ನಾರ್ಥ್ ಸೌಂಡ್, ಆ 21 ಈಗಾಗಲೇ ಹಲವು ದಾಖಲೆಗಳನ್ನು ಬರೆದು ಜಾಗತಿಕ ಕ್ರಿಕೆಟ್ನಲ್ಲಿ ಮುಂಚೂಣಿಯಲ್ಲಿರುವ ಭಾರತ ತಂಡದ ಉತ್ಸಾಹಿ ನಾಯಕ ವಿರಾಟ್ ನಾಳೆಯಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧ ದಾಖಲೆ ನಿಮರ್ಿಸುವ ಹೊಸ್ತಿಲಲ್ಲಿ ಇದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗಿ ಈಗಾಗಲೇ 18 ಶತಕ ಸಿಡಿಸಿರುವ ರನ್ ಮಿಷನ್ ಕೊಹ್ಲಿ, 19 ಶತಕ ಗಳಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಸರಿದೂಗಿಸಲು ಇನ್ನೂ ಕೇವಲ ಒಂದೇ-ಒಂದು ಶತಕ ಅಗತ್ಯವಿದೆ. ಒಂದು ವೇಳೆ ನಾಳೆ ಸರ್ ವಿವಿಯನ್ ರಿಚಡ್ರ್ಸ ಕ್ರೀಡಾಂಗಣದಲ್ಲಿ ಆರಂಭವಾಗುವ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದರೆ ಪಾಂಟಿಂಗ್ ಜತೆಗೆ ವಿರಾಟ್ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಹಂಚಿಕೊಳ್ಳಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರು 109 ಪಂದ್ಯಗಳಿಂದ 25 ಶತಕ ಸಿಡಿಸಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಇದರಲ್ಲಿ 17 ಶತಕಗಳು ವಿದೇಶಿ ನೆಲದಲ್ಲಿ ಮೂಡಿ ಬಂದಿವೆ. ಒಟ್ಟಾರೆ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಯಲ್ಲಿ 25 ಶತಕ ಸಿಡಿಸಿದ್ದು, ಇದರಲ್ಲಿ ಆರು ದ್ವಿಶತಕಗಳೂ ಒಳಗೊಂಡಿವೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡ ಈಗಾಗಲೇ ಆತಿಥೇಯರ ವಿರುದ್ಧ ಟಿ-20 ಹಾಗೂ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ನಾಳೆಯಿಂದ ಆರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿ ಗೆದ್ದು ಟೆಸ್ಟ್ ಚಾಂಪಿಯನ್ಶಿಪ್ ಅಭಿಯಾನದಲ್ಲಿ ಶುಭಾರಂಭ ಮಾಡುವ ಕನಸಿನಲ್ಲಿ ಭಾರತ ಕನಸು ಕಾಣುತ್ತಿದೆ.