ಶಿಕ್ಷಣದೊಂದಿಗೆ ಸಂಸ್ಕಾರ ಬೇರೆತರೆ ಬದುಕು ಸುಂದರವಾಗುತ್ತದೆ
With education, life becomes beautiful, different from culture.
ಮಹಾಲಿಂಗಪುರ 01 : ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಮೊಬೈಲ್ ಗಿಳು ಅಂಟಿಸಿಕೊಂಡಿದ್ದು ಅದಕ್ಕೆ ಶಾಲಾ ವ್ಯವಸ್ಥೆಯೂ ಕಾರಣ ಆಗುತ್ತಿರುವುದು ವಿಷಾದದ ಸಂಗತಿ, ಮಕ್ಕಳಿಗೆ ಹೋಮವರ್ಕ ಮೊಬೈಲಗೆ ಬಿಡುವುದು ಅನಿವಾರ್ಯವಾದರೆ ಮೊಬೈಲ್ ಮೂಲಕ ಪಾಠ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದ ಮಕ್ಕಳು ಸಂಸ್ಕಾರ ಮರೆಯುತ್ತಿದ್ದು. ಅವರಿಗೆ ಪಾಠದ ಜ್ಯೋತೆ ಸಂಸ್ಕಾರ ಕಲಿಸಿದರೆ ಬದುಕು ಸುಂದರವಾಗುತ್ತದೆ ಎಂದು ರಬಕವಿಯ ಬ್ರಹ್ಮಾನಂದ ಮಠದ ಪ ಪೂ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸ್ಥಳೀಯ ಶ್ರೀ ಬನಶಂಕರಿ ಶಾಲೆಯ 34ನೇ ವಾರ್ಷಿಕ ಸ್ನೇಹ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿ ತಾಯಿ ತಂದೆ ಗುರುವಿನ ಕೃಫ ಇದ್ದರೆ ಮಕ್ಕಳ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ ಶಿಕ್ಷಣವಂತ ಮಕ್ಕಳಿಂದ ಮಾತ್ರ ದೇಶದ ಅಭಿವೃದ್ದಿಸಾಧ್ಯ. ನಮ್ಮ ಶಾಲೆಯಲ್ಲಿ ಅತಿ ಕಡುಬಡವರ ಮಕ್ಕಳು ಶಾಲೆ ಬರುತ್ತಿರುವುದರಿಂದ ಅವರಿಗೆ ಶಿಕ್ಷಣದಲ್ಲಿ ಯಾವ ಕೋರತೆಯಾಗದ ರೀತಿಯಲ್ಲಿ ನಮ್ಮ ಸಂಸ್ಥೇ ನಡೆದುಕೊಳ್ಳುತ್ತಿದೆ. ಬರೀ ಹಣಕ್ಕಾಗಿ ಶಾಲೆ ನಡೆಸದೆ ಬಡವಿದ್ಯಾರ್ಥಿಗಳ ಏಳ್ಗೆಗಾಗಿ ಶಾಲೆ ನಡೆಸಲಾಗುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಬಸಣ್ಣಗೌಡ ಪಾಟೀಲ,ಶಂಕರಗೌಡ ಪಾಟೀಲ, ಮಲ್ಲು ದಲಾಲ, ಬಸವರಾಜ ಬಂಡಿವಡ್ಡರ, ಅರವಿಂದ ಮಾಲಬಸರಿ,ಜಗದೀಶ ಜಕ್ಕಣ್ಣವರ, ಶ್ರೀಮತಿ ಅರುಣಾ ಅಂಗಡಿ, ಪತ್ರಕರ್ತರಾದ ಜಯರಾಮ ಶೆಟ್ಟಿ, ಮಹೇಶ ಆರಿ, ಮೀರಾ ತಟಗಾರ, ನಾರಾಯಣಗೌಡ ಉತ್ತಂಗಿ, ಹಣಮಂತ ನಾವಿ, ಲಕ್ಷ್ಮಣ ಕಿಶೋರ, ಶ್ರೀಶೈಲ ಹಳ್ಳಿ, ಪ್ರಾಚಾರ್ಯ ಗೀತಾ ಪಾಟೀಲ ಮಾನಿಂಗ ಶಿವಣಗಿ, ನಾಗರಾಜ್ ಬಡಿಗೇರ್ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 