ಸಮಾಜ ಬದಲಾವಣೆಗೆ ಮಹಿಳೆಯರ ಪಾತ್ರ ಮುಖ್ಯ:ಡಾ. ಪ್ರಭುಗೌಡ
ದೇವರಹಿಪ್ಪರಗಿ 26: ಒಬ್ಬ ಮಹಿಳೆ ತನ್ನ ಕುಟುಂಬದಲ್ಲಿ ತಾಯಿ, ಮಗಳು, ಸೊಸೆ ಎಂಬ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಾಳೆ. ಹಾಗೆಯೇ ಸಾಮಾಜಿಕ ವ್ಯವಹಾರಗಳ ಮೂಲಕ ಅರ್ಥಿಕ ಭದ್ರತೆಯನ್ನು ನೀಡಿ ಸಮಾಜದ ಅಭಿವೃದ್ಧಿಯ ಶಿಲ್ಪಿಯಾಗಿ ಸಮಾಜದ ಬದಲಾವಣೆಗೆ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಪ್ರಭುಗೌಡ ಲಿಂಗದಳ್ಳಿ ಚಬನೂರ ಶ್ಲಾಘಿಸಿದರು.ಪಟ್ಟಣದ ಜೆಎಂಜೆ ಸ್ಪಂದನ ಸಮಾಜ ಸೇವಾ ಸಂಸ್ಥೆ ವತಿಯಿಂದ ಬುಧುವಾರ ದುಂದು ನಡೆದ ಮಹಿಳಾ ದಿನಾಚರಣೆ ಹೊಲಿಗೆ ಯಂತ್ರ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು,ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಸರಿ ಸಮಾನರು ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆ ಮುಂದಿದ್ದಾರೆ.ಪ್ರತಿ ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ. ಹಾಗೆಯೇ ತಾಯಿಯೇ ಮೊದಲ ಗುರು. ಹೆಣ್ಣು ಮಕ್ಕಳಿಗೆ ಕೊಡುವ ಶಿಕ್ಷಣದಿಂದ ಕುಟುಂಬ ಉತ್ತಮ ಸ್ಥಿತಿಯಲ್ಲಿ ಇರಲು ಸಾಧ್ಯ. ಮಹಿಳೆಯು ಒಂದು ಸಮುದಾಯದ ಹಾಗೂ ದೇಶದ ಅಭಿವೃದ್ದಿಗೆ ಕಾರಣಿಕರ್ತಳಾಗುತ್ತಾಳೆ. ನಮ್ಮ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ 3ಜನ ಗಂಡು ಮಕ್ಕಳು, 11 ಜನ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ವಾಗಿದೆ. ಅದೇ ರೀತಿ ಜೆ.ಎಂ.ಜೆ ಸಂಸ್ಥೆ ಸಮಾಜದ ಕೆಳಹಂತದ ಜನರನ್ನು ಮುಖ್ಯ ವಾಹಿನಿಗೆ ತರಲು ಹಾಗೂ ಈ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಮಾಜಿ ಜಿ.ಪಂ ಸದಸ್ಯರಾದ ಗೌರಮ್ಮ ಮುತ್ತತ್ತಿ ಅವರುಮಾತನಾಡಿ, ಮಹಿಳೆಯರು ಶೈಕ್ಷಣಿಕ, ಕ್ರೀಡೆ, ರಾಜಕೀಯ, ವಾಣಿಜ್ಯ, ಜ್ಞಾನ, ಕೃಷಿ ಮತ್ತಿತರ ಕ್ಷೇತ್ರದಲ್ಲಿ ಮುಂದಿದ್ದಾರೆ. ಮನೆಯ ಹೆಣ್ಣು ಮಕ್ಕಳಿಗೆ ಕೊಡುವ ಶಿಕ್ಷಣದಿಂದ ಕುಟುಂಬ ಉತ್ತಮ ಸ್ಥಿತಿಯಲ್ಲಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ದೇವರಹಿಪ್ಪರಗಿ ಮಹಿಳಾ ಪಿಎಸ್‌ಐ ಪ್ರೇಮಾ ಚೌರ ಮಹಿಳೆಯರ ಕುರಿತು ಉಪನ್ಯಾಸ ನೀಡಿದರು.ಪ.ಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಫಾದರ್ ಸುಮನ್ ಬಾಲು ಎಸ್.ಜೆ ವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಎಂಜೆ ಸಂಸ್ಥೆಯ ಅಂತ್ಯೋನಿ ಮೇರಿ ದಾಸರಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಜೇವಿಯರ್ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಭವಾನಿ ಪಾಟೀಲ, ಬೆಂಗಳೂರಿನ ಎಕ್ಸಲ್ ಚಾರಿಟೇಲ್ ಟ್ರಸ್ಟಿ ಶೀಲಾ ಮಾದವನ, ಪ್ರೇಮಾ ಪವಾರ, ಅಮೋಗಿ ಗೌಳಿ, ಮಲ್ಕಪ್ಪ ಬಾಗೇವಾಡಿ, ಸುಕನ್ಯಾ ಚಳ್ಳಗಿ, ಸಿಸ್ಟರ್ ಹೃದಯ ಸೇರಿದಂತೆ ಜೆಎಂಜೆ ಸ್ಪಂದನ ಸಮಾಜ ಸೇವ ಸಂಸ್ಥೆಯ ಸಿಬ್ಬಂದಿ ವರ್ಗ, ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಫೋಟೋ 26ಡಿಎಚಪಿ3