ಮಹಿಳೆಯರ ಸಂಘಗಳು ಹೆಗಡೆ ಅವರ ಕನಸನ್ನು ನನಸು ಮಾಡಿದೆ: ಮಾಳಶೆಟ್ಟಿ
ಮಹಿಳೆಯರ ಸಂಘಗಳು ಹೆಗಡೆ ಅವರ ಕನಸನ್ನು ನನಸು ಮಾಡಿದೆ: ಮಾಳಶೆಟ್ಟಿWomen's associations have made Hegde's dream come true: malashetti
Lokadrshan Daily
1/5/25, 3:32 PM ಪ್ರಕಟಿಸಲಾಗಿದೆ
ಲೋಕದರ್ಶನ ವರದಿ
ಗದಗ 07: ಒಂದು ಸಂಸ್ಥೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಯಾವರೀತಿಯಾಗಿ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತೋರಿಸಿಕೊಟ್ಟಿದೆ ಎಂದು ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ ಅವರು ಹೇಳಿದರು.
ನಗರದ ವೀರನಾರಾಯಣ ಕಲ್ಯಾಣ ಮಂಟಪದಲ್ಲಿ ಇತ್ತೀಚಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಯುಕ್ತಾಶ್ರಯದಲ್ಲಿ ಜರುಗಿದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಹಿಳೆಯರ ಸ್ವಾವಲಂಬನೆ ಬದುಕಿಗಾಗಿ ರೂಪರೇಶಗಳನ್ನು ಸಿದ್ದಪಡೆಸಿ ಕಾರ್ಯಗೊಳಿಸುವ ಮೊದಲೇ ಸರಕಾರಗಳು ಬಿದ್ದು ಹೋಗುವ ಇಂದಿನ ದಿನಗಳಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆಯುವ ಮೂಲಕ ಧಮರ್ಾಧಿಕಾರಿ ವಿರೇಂದ್ರ ಹೆಗಡೆ ಅವರ ಕನಸನ್ನು ನನಸು ಮಾಡಿದೆ ಎಂದು ಹೇಳಿದರು.
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ ಅವರು ಮಾತನಾಡಿ, ನಾಡಿನ ಮಠ-ಮಂದಿರಗಳ ಶಿಕ್ಷಣ ಕ್ಷೇತ್ರಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಅಲ್ಲದೇ, ಹಣದಿಂದ ಚ್ಯುತಿ ಬರಬಾರದು ಎಂದು ಇಂತಹ ಕೆಲಸಕ್ಕೆ ಅವುಗಳು ಕೈಹಾಕಿಲ್ಲ. ಆದರೆ, ಪೂಜ್ಯಶ್ರೀ ವಿರೇಂದ್ರ ಹೆಗ್ಗಡೆ ಅವರು ನಾಡಿನಾದ್ಯಂತ ಸಾವಿರಾರು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ, ಅವುಗಳಲ್ಲಿರುವ ಸದಸ್ಯರ ಸುಮಾರು 12 ಸಾವಿರ ಕೋಟಿ ರೂಗಳಿಗೆ ಸಾಲಕ್ಕೆ ಅವರು ಜಾಮೀನುದಾರಾಗಿದ್ದಾರೆ. ಶ್ರೀಗಳ ದೃಷ್ಟಿಯಲ್ಲಿ ಸಂಘದ ಸದಸ್ಯರುಗಳು ಫಲಾನುಭವಿಗಳಲ್ಲ ಅವರು ಪಾಲುದಾರರು ಎಂದು ಹೆಮ್ಮೆಯಿಂದ ಹೇಳುತ್ತಾರೆ. ಧರ್ಮಸ್ಥಳದ ಧಾರ್ಮಿಕ ಕ್ಷೇತ್ರದಿಂದ ಅನ್ನ, ಅಭಯ, ವಿದ್ಯೆ ಹಾಗೂ ಆರೋಗ್ಯ ಚತುರ್ಥ ದಾನಗಳು ಶತಮಾನಗಳಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದರು.
ನರಗುಂದ ಪುಣ್ಯಾರಣ್ಯ ಪತ್ರಿವನಮಠದ ಪೂಜ್ಯಶ್ರೀ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಪತ್ರಕರ್ತ ಮಂಜುನಾಥ ಬಮ್ಮನಕಟ್ಟಿ ಅವರು ಅಧ್ಯಕ್ಷತೆವಹಿಸಿದ್ದರು. ಎಂ.ಎಂ.ಕಾಲೇಜಿನ ಕಾರ್ಯದರ್ಶಿ ನಾಗರಾಜ ಮೆಣಸಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಕಲಬುಗರ್ಿ, ಸಮಾಜಸೇವಕ ಅಬ್ದುಲ್ಮುನಾಫ್ ಮುಲ್ಲಾ, ಶ್ರೀರಾಮ ಸೇನೆ ಧಾರವಾಡ ವಿಭಾಗದ ಸಂಘಟನಾ ಕಾರ್ಯದಶರ್ಿ ರಾಜು ಖಾನಪ್ಪನವರ, ತಾಲ್ಲೂಕಾ ಯೋಜನಾಧಿಕಾರಿ ಸುಖೇಶ ಎ.ಎಸ್., ದಾವಲಸಾಬ ಈಟಿ, ಒಕ್ಕೂಟದ ಅಧ್ಯಕ್ಷರುಗಳಾದ ರೇಣುಕಾ ಕ್ಯಾಮನಗೌಡ್ರ, ಪಾರ್ವತಿ ಮುನವಳ್ಳಿ, ರಾಜೇಶ್ವರಿ ಹಬೀಬ, ಸುಜಾತಾ ಬಳ್ಳಾರಿ, ಪ್ರಭಾವತಿ ಬಳೂಟಗಿ, ರೇಣುಕಾ ಕರೋಷಿ, ರಂಜನಾ ಕೋಟಿ,ಲತಾ ಪತ್ತಾರ, ಸರೋಜಾ ಹಿರೇಮಠ, ಚನ್ನಮ್ಮ ಹುಳಕಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮೇಲ್ವಿಚಾರಕ ಅರುಣಕುಮಾರ ಕಾರ್ಯಕ್ರಮ ನಿರೂಪಿಸಿದರು.
ಒಕ್ಕೂಟಗಳ ಪದಗ್ರಹಣ ನೆರವೇರಿತು. ಇತ್ತೀಚಿಗೆ ಜರುಗಿದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ ಹಾಗೂ ಅರ್ಹ ಪಲಾನುಭವಿಗಳಿಗೆ ಮಾಸಾಶನ, ಶಿಷ್ಯವೇತನ, ವೀಲ್ಚೇರ್ಗಳನ್ನು ವಿತರಿಸಲಾಯಿತು. ಇದಕ್ಕೂ ಮೊದಲು ಬೆಳಿಗ್ಗೆ ಶುಭ ಮಹೋರ್ತದಲ್ಲಿ ಜಗದೀಶ ಕಲ್ಯಾಣಭಟ್ ಜೋಶಿ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು. ನೂರಾರು ವೃತದಾರಿಗಳು ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡಿದ್ದರು.