'ಮನೆ ಮಾರಾಟಕ್ಕಿದೆ' ಟ್ರೇಲರ್ ಬಿಡುಗಡೆ ಮಾಡೋದು ಯಾರು?

ಬೆಂಗಳೂರು, ನ 07:      ಒಬ್ಬರು ಅಥವಾ ಇಬ್ಬರು ಹಾಸ್ಯ ಕಲಾವಿದರಿದ್ದರೆ ಒಂದು ಚಿತ್ರ ಲವಲವಿಕೆಯಿಂದ, ಗಲಗಲಿಸುತ್ತದೆ   ಹೀಗಿರುವಾಗ ಪ್ರಮುಖ ಹಾಸ್ಯ ನಟರೆಲ್ಲರೂ ಒಗ್ಗೂಡಿದರೆ ಹೇಗಿರಬೇಡ? ಶ್ರಾವಣಿ ಸುಬ್ರಹ್ಮಣ್ಯ ಖ್ಯಾತಿಯ ನಿರ್ದೇಶಕ ಮಂಜು ಸ್ವರಾಜ್ ಈ ಪ್ರಯತ್ನ ಮಾಡಿದ್ದು, ಕಂಪ್ಲೀಟ್ ಕಾಮಿಡಿ ಪ್ಲಸ್ ಹಾರರ್ ಮಜಾ ಇರುವ 'ಮನೆ ಮಾರಾಟಕ್ಕಿದೆ' ಚಿತ್ರ ನಿರ್ಮಿಸಿದ್ದು,  ಇಂದು ಟ್ರೇಲರ್ ಬಿಡುಗಡೆಯಾಗಲಿದೆ. ಆದರೆ ಟ್ರೇಲರ್ ಬಿಡುಗಡೆ ಮಾಡೋದು ಯಾರು ಎಂಬ ವಿಷಯವನ್ನು ಇನ್ನೂ ರಿವೀಲ್ ಮಾಡದ ನಿರ್ದೇಶಕರು, 'ನೀವೇ ಗೆಸ್ ಮಾಡಿ' ಎಂದು ಟ್ವೀಟ್ ಮಾಡಿದ್ದರು.  "ಮನೆ_ಮಾರಾಟಕ್ಕಿದೆ" ಚಿತ್ರದ ಟ್ರೈಲರ್ ಈ ಗುರುವಾರ ದೊಡ್ಡ ಸ್ಟಾರ್ ಒಬ್ಬರ ಅದೃಷ್ಟ ಹಸ್ತದಿಂದ ಬಿಡುಗಡೆ. ಆ ಸ್ಟಾರ್ ಯಾರೆಂದು ಗೆಸ್ ಮಾಡಿ ಕಾಮೆಂಟ್ ಹಾಕಿ ಎಂದಿದ್ದರು.   ಹಲವರು ಇದಕ್ಕೆ 'ಡಿ ಬಾಸ್' ಎಂದು ಕಮೆಂಟ್ ಹಾಕಿದ್ದಾರೆ.  ಟ್ರೇಲರ್ ವೀಕ್ಷಿಸುವ ಜತೆಗೆ ಚಿತ್ರ ಯಾವಾಗ ಬಿಡುಗಡೆಯಾದೀತು ಎಂಬ ಕುತೂಹಲದಲ್ಲಿ ಪ್ರೇಕ್ಷಕರಿದ್ದಾರೆ. ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಮೊದಲಾದವರಿದ್ದಾರೆ.