ನವದೆಹಲಿ, ಜ.23 : ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮಹಿಳಾ ಟಿ-20 ವಿಶ್ವಕಪ್ ಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದ್ದು, ತಂಡದಲ್ಲಿ ದಿಯಾಂಡ್ರಾ ಡಾಟಿನ್, ಲೀ ಆನ್ ಕಿರ್ಬಿ ಸ್ಥಾನ ಪಡೆದಿದ್ದಾರೆ.
ಬಲ ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಡಾಟಿನ್ ಅವರು ಕಳೆದ ಒಂದು ವರ್ಷದಿಂದ ಮೈದಾನಕ್ಕೆ ಇಳಿದಿಲ್ಲ. ಇವರು ಫೆಬ್ರವಾರಿ 2019ರಲ್ಲಿ ಕೊನೆಯ ಬಾರಿಗೆ ವಿಂಡೀಸ್ ಜೆರ್ಸಿ ತೊಟ್ಟು ಅಂಗಳಕ್ಕೆ ಇಳಿದಿದ್ದರು. ಕಿರ್ಬಿ ಅವರು 12 ವರ್ಷದ ಬಳಿಕ ತಂಡ ಸೇರಿದ್ದಾರೆ. ಇವರು 2008ರಲ್ಲಿ ತಮ್ಮ ಕೊನೆಯ ಟಿ-20 ಪಂದ್ಯ ಆಡಿದ್ದರು. ತವರಿನಲ್ಲಿ ಭಾರತ ವಿರುದ್ಧದ ಸರಣಿಯಿಂದ ದೂರ ಉಳಿದಿದ್ದ ಸ್ಟಫಾನಿ ಟೇಲರ್ ತಂಡ ಸೇರಿಕೊಂಡಿದ್ದಾರೆ.
ತಂಡ: ಸ್ಟಫಾನಿ ಟೇಲರ್, ಆಲಿಯಾ ಅಲ್ಲೆನ್, ಶೆಮೈನ್ ಕ್ಯಾಂಪ್ಬೆಲ್ಲೆ, ಶಮಿಲಿಯಾ ಕೊನೆಲ್, ಬ್ರಿಟ್ನಿ ಕೂಪರ್, ದಿಯಾಂಡ್ರಾ ಡಾಟಿನ್, ಅಫಿ ಫ್ಲೆಚರ್, ಚೆರ್ರಿ-ಆನ್ ಫ್ರೇಸರ್, ಶೆನೆಟಾ ಗ್ರಿಮಂಡ್, ಚಿನೆಲ್ಲೆ ಹೆನ್ರಿ, ಲೀ-ಆನ್ ಕಿರ್ಬಿ, ಹೇಲಿ ಮ್ಯಾಥ್ಯೂಸ್, ಅನಿಸಾ ಮೊಹಮ್ಮದ್, ಚೆಕೇಲ್ ನೇಷನ್