ನಾಗರಾಜ್ ಹರಪನಹಳ್ಳಿ
ಕಾರವಾರ,29: ಮತದಾನಕ್ಕೆ ಶಾಲಾ ಕೋಣೆಗಳನ್ನು ಬಳಸಲಾಗುತ್ತಿದ್ದು, ಮತದಾನದ ಕೊಠಡಿಗಳಿಗೆ ನಿಧರ್ಿಷ್ಟ ಬಣ್ಣ ಬಳಿಯಲಾಗುತ್ತಿದೆ. ಇದು ಭಾರತ ಚುನಾವಣಾ ಆಯೋಗದ ಆದೇಶ. ಶಾಲೆಗಳ ಸಿಬ್ಬಂದಿ ಕೋಣೆಗೆ ಬಣ್ಣ ಬೇಡ ಎನ್ನುವಂತಿಲ್ಲ. ಆದರೆ ಆತಂಕದ ಸಂಗತಿಯೆಂದರೆ, ಮತದಾನಕ್ಕೆ ಮೊದಲೇ ನಿಗದಿಯಾದ ಶಾಲೆಯ ಕೋಣೆಗಳಲ್ಲಿ ನಲಿ ಕಲಿ ಕೋಣೆಯ ಚಿತ್ರಗಳಿಗೆ ಈಗ ಸಂಚಕಾರ ಬಂದಿದೆ. ಹಾಗೆ ಬಝಾರ್ ಶಾಲೆಯ ಸ್ಮಾರ್ಟಕ್ಲಾಸ್ ಇದ್ದ ಕೋಣೆಯನ್ನು ಮತದಾನದ ಕೊಠಡಿಗಾಗಿ ಬಿಟ್ಟುಕೊಡಬೇಕಿದೆ. ಸ್ಮಾರ್ಟ ಕ್ಲಾಸ್ನ್ನು ಮೊದಲಿನಂತೆ ಹೊಂದಿಸಿಕೊಳ್ಳಬೇಕಲ್ಲ ಎಂಬ ಚಿಂತೆ ಶಾಲೆಯ ಪೋಷಕರದ್ದು. ದಾನಿಗಳ, ಪೋಷಕರ ಮತ್ತು ಶಿಕ್ಷಕರೇ ಸ್ವಂತ ಖಚರ್ಿನಿಂದ ಸಾವಿರಾರು ರೂ.ವೆಚ್ಚ ಮಾಡಿ ರೂಪಿಸಿಕೊಂಡ ಸಕರ್ಾರಿ ಶಾಲೆಯ ಸ್ಮಾರ್ಟ ಕ್ಲಾಸ್ ಹೊರತು ಪಡಿಸಿ ಪಕ್ಕದ ಕೋಣೆಯನ್ನು ಪಡೆಯಲು ಅಧಿಕಾರಿಗಳು ಒಪ್ಪಲಿಲ್ಲ. ಒಮ್ಮೆ ನಿಗದಿಯಾದ ಕೋಣೆಯನ್ನು ಯಾವುದೇ ಕಾರಣಕ್ಕೂ ಬದಲಿಸಲು ಸಾಧ್ಯವೇ ಇಲ್ಲ ಎಂದು ನಿರಾಕರಿಸಿದ ಘಟನೆ ಶುಕ್ರವಾರ ನಡೆಯಿತು. ಸ್ಮಾರ್ಟ ಕ್ಲಾಸ್ನಲ್ಲಿನ ಕಂಪ್ಯೂಟರ್ ಮತ್ತು ಡೆಸ್ಕ ತೆಗೆದಿಟ್ಟುಕೊಳ್ಳುವಂತೆ ಅಧಿಕಾರಿಗಳು ಶಿಕ್ಷಕರಿಗೆ ಸೂಚಿಸಿದರು.
ಕಾರವಾರ ನಗರದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಬಝಾರ್ ಶಾಲೆಯೆಂದೇ ಪ್ರಸಿದ್ಧವಾಗಿದೆ. ಈ ಶಾಲೆ 1927ರಲ್ಲಿ ಪ್ರಾರಂಭವಾದುದು. ಕೂಲಿ ಕಾಮರ್ಿಕರ ಮಕ್ಕಳೇ ಇಲ್ಲಿ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅಚಲ ಭಾರತಿ ರೂಪಿಸಿರುವ ಸಾಫ್ಟವೇರ್ನ್ನು ಸ್ಮಾರ್ಟಕ್ಲಾಸ್ಗೆ ಬಳಸಲಾಗಿದೆ. ಗಣಿತ ಮತ್ತು ಇಂಗ್ಲೀಷ್ ಕಲಿಕೆ ಇದರಿಂದ ಸುಲಭವಾಗಿದ್ದು, ಮಕ್ಕಳ ಐಕ್ಯೂ ಹೆಚ್ಚಿದೆ. ಆದರೆ ಆ ಕ್ಲಾಸ್ ಈಗ ಮತದಾನಕ್ಕೆ ಬಳಕೆಯಾಗುತ್ತಿದ್ದು, ಅಲ್ಲಿನ ಕಂಪ್ಯೂಟರ್ ಡೆಸ್ಕನ್ನು ಪಕ್ಕದ ಕೋಣೆಗೆ ಸ್ಥಳಾಂತರಿಸಬೇಕಿದೆ. ನಲಿ ಕಲಿ ಕೋಣೆಯ ಚಿತ್ರಗಳು ಮತ್ತು ಆ ಕೋಣೆಯ ಹೊರ ಆವರಣದ ಚಿತ್ರಗಳನ್ನು ಚುನಾವಣಾ ಆಯೋಗದ ಸೂಚಿಸಿರುವ ಐವರಿ ವೈಟ್ ಮತ್ತು ನೀಲಿ ಬಣ್ಣ ಮುತ್ತಿಕೊಳ್ಳಲಿದೆ.
ಕಾರವಾರ ತಾಲೂಕಿನಲ್ಲಿ ಒಟ್ಟು 90:
ಕಾರವಾರ ನಗರ ಸೇರಿದಂತೆ ಗ್ರಾಮೀಣ ಭಾಗದ 90 ಶಾಲೆಗಳನ್ನು ಮತದಾನಕ್ಕೆ ಬಳಸಲಾಗುತ್ತಿದೆ. 90 ಶಾಲೆಗಳ ಒಂದರೆಡು ಮತ್ತು ಕೆಲವು ಕಡೆ ಮೂರು ಕೋಣೆಗಳನ್ನು ಮತದಾನ ಕೇಂದ್ರ (ಬೂತ್)ಗಳಾಗಿವೆ. ಈಗ ಆ ಕೋಣೆಗಳಿಗೆ ಚುನಾವಣಾ ಆಯೋಗ ಸೂಚಿಸಿದ ಬಣ್ಣ ಬಳಿಯುವ ಕಾರ್ಯ ಶುಕ್ರವಾರದಿಂದ ಪ್ರಾರಂಭವಾಗಿದೆ. ನಿಮರ್ಿತಿ ಕೇಂದ್ರ ಅಡಿ ಬಣ್ಣ ಬಳಿಯುವ ಗುತ್ತಿಗೆದಾರರಿಗೆ ಈ ಕಾರ್ಯ ಜವಾಬ್ದಾರಿ ನೀಡಿದ್ದು, 5 ತಂಡಗಳು ಶಾಲಾ ಮತದಾನ ಕೇಂದ್ರಗಳಿಗೆ ಬಣ್ಣ ಬಳಿಯಲು ಪ್ರಾರಂಭಿಸಿದೆ. ಶುಕ್ರವಾರ ನಗರದ ಬಝಾರ್ ಶಾಲೆ ಮತ್ತು ಶಾರದಾ ಮಂದಿರ ಸಕರ್ಾರಿ ಶಾಲೆಗಳ ಕೋಣೆಗಳಿಗೆ ಬಣ್ಣ ಹಚ್ಚುವ ಪ್ರಕ್ರಿಯೆ ಪ್ರಾರಂಭವಾಗಿದೆ. ನಲಿ ಕಲಿ ಕೋಣೆಯ ಚಿತ್ರಗಳು ಬಣ್ಣದಲ್ಲಿ ಮುಳುಗಿಹೋಗಲಿವೆ ಎಂಬ ಆತಂಕದ ದೂರನ್ನು ಅಪರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಶಿಕ್ಷಕರು ಲಿಖಿತ ಅಜರ್ಿಯ ಮೂಲಕ ಮುಟ್ಟಿಸಿದರು. ತತ್ ಕ್ಷಣ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರರು ಚುನಾವಣಾ ಆಯೋಗದ ಕಟ್ಟುನಿಟ್ಟಿನ ಸೂಚನೆಯನ್ನು ಶಿಕ್ಷಕರಿಗೆ, ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಮಸ್ಯೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಅವರಿಗೂ ತಲುಪಿತು. ತಕ್ಷಣ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆದು ಶಾಲಾ ಕೋಣೆಗಳಲ್ಲಿ ಇದ್ದ ಚಿತ್ರಗಳನ್ನು ಪುನಃ ಬಿಡಿಸಿಕೊಡಲು ತಗುಲುವ ವೆಚ್ಚದ ಅಂದಾಜು ವೆಚ್ಚ ನೀಡಿ. ಅವುಗಳನ್ನು ಮೊದಲಿದ್ದ ಹಾಗೆ ರೂಪಿಸಿಕೊಡೋಣ ಎಂಬ ಸಲಹೆ ನೀಡಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಅಂತೂ ಚುನಾವಣಾ ಆಯೋಗ ಮತಗಟ್ಟೆಗಳಿರುವ ಶಾಲೆಗಳಲ್ಲಿ ಮತದಾನ ನಡೆಯುವ ಕೋಣೆಗಳನ್ನು ಸಹ ವಿಶೇಷ ಬಣ್ಣದಿಂದ ಅಲಂಕರಿಸಿ, ಅವುಗಳನ್ನು ಮತದಾರರು ತಕ್ಷಣ ಗುರುತಿಸುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಮತಗಟ್ಟೆಗಳಿರುವ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ , ಶೌಚಾಲಯ ವ್ಯವಸ್ಥೆ, ಅಲ್ಲಿನ ವಿದ್ಯುತ್ ವ್ಯವಸ್ಥೆ ಸರಿ ಇಲ್ಲದಿದ್ದರೆ ಅದರ ರಿಪೇರಿ ಕಾರ್ಯವನ್ನು ಸಹ ಕೈಗೆತ್ತಿಕೊಂಡಿದೆ. ಶೌಚಾಲಗಳನ್ನು ಸಹ ಬಣ್ಣದಿಂದ ಅಲಂಕರಿಸಲು ಸೂಚಿಸಲಾಗಿದೆ. ವಿದ್ಯುತ್ ವ್ಯವಸ್ಥೆ, ಅಲ್ಲಿನ ಬಲ್ಬ್ ವ್ಯವಸ್ಥೆಯನ್ನು ಸಹ ಹಾಕಿಕೊಡಲು ಚುನಾವಣಾ ಆಯೋಗ ಮುಂದಾಗಿದೆ. ಚುನಾವಣಾ ಕರ್ತವ್ಯಕ್ಕೆ ಬರುವ ಸಿಬ್ಬಂದಿಗೆ ಯಾವುದೇ ತೊಂದರೆ ಆಗಬಾರದು. ಅವರಿಗೆ ಶಾಲೆಯಲ್ಲಿ ವಸತಿ ವ್ಯವಸ್ಥೆ ಸಹ ಸರಿ ಇರಬೇಕು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.