಅಭಿಮತ Women can become financially strong through sewing: Harish Pavasakar's opinion

ಲೋಕದರ್ಶನ ವರದಿ 

        ಮಾಂಜರಿ 13 : ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳ ಜತೆಗೆ ಆದಾಯದ ಮೂಲವಾಗಿ ಹೊಲಿಗೆ ವೃತ್ತಿಯನ್ನು ತೊಡಗಿಸಿಕೊಂಡಲ್ಲಿ ಆರ್ಥಿಕವಾಗಿ ಸದೃಢತೆ ಹೊಂದಬಹುದಾಗಿದೆ ಎಂದು  ಶ್ರೀ ಕ್ಷೇತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಾ ಯೋಜನಾಧಿಕಾರಿ ಹರೀಶ ಪಾವಸಕರ  ತಿಳಿಸಿದರು. 

        ಅವರು ಶುಕ್ರವಾರ  ದಿನಾಂಕ 13 ರಂದು  ಮಾಂಜರಿ ಗ್ರಾಮದ ವಿಠ್ಠಲ ದೇವಸ್ಥಾನದಲ್ಲಿ ಕ್ಷೇತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಚಿಕ್ಕೋಡಿ 2 ತಾಲೂಕಾ. ಮಹಿಳಾ ಜ್ಞಾನ ವಿಕಾಸ ಚಿಕ್ಕೋಡಿ ಟು ತಾಲೂಕಿನ ಮಾಂಜರಿ ವಲಯದ ಮಾಂಜರಿ ಬಿ ಕಾರ್ಯ ಕ್ಷೇತ್ರದ ಜ್ಯೋತಿ ಜ್ಞಾನವಿಕಾಸ ಕೇಂದ್ರದ ಸಭೆಯಲ್ಲಿ ಮೂರು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್‌ (ರಿ ), ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಹಮ್ಮಿಕೊಂಡ ಮೂರು ತಿಂಗಳ ಉಚಿತ ಹೂಲಗೆ ತರಬೇತಿ ಕಾರ್ಯಕ್ರಮದ ಸಮಾರ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಇತ್ತಿ?ಚಿನ ದಿನಗಳಲ್ಲಿ ಹೊಲಿಗೆ ವೃತ್ತಿಗೆ ಅತ್ಯಂತ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.

           ಈ ನಿಟ್ಟಿನಲ್ಲಿ ಕ್ಷೇತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಯೋಜನೆಯಡಿಯಲ್ಲಿ ಮಹಿಳೆಯರಿಗಾಗಿ ಹಲವಾರು ತರಬೇತಿ ಮತ್ತು ಸೌಲಭ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ತರಬೇತಿ ಪಡೆದ ಮಹಿಳೆಯರು ಆರಂಭಿಕವಾಗಿ ಮನೆಯಲ್ಲಿಯೇ ಹೊಲಿಗೆ ವೃತ್ತಿ ಪ್ರಾರಂಭಿಸಿ ನಂತರದ ದಿನಗಳಲ್ಲಿ ಹೆಚ್ಚು ಅನುಭವವನ್ನು ಹೊಂದಿ ಉತ್ತಮ ಹೊಲಿಗೆದಾರರಾಗಿ ಆರ್ಥಿಕವಾಗಿ ಸದೃಢರಾಗಬಹುದು. ಕಾನೂನಿನಲ್ಲಿ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದಂತೆ ಸಾಕಷ್ಟು ಕಾನೂನುಗಳನ್ನು ಅಳವಡಿಸಲಾಗಿದೆ. ತಮಗೆ ಯಾವುದೇ ತೊಂದರೆ, ತಗಾರೆ, ದೌರ್ಜನ್ಯಗಳು ನಡೆದಾಗ ಪೆಣಟಿಜಜಜಿಟಿಜಜಲೀಸ್ ಇಲಾಖೆಯಾಗಲೀ, ಅಥವಾ ಕಾನೂನಿನ ಸಹಾಯ ಪಡೆದು ಸಮಾಜಮುಖಿ ಜೀವನ ನಡೆಸಬಹುದಾಗಿದೆ ಎಂದರು. 

                ಸಮಾಜ ಸೇವಕರಾದ ಸಿದ್ದಾರ್ಥ ಗಾಯಾಗೋಳ  ಮಾತನಾಡಿ, ಮಹಿಳೆಯರು ಕ್ಷೇತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡುತ್ತಿರುವ ತರಬೇತಿಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅದೇರೀತಿ ತರಬೇತಿ ಹೊಂದುವ ಶಿಬಿರಾರ್ಥಿಗಳು ತಾವು ತೊಡಗಿಸಿಕೊಳ್ಳುವ ವೃತ್ತಿಯಲ್ಲಿ ಸೃಜನಶೀಲತೆ ಅವಶ್ಯಕವಾಗಿದೆ. ರಚನಾತ್ಮಕತೆಯಿಂದ ವ್ಯಕ್ತಿಯ ವ್ಯಕ್ತಿತ್ವದ ವಿಕಸನವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕ್ಷೇತ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಚಿಕ್ಕೋಡಿ ತಾಲೂಕಾ ಮಾಸ್ಟರ್ ರಾಘವೇಂದ್ರ ಲಂಬುಗೋಳ    ತಾಲ್ಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಮತಿ ಜ್ಯೋತಿ  ಕಿನ್ನಾಳ ಹಾಗೂ, ಹೊಲಿಗೆ ತರಬೇತಿ ಶಿಕ್ಷಕರಾದ, ಅಸ್ಮಿತಾ ಕಾಳೆ, ಕೇಂದ್ರದ ಅಧ್ಯಕ್ಷರಾದ, ಮಾಲಾಶ್ರೀ ವಡವಡೆ, ಸ್ಥಳೀಯ ಸೇವಾಪ್ರತಿನಿಧಿಯಾದ, ಪೂಜಾ,ನಿಖಿಲ್, ಶಿಂದೆ, ಮತ್ತು ಕೇಂದ್ರದ ಎಲ್ಲಾ ಸದಸ್ಯರು .ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು