ಮಹನೀಯರ ಮಾರ್ಗದರ್ಶನ ಒಂದಿದ್ದರೇ ಜಗತ್ತನ್ನೇ ಗೆಲ್ಲಬಹುದು : ಹಮೀದ ಮುಶ್ರೀಫ್
With the guidance of great people, one can conquer the world: Hameed Mushrif
ವಿಜಯಪುರ 04: ನಗರದ ಚಾಂದನಿ ಮಂಗಲ ಕಾರ್ಯಾಲಯ ಸುವಿಧಾ ಸಾಮಾಜಿಕ ಸಂಸ್ಥೆವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲಬಹಾದ್ಧೂರ ಶಾಸ್ತ್ರೀ ಅವರ ಜನ್ಮ ದಿನಾಚರಣೆ ಪ್ರಯುಕ್ತ ವಿಶ್ವಶಾಂತಿಗಾಗಿ ಕವಿಗೋಷ್ಠಿ (ಮುಶಾಯಿರಾ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ನಾವು ಯಾವುದೇ ಸಂದರ್ಭದಲ್ಲಿ ಒತ್ತಡಕ್ಕೆ ಮನಿಯದೇ ಬರುವ ಸಮಸ್ಯೆಯನ್ನು ಶಾಂತಿಯುತವಾಗಿ ಎದರುಸಿದರೇ ಮುಂಬರುವ ಸಮಸ್ಯೆಗೆ ವಿರಾಮ ಹೇಳಬಹುದು. ಇಂದಿನ ಯುವಕರು ಇದನ್ನು ಮನಗಂಡು ಮಹನೀಯರ ಮಾರ್ಗದರ್ಶನ ಒಂದಿದ್ದರೇ ಜಗತ್ತನ್ನೇ ಗೆಲ್ಲಬಹುದು ಎಂಬುದು ಅರಿಯಬೇಕು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಫಯಾಜ ಕಲಾದಗಿ ಮಾತನಾಡಿ, ಇಂದಿನ ಯುವ ಪೀಳಿಗೆಗೆ ದೇಶಕ್ಕಾಗಿ ತ್ಯಾಗ ಬಲಿದಾನ ಗೈದ ಮಾನ್ಯ ದಾರ್ಶನಿಕ ಹೆಜ್ಜೆಯನ್ನು ನಾವೆಲ್ಲರೂ ಸ್ಮರಿಸಬೇಕು. ದೇಶದ ಅಭಿವೃದ್ಧಿಗಾಗಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಯಾವುದೇ ದುಶ್ಚಟಕ್ಕೆ ಬಲಿಯಾಗದೇ ಸಮಾಜಕ್ಕೆ ನಾವೆಲ್ಲರೂ ಸಂದೇಶ ಸಾರವಂತ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆ ನಮ್ಮ ರಾಷ್ಟ್ರೀಯ ನಾಯಕರಾದ ಮಹಾತ್ಮಾ ಗಾಂಧೀಜಿ, ಶಾಸ್ತ್ರೀಯವರ ಕೊಡುಗೆ ಅನನ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಎಂ.ಸಿ. ಮುಲ್ಲಾ ಮಾತನಾಡಿದರು. ವೇದಿಕೆಯ ಮೇಲೆ ಎಸ್.ಎಮ್. ಪಾಟೀಲ (ಗಣಿಯಾರ) ಆಝಾದ ಪಟೇಲ, ಸಜ್ಜಾದೇಪೀರ ಮುಶ್ರೀಫ್, ಶಂಕರಗೌಡ ಹಿರೇಗೌಡರ, ಜಮೀರ ಭಾಂಗಿ, ಮೋಮಿನ ಕಲಾದಗಿ, ಇದ್ರೂಸ್ ಭಕ್ಷಿ, ಎಸ್.ಎ. ಜಮಾದಾರ, ಶಬ್ಬೀರ ಡಲಾಯತ, ಇಲಿಯಾಸ್ ಸಿದ್ಧೀಕಿ, ಮಹಾದೇವ ರಾವಜಿ, ಜಮೀರ ಗೋಲೆವಾಲೆ, ಹಮೀದ ಅಥಣಿ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಗುಲ್ಬಾರ್ಗಾ, ಶಿವಮೊಗ್ಗಾ, ಬೀದರ, ಸೊಲಾಪೂರ ಕವಿಗಳು ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಎಚ್.ಎಸ್. ಕಬಾಡೆ, ಮಹ್ಮದ್‌ನಸ್ಸೀಂ ರೋಜಿನದಾರ, ಮಹ್ಮದಸಾದೀಕ ಜಾನ್ವೇಕರ, ಅಕ್ತರಹುಸೇನ ಮುತವಲ್ಲಿ, ದಾದಾಪೀರ ಮುಜಾವರ, ಸಂತೋಷ ಮುಧೋಳ, ಫಿದಾ ಕಲಾದಗಿ, ಅಕ್ರಮ ಮಾಶ್ಯಾಳಕರ, ಅನ್ವರ ಜಮಾದಾರ,ದಸ್ತಗೀರ ಸಾಲೋಟಗಿ, ದಸ್ತಗೀರ ಶಾನವಾಲೆ, ಅಬೂಬಕರ್ ಅಂಬರಖಾನೆ, ಅಬ್ದುಲನಬಿ ಜಮಾದಾರ, ಲತೀಫ್ ಕಲಾದಗಿ, ಎಸ್.ಕೆ. ಇನಾಮದಾರ, ಪರವೇಜ ಕಲಾದಗಿ, ಆಝಮ್ ಶೇಖ ಮುಂತಾದವರು ಇದ್ದರು. ಸಾಯೆಫ್ ಅವಟಿ ನಿರೂಪಿಸಿದರು. ಮುಜಿಮಿಲ್ ಮುಲ್ಲಾ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 