ಹುಕ್ಕೇರಿ ಕೆಎಂಎಫ್ ನಂದಿನಿ ಮಿಲ್ಕ್ ಲೀ ಗೆ 6ರೂ ದುಬಾರಿ ಮಾರಾಟ ಕೇಳುವವರು ಯಾರು?
Who is asking for a hefty price of Rs 6 for KMF Nandini Milk Lee?
ಹುಕ್ಕೇರಿ 25: ನಂದಿನಿ ಮಿಲ್ಕ್ ದುಬಾರಿ ಹಣ, ಪ್ರಶ್ನಿಸಿದ್ದಕ್ಕೆ ಗ್ರಾಹಕರ ಮೇಲೆ ಹಾಗೂ ಪತ್ರಕರ್ತರಿಗೆ ಧಮ್ಕಿ ಹಾಗೂ ಹಲ್ಲೆ. ನಗರದ ಹುಕ್ಕೇರಿಯ ಬಸ್ ನಿಲ್ದಾಣದ ಹತ್ತಿರ ಇರುವ ನಂದಿನಿ ಮಳಿಗೆಯಲ್ಲಿ,ಕೆಎಂಎಫ್ ನಂದಿನಿ ಹಾಲೂ ಹಾಗೂ ಮೊಸರು ಮಾರಾಟಗಾರರು ಪ್ರತಿ ಲೀಟರ್ ಗೆ 6 ರೂಪಾಯಿ ದುಬಾರಿ ಹೆಚ್ಚು ವರಿ ಹಣ ತೆಗೆದುಕೊಳ್ಳುತ್ತಿದ್ದಾರೆ, ಎಂಬ ಮಾಹಿತಿ ಮೆರೆಗೆ, ಗ್ರಾಹಕರು ಹೆಚ್ಚುವರಿ ಹಣ ಏಕೆ ತೆಗೆದುಕೊಳ್ಳುತ್ತೀರಿ ಎಂದು ಕೇಳಿದಾಗ. ಅಂಗಡಿ ಮಾಲಿಕ ರಾಜಾರೋಷವಾಗಿ ರೂಮ್ ಬಾಡಿಗೆ, ಫ್ರಿಡ್ಜ್ ಲೈಟ್, ಬಿಲ್ ಹಾಗೂ ನಾವು ಮೂರು ಜನರ ಸಂಬಳ ತೆಗೆದುಕೊಳ್ಳುತ್ತೇವೆ ಅಂತ ನೇರವಾಗಿ ಹೇಳ್ತಿದ್ದಾನೆ. ನಾನು ಹೆಚ್ಚುವರೆ ಹಣ ನೀಡುವುದಿಲ್ಲ ನಾನು ನಿಮ್ಮ ಮೇಲೆ ಕಂಪ್ಲೇಟ್ ಮಾಡುತ್ತೇನೆ ಎಂದಾಗ ಗ್ರಾಹಕನಿಗೆ ಅವಾಚ್ಯವಾದ ಶಬ್ದದಿಂದ ನಿಂದಿಸಿ ನೀ ಏನಾದರೂ ಮಾಡಿಕೋ ಎಂದು ವಾದ ವಿವಾದವಾಯಿತು.
ಗ್ರಾಹಕರು 112 ಗೆ ಕರೆ ಮಾಡಿ ದೂರು ನಿಡಿರುತ್ತಾರೆ 112 ಪೊಲೀಸರು ಬಂದು ಗ್ರಾಹಕರ ಜೊತೆ ಮಾತನಾಡಿ ಅಂಗಡಿ ಅವರಿಗೆ ತಿಳಿಹೇಳಿದಾಗ ಕೇಳದ ಅಂಗಡಿಯವರಿಗೆ ಪೊಲೀಸ್ ಠಾಣೆ ಮೆಟ್ಟಿಲು ಏರಬೇಕಾಯಿತು ಇನ್ನು ಮುಂದೆ ಹುಕ್ಕೇರಿ ಪೊಲೀಸರು ಯಾವ ರೀತಿ ಕ್ರಮ ಜರುಗಿಸುತ್ತಾರೆ ಅಥವಾ ಹೆಚ್ಚುವರಿ ಹಣ ಪಡೆಯುವವರಿಗೆ ಕುಮ್ಮಕ್ಕು ನೀಡುತ್ತಾರೆಯೇ ಎಂಬುದು ಕಾದು ನೋಡಬೇಕು ಪ್ರತಿಷ್ಠಿತ ಕೆಎಂಎಫ್ ಮಂಡಳಿಯವರು ನಿರ್ದೇಶಕರು ನಂದಿನಿ ಹಾಲಿನ ಉತ್ಪಾದಕರು ಇವರ ಮೇಲೆ ಯಾವ ರೀತಿ ಕ್ರಮ ಜರುಗಿಸುತ್ತಾರೆ ಎಂಬುದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ದುಬಾರಿ ಹಣ ಹಾಗೂ ಅವಾಚ್ಯವಾಗಿ ನಿಂದಿಸಿದ ಪ್ರಕರಣಕ್ಕೆ ನಾಂದಿ ಹಾಡುತ್ತಾರೆಯೇ ಅಥವಾ ಇತಿಶ್ರೀ ಹಾಡಿ ಕೈ ಬಿಡುತ್ತಾರೆಯೇ ಕಾದು ನೋಡಬೇಕಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 