ಆಟದಲ್ಲಿ ಸೋಲುಹಿಗೆಲುವು ಮುಖ್ಯವಲ್ಲ ಭಾವಹಿಸುವುದು ಮುಖ್ಯ: ಡಾ. ತೇಜಸ್ವಿನಿ ನಾರಾಯಣಕರ
Winning and losing in a game is not important, but playing is important: Dr. Tejaswini Narayanakar
ಆಟದಲ್ಲಿ ಸೋಲುಹಿಗೆಲುವು ಮುಖ್ಯವಲ್ಲ ಭಾವಹಿಸುವುದು ಮುಖ್ಯ: ಡಾ. ತೇಜಸ್ವಿನಿ ನಾರಾಯಣಕರ
ಧಾರವಾಡ, 15 ; ಕರ್ನಾಟಕ ಸರ್ಕಾರ ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ, ಧಾರವಾಡ ಹಾಗೂ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಬಾಲಕರ ಬಾಲಕಿಯರ ಚೆಸ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಡಾ. ತೇಜಸ್ವಿನಿ ನಾರಾಯಣಕರ ಇವರು ತಾಲೂಕು ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಚೆಸ್ ಆಟವು ಚಾಕ ಚಕ್ಕತೆಯಿಂದ ಕೂಡಿದ್ದು, ಮೆದುಳುಳನ್ನು ಚುರುಕು ಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಕವಾದ ಶಕ್ತಿ ನೀಡುವ ಆಟವಾಗಿದೆ ಎಂದರು. ಎಲ್ಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾಗಿ ಬರಲೆಂದು ಶುಭ ಹಾರೈಸಿದರು. ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ಆಯೋಜಿಸಿದ ಹಾಗೂ ಶ್ರೀ ಸಾಯಿ ಕಾಲೇಜಿನ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಅಸಾಧ್ಯ ಎನ್ನುವುದು ಯಾವುದೂ ಇಲ್ಲ, ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಹೊರಾಂಗಣ ಕ್ರೀಡೆಗಳ ಜೊತೆಗೆ ಒಳಾಂಗಣ ಕ್ರೀಡೆಗಳು ಅತಿ ಮುಖ್ಯ ಎಂದರು.
ತಾಲೂಕು ಮಟ್ಟದಲ್ಲಿ ಜಯಶಾಲಿಯಾಗಿ ಬಂದ ಎಲ್ಲ ವಿದ್ಯಾರ್ಥಿಗಳು ಇಂದು ಜಿಲ್ಲಾ ಮಟ್ಟದಲ್ಲಿ ಭಾಗವಿಹಿಸುತ್ತಿರುವಿರಿ, ಇಲ್ಲಿಯೂ ಗೆದ್ದು ಮುಂದೆ ಸಾಗಿರಿ ಎಂದು ನುಡಿದರು.ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯನ್ನು ಡಾ. ವೀಣಾ ಬಿರಾದಾರ ಹಾಗೂ ಡಾ. ತೇಜಸ್ವಿನಿ ನಾರಾಯಣಕರ ಇವರು ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಂದೀಶ ಕಾಖಂಡಕಿ ಪ್ರಾಚಾರ್ಯರು, ಜಿಲ್ಲಾ ಕ್ರೀಡಾ ಸಂಚಾಲಕರು, ಆಯ್. ಆರ್. ಹುಬ್ಬಳ್ಳಿ ಅಧ್ಯಕ್ಷರು, ಧಾರವಾಡ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಹಾಗೂ ಜಿಲ್ಲಾ ಕ್ರೀಡಾ ಸಹ ಸಂಚಾಲಕರು, ಆಗಮಿಸಿದ್ದರು. ಸಂಸ್ಥೆಯ ನಿರ್ದೇಶಕರಾದ, ಡಾ. ಎಸ್.ಬಿ. ಗಾಡಿ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ, ಸ್ಪರ್ಧಾಳುಗಳು, ನಿರ್ಣಾಯಕರು ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರು ಉಪಸ್ಥಿತರಿದ್ದರು. ಮಂಜುನಾಥ ಸೋಲಾರಗೊಪ್ಪ ಕಾರ್ಯಕ್ರಮ ನಿರೂಪಿಸಿದರು, ಡಾ. ಬಾಪುಸಾಬ ಮೊರಂಕರ ಸ್ವಾಗತಿಸಿದರು ಮತ್ತು ಸಾಯಿ ಮಹಾವಿದ್ಯಾಲಯದ ಪ್ರಾಚಾರ್ಯರಾದ, ನಾಗರಾಜ ಶಿರೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ವಂದಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 