ಮಹಿಳಾ ಸಮಾವೇಶ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ : ಶಿಕ್ಷಣ ವಂಚಿತ ಮಹಿಳೆಯರನ್ನು ರಾತ್ರಿ ಶಾಲೆ ಕಲಿಸುವದು, ಕಾನೂನಿನ ಅರಿವು ಮೂಡಿಸುವದು ಮತ್ತು ಮಹಿಳಾ ಮಕ್ಕಳಿಗೆ ಆಗುತ್ತಿರುವ ದೌರ್ಜನ್ಯ, ಮಾನಸಿಕ ಹಿಂಸೆ ಮತ್ತು ಅತ್ಯಾಚಾರಗಳಂತಹ ಘಟನೆಗಳಿಗೆ ಕುರಿತು ಜಾಗೃತಿ ಮೂಡಿಸುವುದು, ಸ್ವಾವಲಂಬನೆ ಜೊತೆಗೆ ಸಶಕ್ತ ಮಹಿಳೆಯರನ್ನಾಗಿ ಮಾಡುವದೇ ಸಾಮಖ್ಯಾ ಕನರ್ಾಟಕ ಎಂದು ಹಾವೇರಿ ಜಿಲ್ಲಾ ಮಹಿಳಾ ಸಾಮಾಖ್ಯಾ ಕನರ್ಾಟಕ ಸಂಯೋಜಕಿ ಆರತಿ ಸಬರದ ಹೇಳಿದರು.

ಪಟ್ಟಣದ ವಿರಕ್ತಮಠದ ಸಂಗನಬಸವ ಮಂಗಲಭವನದಲ್ಲಿ ಮಹಿಳಾ ಸಾಮಖ್ಯಾ ಕನರ್ಾಟಕ ಜಿಲ್ಲಾ ಘಟಕ ಹಾವೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆ ಅಡಿಯಲ್ಲಿ ಹಮ್ಮಿಕೊಂಡ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಸಾಮಾಜಿಕ ಸಮಸ್ಯೆಗಳಾದ ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ, ಮಹಿಳಾ ದೌರ್ಜನ್ಯ ಮತ್ತು ಮಹಿಳೆಯರ ಸಮಸ್ಯೆಗಳ ಕುರಿತು ಅರಿವು ಮೂಡಿಸುವದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೊಗಲಾಡಿಸುವ ಗುರಿಯನ್ನು ಹೊಂದಿ ಈ ಮಹಿಳಾ ಸಾಮಾಖ್ಯಾ ಕನರ್ಾಟಕವು ಕಾರ್ಯನಿರ್ವಹಿಸುತ್ತಿದೆ ಎಂದರು.

ಸಾಮಾಖ್ಯಾ ಎಂದರೆ ಸಮಾನತೆ ಎಂದರ್ಥ, ಮಹಿಳಾ ಸಾಮಾಖ್ಯಾ ಕನರ್ಾಟಕವು ಮಹಿಳಾ ಸಭಲೀಕರಣ ವೇಧಿಕೆಯಾಗಿದೆ, ಶಿಕ್ಷಣವನ್ನು ಬಳಸಿ ಮಹಿಳಾ ಶಿಕ್ಷಣ ಕೇಂದ್ರಗಳನ್ನ ತೆರೆದು ಕನರ್ಾಟಕದಲ್ಲಿ ಮಹಿಳಾ ಶಿಕ್ಷಣ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಸಾಮಾಜಿಕವಾಗಿ ಮತ್ತು ಆಥರ್ಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ ಈ ಸಾಮಾಖ್ಯಾ ಕನರ್ಾಟಕದ ಮುಖ್ಯ ಉದ್ದೇಶ ಆದ್ದರಿಂದಲೇ ಕನರ್ಾಟಕದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯವರು ಸಾಮಾಖ್ಯಾ ಕನರ್ಾಟಕವನ್ನ ತಮ್ಮ ಇಲಾಖೆಯಲ್ಲಿ ಸೇರಿಸಿಕೊಂಡಿದ್ದಾರೆ ಎಂದರು.

ಭಾಜ.ಪ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಿವಾನಂದ ಮ್ಯಾಗೇರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಮಹಿಳೆ ಎಂದರೆ ಮಹಿಳೆ, ಆರೋಗ್ಯವಂತ ಸಮಾಜ ನಿಮರ್ಾಣದಲ್ಲಿ ಮಹಿಳೆಯ ಪಾತ್ರ ಬಹು ಮುಖ್ಯವಾಗಿರುತ್ತದೆ.

   ಇಂದು ಮಹಿಳೆಯರು ಸಾಮಾಜಿವಾಗಿ, ಆಥರ್ಿಕವಾಗಿ, ರಾಜಕೀಯವಾಗಿ ಮತ್ತು ಎಲ್ಲ ರಂಗಗಳಲ್ಲಿ ಮುಂದು ಬರಬೇಕಿದೆ, ಮಹಿಳಾ ಸಬಲೀಕರಣ ಮತ್ತು ಮಹಿಳಾ ಸಮಾನತೆಗೆ ನಾವೆಲ್ಲರೂ ಸಹಾಯ ಸಹಕಾರ ನೀಡಬೇಕಿದೆ, ತಾಯಿಯ ಮನಸ್ಸು ಗುರುವಿನಷ್ಟೆ ಶ್ರೇಷ್ಠವಾದದು ಮಹಿಳೆಯರು ಒಗ್ಗಟ್ಟಿನಿಂದ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡಭೆಕು ಎಂದರು.

ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಆಶಿರ್ವಚಿಸಿದರು. ಅದ್ಯಕ್ಷತೆಯನ್ನು ಹಾವೇರಿ ಮಹಿಳಾ ಸಾಮಾಖ್ಯಾ ಕನರ್ಾಟಕದ ಸಂಪನ್ಮೂಲ ವ್ಯಕ್ತಿಗಳಾದ ರೇಣುಕಾ ತ್ರಿಪಾಠಿ ವಹಿಸಿದರು.  

ಭಾಜಪ ತಾಲೂಕಾ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಪುರಸಭೆ ಅಧಿಕಾರಿಗಳಾದ ಶೈಲಾ ಪಾಟೀಲ್, ಶೃತಿ ವಾಲಿಕಾರ, ಕಲಾವಿದ ಬಸವರಾಜ ಗೊಬ್ಬಿ, ಸಂಜನಾ ರಾಯ್ಕರ, ಸರೋಜವ್ವ ಹರಿಜನ, ನಾಗವೇಣಿ ದೊಡ್ಮನಿ, ಲಲಿತಾ ಸುಣಗಾರ, ಭಾರತಿ ರಾಮಂಪೂರಮಠ ಸೇರಿದಂತೆ ಶಿಗ್ಗಾವಿ, ಸವಣೂರ, ಬ್ಯಾಡಗಿ, ಹಿರೇಕೆರೂರ, ಹಾನಗಲ್ ಮತ್ತು ಹಾವೇರಿಯ ಸಾಮಾಖ್ಯಾ ಕನರ್ಾಟಕದ ಸಂಪನ್ಮೂಲ ವ್ಯಕ್ತಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ, ಮಹಿಳೆಯರು ಹಾಜರಿದ್ದರು, ರಾಜೇಶ್ವರಿ ಹಿರೇಮಠ ನಿರೂಪಿಸಿದರು, ಸುಮಂಗಲಾ ರಾಟಿಮನಿ ಸ್ವಾಗತಿಸಿದರು, ಇದಕ್ಕೂ ಪೂರ್ವದಲ್ಲಿ ಉಚಿತ ಆರೋಗ್ಯ ಶಿಬಿರ ಜರುಗಿತು.