ನವದೆಹಲಿ, ಏಪ್ರಿಲ್ 5 ತಾವು ಸೇರಿದಂತೆ ಪ್ರತಿಯೊಬ್ಬರೂ ಆಯೋಧ್ಯೆಯಲ್ಲಿ ರಾಮ ಮಂದಿರ ನಿಮಾರ್ಣವಾಗಬೇಕು ಎಂಬ ಪರವಾಗಿದ್ದೇವೆ, ಆದರೆ, ತಾವು ಸುಪ್ರೀಂ ಕೋರ್ಟ್ ಯಾವ ತೀರ್ಮಾನ ಕೈ ಗೊಳ್ಳ ಲಿದೆ. ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೇವಲ ನಾನೊಬ್ಬನೇ ಆಲ್ಲ, ಪ್ರತಿಯೊಬ್ಬರೂ ರಾಮ ಮಂದಿರ ನಿಮಾರ್ಣವಾಗಬೇಕುಎಂದು ಬಯಸುತ್ತಿದ್ದಾರೆ. ಸಮಸ್ಯೆಗೆ ಸುಪ್ರೀಂ ಕೋರ್ಟ್ ಯಾವ ರೀತಿಯ ಪರಿಹಾರ ಸೂಚಿಸಲಿದೆ ಎಂಬದಕ್ಕಾಗಿ ಮಾತ್ರ ಕಾಯುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ, ಚುನಾವಣೆಗೆ ಮುನ್ನ ಎಬಿಪಿ ನ್ಯೂಸ್ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಕಟಿಸಿರುವ ಪ್ರಣಾಳಿಕೆಯನ್ನು ಟೀಕಿಸಿರುವ ಅವರು, ಕಾಂಗ್ರೆಸ್ ದೇಶದ ಸೇನಾ ಪಡೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಅಪಮಾನ ಮಾಡಿದೆ. ಪ್ರತ್ಯೇಕವಾದಿಗಳು ದೇಶದ ಬಗ್ಗೆ ಬಳಸುವ ಭಾಷೆಗೆ ಕಾಂಗ್ರೆಸ್ ಪ್ರಣಾಳಿಕೆಯ ಭಾಷೆಯ ಧ್ವನಿ ಹೋಲಿಕೆಯಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದರು. ಕಾಶ್ಮೀರ ಕುರಿತಂತೆ ಮಾತನಾಡಿದ ಪ್ರಧಾನಿ, ಪಿಡಿಪಿ ಜೊತೆಗಿನ ಬಿಜೆಪಿ ಮೈತ್ರಿ ಸರ್ಕಾರ ಕಲಬೆರಕೆಯ ಸರ್ಕಾರ ಎಂದು ವಿಶ್ಲೇಷಿಸಿದರು ಉತ್ತರ ಪ್ರದೇಶದಲ್ಲಿ ಈಗ ಯಾವುದೇ ರೀತಿಯ ಆಡಳಿತ ವಿರೋಧಿ ಅಲೆ ಇಲ್ಲ. ಸಮಾಜವಾದಿ ಪಕ್ಷ ಹಾಗೂ ಬಿಎಸ್ಪಿ ಒಟ್ಟುಗೂಡಿರುವುದು ಸಾರ್ವಜನಿಕ ಅಭಿಪ್ರಾಯ ಎಂದು ಯಾರೂ ಭಾವಿಸಬೇಕಿಲ್ಲ ಎಂದು ಉತ್ತರಿಸಿದರು. ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶ ಕುರಿತು ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸ ಬಹುದು . ಯಾರು ಎಲ್ಲಿಂದ ಸ್ಪರ್ಧಿಸಿದರು , ನಾನೇನು ಭಯಪಡುವವನಲ್ಲ, ಇದು ನನಗೆ ಸಂಬಧಿಸಿದ ವಿಷಯವಲ್ಲ ಎಂದರು.