ಮಹಿಳಾ ವಿವಿ ಕ್ರೀಡಾಪಟುಗಳು ಚೆಸ್ ಸ್ಪರ್ಧೆಗೆ ಆಯ್ಕೆ

Women's university athletes selected for chess competition

ವಿಜಯಪುರ 04: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕ್ರೀಡಾಪಟುಗಳು ವಿಶಾಖ ಪಟ್ಟಣದಲ್ಲಿ ನಡೆಯಲಿರುವ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 

ತಂಡದ ಕ್ರೀಡಾಪಟುಗಳ ಜತೆಗೆ ತಂಡದ ವ್ಯವಸ್ಥಾಪಕರಾಗಿ ಬಳ್ಳಾರಿಯ ಅಲ್ಲಂ ಸುಮಂಗಲಮ್ಮ ಮಹಿಳಾ ಮಹಾವಿದ್ಯಾಲಯದ ಅಶೋಕ್ ಭಾಗವಹಿಸಲಿದ್ದಾರೆ. ಆಯ್ಕೆಯಾಗಿರುವ ಕ್ರೀಡಾಪಟುಗಳ ತಂಡಕ್ಕೆ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಎಂ.ಚಂದ್ರಶೇಖರ, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಡಾ.ಹನುಮಂತಯ್ಯ ಪೂಜಾರ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ.ಸಕ್ಪಾಲ್ ಹೂವಣ್ಣ ಶುಭ ಹಾರೈಸಿದ್ದಾರೆ.