ವಿಜಯಪುರ 02: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 2024-25ನೇ ಸಾಲಿನ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯದ ಕ್ರೀಡೆಗೆ ಮಹಿಳಾ ವಿವಿಯ ಹ್ಯಾಂಡ್‌ಬಾಲ್ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಹ್ಯಾಂಡ್‌ಬಾಲ್ ಕ್ರೀಡೆಯು ಇದೇ ದಿ. 03 ರಿಂದ 07 ರವರೆಗೆ ಪರೆಯಾರ್ ವಿಶ್ವವಿದ್ಯಾಲಯ ಸೇಲಳ ಟಿಎನ್ ಜರುಗಲಿದ್ದು ಸದರಿ ಕ್ರೀಡಾಕೂಟದಲ್ಲಿ ಮಹಿಳಾ ವಿವಿಯ ಹ್ಯಾಂಡ್‌ಬಾಲ್ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ತಂಡದ ತರಬೇತಿದಾರಾಗಿ ಲಕ್ಷ್ಮಿ. ಹನಮರ ಮತ್ತು ವ್ಯವಸ್ಥಾಪಕರಾಗಿ ಪುಷ್ಪಾ.ಮೇಟಿ ಭಾಗವಹಿಸಲಿದ್ದಾರೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
ಆಯ್ಕೆಯಾಗಿರುವ ಕ್ರೀಡಾಪಟುಗಳ ತಂಡಕ್ಕೆ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಹಾಗೂ ಮುಖ್ಯಸ್ಥ ಡಾ.ಹನುಮಂತಯ್ಯ ಪೂಜಾರ, ಸಹ ನಿರ್ದೇಶಕ ವಿಶ್ವನಾಥ ನಡಕಟ್ಟಿ ಮತ್ತು ಶಿಕ್ಷಣ ನಿಕಾಯದ ಡೀನ ಪ್ರೊ.ಸಕ್ಪಾಲ್ ಹೂವಣ್ಣ ಶುಭ ಹಾರೈಸಿದ್ದಾರೆ.