ಮಹಿಳಾ ಕೃಷಿಕರ ದಿನಾಚರಣೆ

ಬೆಳಗಾವಿ :   ದಿ. 04.12.2019 ರಂದು ಬೆಳಗಾವಿ ತಾಲೂಕಿನ ಹೊಸವಂಟಮೂರಿ ಗ್ರಾಮದಲ್ಲಿ ನವ್ಯ ದಿಶಾ ಟ್ರಸ್ಟ್, ಕ್ರೆಡಿಟ್ಆಕ್ಸೆಸ್ ಗ್ರಾಮೀಣ್ ಲಿಮಿಟೆಡ ಬೆಳಗಾವಿ ಹಾಗೂ ಗ್ರಾಮ ಪಂಚಾಯತ ಹೊಸವಂಟಮುರಿ, ಕೆ.ಎಲ್.ಇ ಸಂಸ್ಥೆಯ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಬೆಳಗಾವಿ ಇವರ ಸಹಯೋಗದಲ್ಲಿ ಮಹಿಳಾ ಕೃಷಿಕರ ದಿನಾಚರಣೆಯ ಅಂಗವಾಗಿ ಕೃಷಿ ನಿರತ ಮಹಿಳೆಯರಿಂದ ಕಡಿಮೆ ಶ್ರಮದಾಯಕ ಯಂತ್ರೋಪಕರಣಗಳ ಬಳಕೆ ಕುರಿತು ಪ್ರತ್ಯಕ್ಷತೆ ಹಾಗೂ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳಗಿತ್ತು. 

ಕಾರ್ಯಕ್ರಮದಲ್ಲಿ ಶ್ರೀದೇವಿ ಆಂಗಡಿ ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಬೆಳಗಾವಿ ಮಾತನಾಡುತ್ತಾ ಮಹಿಳೆಯರು ಪುರಷರಗಿಂತ ಹಚ್ಚಿನ ಸಂಖ್ಯೆಯಲ್ಲಿ ಕೃಷಿಯಲ್ಲಿ ತೋಡಗಿರುತ್ತರೆ. ಇವರು ಕೃಷಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರಮವಹಿಸುತ್ತಾರೆ ಎಂದು ತಿಳಿಸುತ್ತಾ ಮಹಿಳೆಯರು ಕೃಷಿ ಮಾಡುವ ಸಂದರ್ಭದಲ್ಲಿ ತಾವುಗಳು ತಮ್ಮ ಕಾಳಜಿ ವಹಿಸಬೇಕು ಹಾಗೂ ಕಷಿ ಚಟುವಟಿಕೆಯಲ್ಲಿ ಕಡಿಮೆ ಶ್ರಮದಾಯಕ ಯಂತ್ರೋಪಕರಣಗಳ ಬಳಕೆ ಮತ್ತು ಕೆಲವೊಂದು ಆಧುನಿಕ ಕೃಷಿ ಯಂತ್ರೋಪಕರಣಗಳ ಬಗ್ಗೆ ಪರಿಚಯಿಸಿದ್ದರು ಅದೆರೀತಿ ಮಹಿಳೆಯರು ಪೌಷ್ಟಿಕಾಂಶ ಹೋಂದಿರುವ ಆಹಾರವನ್ನು ಸೇವಿಸಬೇಕು ಜೊತೆಗೆ ತಮ್ಮ ಮನೆ ಹಿತ್ತಲಿನಲ್ಲಿ ತರಕಾರಿಗಳನ್ನು ಬೆಳೆಸುವುದರ ಬಗ್ಗೆ ತಿಳಿಸಿದರು.

ಮತ್ತೊರ್ವ ಅಥಿತಿಗಳಾದ ಎಸ್ ವರಧ ಮಣ್ಣು ವಿಜ್ಞಾನಿಗಳು ಕೃಷಿ ವಿಜ್ಞಾನಕೆಂದ್ರ ಮತ್ತಿಕೊಪ್ಪ ಬೆಳಗಾವಿ ಮಹಿಳೆಯರಿಗೆ ಹಣಕಾಸಿನ ನಿರ್ವಹಣೆ ಹೇಗೆ ಮಾಡಬೇಕು ಮತ್ತು ಅದರಿಂದ ತಮಗೆ ಭವಿಷ್ಯತ್ತಿನಲ್ಲಿ ಕಷ್ಟದ ಸಮಯದಲ್ಲಿ ಉಪಯೋಗವಾಗುವುದು ಹಾಗೂ ಕೃಷಿ ಜೊತೆಗೆ ಬಿಡುವಿನ ಸಮಯದಲ್ಲಿ ಉದ್ಯೋಗ ಮಾಡುವುದಾಗಿ ತಿಳಿಸಿದರು. ಹಾಗೆ ಶಿವಕುಮಾರ ಹಲ್ಯಾಳಿ ನವ್ಯ ದಿಶಾ ಕಾರ್ಯಕ್ರಮದ ಪ್ರಾಸ್ಥಾವಿಕ ನುಡಿಗಳ ಜೊತೆಗೆ ನವ್ಯ ದಿಶಾ ಟ್ರಸ್ಟ್ದ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಸೇವಂತ ಕಟಾಬಳಿ, ಕಲ್ಲವ್ವಾ ನಾಯಕ, ಭೀಮರತಿ ಕಟಾಬಳಿ, ಭೂತರಾಮನಹಟ್ಟಿ ಗ್ರಾಮದ ಜನರು ಉಪಸ್ಥಿತರಿದ್ದರು ಶಿವಕುಮಾರ ಹಲ್ಯಾಳಿ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿ ವಂಧಿಸಿದರು.