ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ

ಲೋಕದರ್ಶನ ವರದಿ

ಶೇಡಬಾಳ 25: ಮಹಿಳೆಯರು ನಿರೋಗಿಗಳಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವದರ ಜತೆಗೆ ಕರ ಕುಶಲ, ಗುಡಿ ಕೈಗಾರಿಕೆ ಮೊದಲಾದ ಉದ್ಯೋಗಗಳನ್ನು ಮಾಡಿ ಸ್ವಾವಲಂಬಿ ಜೀವನ ಸಾಗಿಸುವಂತೆ ಅಥಣಿ ತಾಲೂಕಾ ಸಕರ್ಾರಿ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಮುರಗೇಶ ಇಂಗಳೆ ಕರೆ ನೀಡಿದರು.

ಅವರು ಮಂಗಳವಾರ ದಿ. 25 ರಂದು ಶೇಡಬಾಳ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜ್ಞಾನ ವಿಕಾಸ ಮತ್ತು ಮಾತೋಶ್ರೀ ಕೇಂದ್ರದ ಆಶ್ರಯದಲ್ಲಿ ಜರುಗಿದ  ಮಹಿಳಾ ಸಬಲೀಕರಣ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರು ಉತ್ತಮ ಆರೋಗ್ಯವಂತರಾಗಿರಬೇಕಾದರೆ ಪೌಷ್ಠಿಕ ಆಹಾರ, ಹಸಿರು ಸೊಪ್ಪು, ಮೊಳಕೆ ಬರಿಸಿದ ಕಾಳು, ಹಣ್ಣು-ಹಂಪಲ ಸೇವನೆ ಮಾಡುವದರಿಂದ ಉತ್ತಮ ಆರೋಗ್ಯವಂತರಾಗಬಹುದೆಂದು ಹೇಳಿದರು. ಪರಿಸರ ಸ್ವಚ್ಛತೆ, ಶೌಚಾಲಯದ ಮಹತ್ವ, ಏಡ್ಸ್ ಅರಿವು, ಮೊದಲಾದ ರೋಗಗಳ ಕುರಿತು ವಿವರವಾಗಿ ಮಾತನಾಡಿದರು. 

ಜ್ಞಾನ ವಿಕಾಸ ಸಮನ್ವಯಾಧಿಕಾರಿ ದ್ರಾಕ್ಷಾಯಣಿ ಮಾತನಾಡಿ ಅಥಣಿ ತಾಲೂಕಿನಲ್ಲಿ 25 ಜ್ಞಾನ ವಿಕಾಸ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ ಒಂದರಂತೆ ಒಂದೊಂದು ಕೇಂದ್ರದಲ್ಲಿ ಮಹಿಳೆಯರಿಗಾಗಿ ವಿಶೇಷ ಶಿಬಿರವನ್ನು ಏರ್ಪಡಿಸಲಾಗುತ್ತಿದೆ. ಅದರಂತೆ ಶೇಡಬಾಳ ಜ್ಞಾನ ವಿಕಾಸ ಕೇಂದ್ರದಲ್ಲಿ ಕಸದಿಂದ ರಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿಯ ಮಹಿಳೆಯರು ಉತ್ತಮ ರೀತಿಯಲ್ಲಿ ಸ್ಪಂದಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. 

ಆಂತರಿಕ ಲೆಕ್ಕ ಪರಿಶೋಧಕರಾದ ಮಂಜುನಾಥ, ಮಂಗಸೂಳಿ ವಲಯದ ಮೇಲ್ವಿಚಾರಕರಾದ ಯಲ್ಲಪ್ಪಾ ಕೊಚ್ಚರಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈ ಸಮಯದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ದ್ರಾಕ್ಷಾಯಣಿ, ಆಂತರಿಕ ಲೆಕ್ಕ ಪರಿಶೋಧಕರಾದ ಮಂಜುನಾಥ, ಮಂಗಸೂಳಿ ವಲಯದ ಮೇಲ್ವಿಚಾರಕರಾದ ಯಲ್ಲಪ್ಪಾ ಕೊಚ್ಚರಗಿ, ಸೇವಾ ಪ್ರತಿನಿಧಿ ಭಾಗ್ಯಶ್ರೀ, ವಿಶ್ವಕರ್ಮ, ರಾಣಿ ಚೆನ್ನಮ್ಮ, ವಿಶ್ವನಾಥ, ಧನಲಕ್ಷ್ಮೀ, ಮಣಿಕಂಠ 5 ಸಂಘಗಳ ಸೇವಾಪ್ರತಿನಿಧಿ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು. ಸುಧಾ ಸ್ವಾಗತಿಸಿ ವಂದಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು .