ಯಾರೆಲ್ಲಾ ಸಚಿವರಾಗುತ್ತಾರೆ ಎಂಬುದು ಸೋಮವಾರ ಮಧ್ಯಾಹ್ನ ತಿಳಿಯಲಿದೆ: ಯಡಿಯೂರಪ್ಪ

ಬೆಂಗಳೂರು, ಆ 18         ಸಚಿವ ಸಂಪುಟ ಮಂಗಳವಾರ ಮಧ್ಯಾಹ್ನ ನಡೆಯಲಿದೆ. ಈಗಾಗಲೇ ಈ ಬಗ್ಗೆ ಅಮಿತ್ ಷಾ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ದೆಹಲಿಯಿಂದ ಕಳೆದ ರಾತ್ರಿ ನಗರಕ್ಕೆ ಆಗಮಿಸಿದಾಗ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ಸೋಮವಾರವಲ್ಲ ಮಂಗಳವಾರ ವಿಸ್ತರಣೆಯಾಗಲಿದೆ. ಸಂಪುಟದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದು ಸೋಮವಾರ ಮಧ್ಯಾಹ್ನದ ಹೊತ್ತಿಗೆ ತಿಳಿಯಲಿದೆ ಎಂದು ತಿಳಿಸಿದರು.   ಯಡಿಯೂರಪ್ಪಗೆ ಮೋದಿ ಬಳಿ ಹಣ ಕೇಳಲು ತಾಕತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಧ್ಯಯನ ತಂಡ ವರದಿ ಕೊಡದೆ ಪರಿಹಾರ ಕೊಡಲು ಸಾಧ್ಯವಿದೆಯೇ? ಸಿದ್ದರಾಮಯ್ಯ ಅದನ್ನು ತಿಳಿದುಕೊಳ್ಳಬೇಕು. ಪರಿಹಾರ ಹಣ ಬಿಡುಗಡೆಯಾದ ಮೇಲೆ ಅವರಿಗೆ ಅರ್ಥ ಆಗಲಿದೆ ಎಂದರು. ಪ್ರತಿ ಕುಟುಂಬಕ್ಕೆ 10 ಸಾವಿರ ಪರಿಹಾರ ನೀಡುವುದು ವಿಳಂಬ ಆಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಯಡಿಯೂರಪ್ಪ, ಈ ಬಗ್ಗೆ ನಾವು ಆದಷ್ಟು ಬೇಗ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ. ತಕ್ಷಣ ಸ್ಪಂದಿಸುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ. ಜನರು ಧೃತಿಗೆಡುವುದು ಬೇಡ. ಸರ್ಕಾರ ನಿಮ್ಮ ಜೊತೆ ಇದೆ ಎಂದು ಆಶ್ವಾಸನೆ ನೀಡಿದರು. ನೆರೆ ಹಾನಿ ವಿಚಾರವಾಗಿ ಪ್ರಧಾನಿ ಮತ್ತು ಗೃಹ ಸಚಿವರ ಜೊತೆ ಸುದೀರ್ಘವಾಗಿ ಚರ್ಚೆ ಆಗಿದೆ. ಇನ್ನೊಂದೆರಡು ಮೂರು ದಿನದಲ್ಲಿ ಪರಿಹಾರ ಕಾರ್ಯ ಚುರುಕಾಗಲಿದೆ. ರಾಜ್ಯದ ಪ್ರವಾಹ ಪೀಡಿತ ಪ್ರದೇಶಕ್ಕೆ ಮತ್ತೆ ಭೇಟಿ ಕೊಡುತ್ತೇನೆ ಎಂದರು. ದೂರವಾಣಿ ಕದ್ದಾಲಿಕೆ ಬಗ್ಗೆ ಕೇಳಿದಾಗ, ಈ ಬಗ್ಗೆ ನಾಳೆ ಅಧಿಕಾರಿಗಳೊಂದಿಗೆ ಚಚರ್ೆ ನಡೆಸಿ ಮುಂದಿನ ತೀಮರ್ಾನ ಕೈಗೊಳ್ಳುತ್ತೇನೆ ಎಂದರು.