ಮಾಧುಸ್ವಾಮಿ ವಿರುದ್ಧ ಮಹಿಳಾ ಆಯೋಗ ಸ್ವಯಂ ದೂರು ದಾಖಲಿಸಿ: ಬಿಎಸ್ಪಿ

ಬೆಂಗಳೂರು,  ಮೇ,  ರೈತ ಮಹಿಳೆಗೆ  ಅಶ್ಲೀಲವಾಗಿ ಟೀಕಿಸಿರುವ ಸಂಬಂಧ ಕಾನೂನು ಸಚಿವ  ಜೆ.ಸಿ.ಮಾಧುಸ್ವಾಮಿ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂ ದೂರು  ದಾಖಲಿಸಿಕೊಳ್ಳಬೇಕು. ಜೊತೆಗೆ, ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಬಹುಜನ  ಸಮಾಜ ಪಾರ್ಟಿ ಆಗ್ರಹಿಸಿದೆ.ನಗರದಲ್ಲಿಂದು ಬಿಎಸ್ಪಿ  ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಎಸ್ಪಿ ರಾಜ್ಯ ಉಸ್ತುವಾರಿ  ಮಾರಸಂದ್ರ ಮುನಿಯಪ್ಪ, ಮಾಧುಸ್ವಾಮಿಯವರ ಈ  ವರ್ತನೆಯನ್ನು  ಖಂಡಿಸಿ ಸಚಿವ ಸಂಪುಟದಿಂದ  ವಜಾಗೊಳಿಸುವಂತೆ ರಾಜ್ಯದಲ್ಲಿ ಅನೇಕ ಸಾಮಾಜಿಕ ಸಂಘಟನೆಗಳು ಪ್ರತಿಭಟನೆ  ನಡೆಸಿವೆ. ಅಲ್ಲದೆ, ಮಾಧುಸ್ವಾಮಿ ಕ್ಷಮಿಸಲು ಸಾಧ್ಯವಾಗದ ವರ್ತನೆಯನ್ನು ತೋರಿದ್ದಾರೆ  ಹೇಳಿದರು.ಸಚಿವರಾಗಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ   ಜನಗಳ ಸಮಸ್ಯೆಯನ್ನು  ಹೇಳುವಾಗ ಮಹಿಳೆಯ ಬಗ್ಗೆ ಬಹಳ ಅಗೌರವದಿಂದ  ಮಾತನಾಡಿದ   ಮಾಧುಸ್ವಾಮಿ ಅವರನ್ನು ಈ ಕೂಡಲೇ ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಮುಂದಾಗಬೇಕು. ಇಲ್ಲದಿದ್ದಲ್ಲಿ, ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.